Showing posts with label ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ vijaya vittala NINNA DARUSHANAKE BANDAVANALLAVO PUNYAVANTARA. Show all posts
Showing posts with label ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ vijaya vittala NINNA DARUSHANAKE BANDAVANALLAVO PUNYAVANTARA. Show all posts

Sunday 7 November 2021

ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ankita vijaya vittala NINNA DARUSHANAKE BANDAVANALLAVO PUNYAVANTARA

ರಾಗ ಮೋಹನಕಲ್ಯಾಣಿ    ತಾಳ ಛಾಪು 




ನಿನ್ನ ದರುಶನಕೆ ಬಂದವನಲ್ಲವೊ
ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ

ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ
ಇಲ್ಲಿಗೆ ಬರುವ ಕಾರಣವಾವುದೊ
ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ
ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1

ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ
ಮರಳಿ ಗಾವುದ ಎಣಿಸಿ ಬರಲ್ಯಾತಕೊ
ನೆರೆ ನಂಬಿದವರಿಗೆ ಆವಲ್ಲಾದರೇನು
ಅರಿದವರ ಮನದೊಳಗೆ ನಿಂದಾಡುವ ಚಂದವಾ 2

ಕಠಿನವೊ ನಿನ್ನ ಭಕುತರನ ನೋಡುವ ಲಾಭ
ಸಟೆಯಲ್ಲಾ ವೇದಗಳು ಸಾರುತಿವಕೊ
ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ
ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3

ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು
ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ
ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ
ಏನೇನು ಮಾಡಿದರು ಇಷ್ಟು ಜನ ಕೂಡುವದೇ4

ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ
ನೀನಿದ್ದ ಸ್ಥಾನದಲಿ ಸರ್ವತೀರ್ಥ
ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು
ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5

ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ
ನಿದರುಶನವಲ್ಲದೆ ಮಿಗಿಲಾವುದೊ
ಪದೋಪದಿಗೆ ಮಧ್ವಮತ ಹೊಂದಿದ ಸುಜನರ
ಹೃದಯದೊಳಗಾನಂತಪರಿ ನಿನ್ನ ರೂಪಗಳು 6

ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ
ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ
ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
***


ಶ್ರೀ ವಿಜಯದಾಸರು ಒಮ್ಮೆ ತಿರುಪತಿಗೆ ಬಂದು ಪುರಂದರ ದಾಸರ ಮಂಟಪ ದಲ್ಲಿಳಿದರು.

ಶ್ರೀನಿವಾಸನ ಸ್ತೋತ್ತಗಳನ್ನು ಹಾಡಿದರು. ಆಗ ಬ್ರಹ್ಮೋತ್ಸವದ ಕಾಲವಾದರಿಂದ ಗರ್ಭಾಂಕಣಕ್ಕೆ ಪ್ರವೇಶಿಸಿ ದೇವರ ದರ್ಶನ ಮಾಡಲು ಅವಕಾಶ ದೊರೆಯದೆ ಎಲ್ಲರಿಗೂ ತೊಂದರೆ ಯಾಗಿತ್ತು. ಶ್ರೀನಿವಾಸನ ದರ್ಶನಕ್ಕೆ ಕಾದಿದ್ದ ಜನ ಸಮೂಹವನ್ನು ನೋಡಿ ದೇವರನ್ನು ಉದ್ದೇಶಿಸಿ ಹೀಗೆ ಹಾಡಿದರು.
****

Ninna darushanakke bandavanallavo / punyavanthara divya charana nodalu bande
maha punyavanthara divya charana nodalu bande ||

Yelli nodalu neena vyapthanagiralikke illige baha karanavahudo
Sollige kambadolu thorida maha mahima alli illenayya balla bakuthara janarige||1||

karadagale oodi bandhodaguvo deva marali gavudha venisi baralathako
nera nambidavarigavalli aadare yenu anthavara manadalli nindhaduvo chandavaa ||2||

dhyanakke silukuve ninna kanali bahudo gyaninagalu yenithu baru vallige
aanantha janmadali japathapa vratha homa yenu madidharishtu jana kooduvaro devaa||3||

Neenidha sthanadali sarva punyakshethra, neenidha sthanadali sakala theertha
neenidha sthanadali samastha thaathvikaru, nanitha baruvudo ninage theliyade swami ||4||

idane lalisu jeeya ninna donde moorthy nidarshana valade migilavudo
pade pade madhwa matha pondidha sujanara hrudayadali bandondhu pari ninna roopangalaa||5||

Bhalire thirumala raya ninna karunarasakke nelagaane nelagaane nere horeyali
olidu bhakutharigagi maguve avanisikonda sulabha devara deva vijaya vittalaa venkata||6||
***

pallavi

ninna darushanake bandavanallavO puNyavantara divya caraNa nODali bande

caraNam 1

ellelli ninna vyAptatanaviralikke illige baruva kAraNavAvudO
sollige kambhadi tOrida mahA mahima alli illEnayyA balla bhajakarigE

caraNam 2

karedAgale ODi bandoduguva svAmi maraLi gAvudaveNisi baralyAtakO
nere nambidavarige AvalliyAdare Enu aridavara manadoLage nindADuva cendava

caraNam 3

kaThiNavO ninna bhakutaranu nODuva lAbha saTeyalla vEdagaLu sArutiveyO
vaTu modalAga vaiSNavAgrEsharanghri thruTiyAdaru sOkalu gatige dAri

caraNam 4

dhyAnakke silukuvavane ninna kANali bahudu jnAnigaLu entu baruvarO allige
ananta janumadalli japa tapa hOma vrata EnEnu mADidaru iSTu jana kUDuvade

caraNam 5

nInidda sthAnadali sakala puNya kSEtra nInidda sthAnadali sarva tIrtha
nInidda sthAnadali samastha tAtvikaru nAnitta varuvadu ninage tiLiyade svAmi

caraNam 6

idane pAlisu gIyA ninndondE mUrti nidarshanavallade migilAvudO
pade pade madhva matava pondida sujanara hrdayadoLagananta pari ninna rUpagaLu

caraNam 7

bhaLirE tirumalarAya ninna karuNArasake nelagANe nele nere horeyoLu
olidu bhakutarigAgi madhuve hammikoNDa sulabha dEvara dEva vijayaviThala venakTa
***

ಮುಖಾರಿ ರಾಗ, ಝಂಪೆ ತಾಳ (raga, taala may differ in audio)

ನಿನ್ನ ದರುಶನಕೆ ಬಂದವನಲ್ಲವೊ|
ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ||

ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು |
ಇಲ್ಲಿಗೇ ಬರುವ ಕಾರಣವಾವುದೋ |
ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ |
ಎಲ್ಲಿಲ್ಲವೋ ನೀನು ಬಲ್ಲ ಭಕುತರಿಗೆ ||೧||

ಕರೆದಾಗಲೇ ಓಡಿ ಬಂದೊದಗುವ ಸ್ವಾಮಿ |
ಮರಳಿ ಗಾವುದವೆಣಿಸಿ ಬರಲ್ಯಾತಕೆ |
ನೆರೆನಂಬಿದವರಿಗಾವಲ್ಲಿಯಾದರೆ ಏನೊ |
ಅರಿತವರ ಮನದಲ್ಲಿ ನಲಿದಾಡುವ ಚೆಲುವ ||೨||

ಕಠಿಣವೋ ನಿನ್ನ ಭಕುತರ ನೋಡುವ ಲಾಭ |
ಸಟೆಯಿಲ್ಲ ವೇದಗಳು ಸಾರುತಿಹವೋ |
ವಟು ಮೊದಲಾದ ಸದ್ವೈಷ್ಣವರ ದಿವ್ಯಾಂಘ್ರಿ|
ತೃಟಿಯಾದರೆನಗೆ ಸೋಂಕಲು ಗತಿಗೆ ದಾರಿ ||೩||

ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ |
ನೀನಿದ್ದ ಸ್ಥಾನದಲಿ ಸಕಲ ತೀರ್ಥ |
ನೀನಿದ್ದ ಸ್ಥಾನದಲು ಸರ್ವ ಸಾತ್ವಿಕರುಂಟು |
ನಾನಿಂತು ಬಂದದ್ದು ನಿನಗೆ ತಿಳಿಯದೆ ಸ್ವಾಮಿ ||೪|

ಧ್ಯಾನಕೆ ಸಿಲುಕುವೆಡೆ ನಿನ್ನ ಕಾಣಲಿಬಹುದು
ಜ್ಞಾನಿಗಳು ಬರುವರೆಂತೋ ಅಲ್ಲಿ
ಅನಂತ ಜನ್ಮದಲಿ ಜಪತಪ ವ್ರತಹೋಮ |
ಏನು ಮಾಡಿದರಿಷ್ಟು ಜನ ಕೂಡುವುದೊ ದೇವ ||೫||

ಭಳಿರೆ ತಿರುಮಲರಾಯ ನಿನ್ನ ಕರುಣಾರಸಕೆ |
ನೆಲೆಗಾಣೆ ನೆಲೆಗಾಣೆ ಈ ಧರೆಯೊಳು |
ಒಲಿದು ಭಕ್ತರಿಗಾಗಿ ಮದುವೆ ಹಬ್ಬಿಸಿಕೊಂಡೆ |
ಸುಲಭ ದೇವರದೇವ ವಿಜಯ ವಿಠಲರೇಯ ||೭||

ಎಂದು ಹಾಡಿದರು ಮತ್ತು ತಮಗೆ ದರ್ಶನ ಭಾಗ್ಯ ನೀಡಲಿಲ್ಲವೆಂಬುದಕ್ಕಾಗಿಯೋ ಎಂಬಂತೆ ಸ್ವಾಮಿಯನ್ನು ಮೂದಲಿಸಿದಂತೆ ಈ ಕೆಳಗಿನ ಪದವನ್ನು ಹಾಡಿದರು.

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|1

ತನ್ನ ನೋಡೇನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರುಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|2

ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|3|
ಎಂದು ಮಂಗಳಹಾಡಿ ತಮ್ಮ ಮಂಟಪಕ್ಕೆ ಬಂದರು.
***


ನಿನ್ನ ದರುಶನಕೆ ಬಂದವನಲ್ಲವೊ
ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ||pa||

ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ
ಇಲ್ಲಿಗೆ ಬರುವ ಕಾರಣವಾವುದೊ
ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ
ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ||1||

ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ
ಮರಳಿ ಗಾವುದ ಎಣಿಸಿ ಬರಲ್ಯಾತಕೊ
ನೆರೆ ನಂಬಿದವರಿಗೆ ಆವಲ್ಲಾದರೇನು
ಅರಿದವರ ಮನದೊಳಗೆ ನಿಂದಾಡುವ ಚಂದವಾ ||2||

ಕಠಿನವೊ ನಿನ್ನ ಭಕುತರನ ನೋಡುವ ಲಾಭ
ಸಟೆಯಲ್ಲಾ ವೇದಗಳು ಸಾರುತಿವಕೊ
ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ
ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ||3||

ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು
ಜ್ಞಾನಿಗಳು ಎನಿತು ಬರುವರೊ ಅಲ್ಲಿಗೆ
ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ
ಏನೇನು ಮಾಡಿದರು ಇಷ್ಟು ಜನ ಕೂಡುವದೇ||4||

ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ
ನೀನಿದ್ದ ಸ್ಥಾನದಲಿ ಸರ್ವತೀರ್ಥ
ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು
ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ||5||

ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ
ನಿದರುಶನವಲ್ಲದೆ ಮಿಗಿಲಾವುದೊ
ಪದೋಪದಿಗೆ ಮಧ್ವಮತ ಹೊಂದಿದ ಸುಜನರ
ಹೃದಯದೊಳಗಾನಂತಪರಿ ನಿನ್ನ ರೂಪಗಳು||6||

ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ
ನೆಲೆಗಾಣೆನೆಲೆ ನೆರೆಹೊರೆಯೊಳು
ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ
ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ||7||
***


ವೊಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡೆ
ಸುಲಭ ದೇವರದೇವ ವಿಜಯವಿಠ್ಠಲ ವೇಂಕಟ|