Showing posts with label ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲ purandara vittala. Show all posts
Showing posts with label ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲ purandara vittala. Show all posts

Friday, 6 December 2019

ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲ purandara vittala

ಪುರಂದರದಾಸರು
ರಾಗ ಸೌರಾಷ್ಟ್ರ ಅಟ ತಾಳ 

ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ ನಿಶ್ಚಯವೆಚ್ಚರಿಕೆ ||ಪ||
ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕ್ಕೆ ಮೆಚ್ಚು ಕೇಳೆಚ್ಚರಿಕೆ ||ಅ||

ಪೊಡವಿಪನೊಲುಮೆಯ ಕಡುನೆಚ್ಚಿ ಗರ್ವದಿ ನಡೆಯದಿರೆಚ್ಚರಿಕೆ
ಕೊಡನ ಅಂಧಕ ಪೊತ್ತು ನಡೆವಂತೆ ಅಧಿಕಾರ ಕಡೆಯಲ್ಲಿ ಎಚ್ಚರಿಕೆ
ಕಡುಚಳಕನು ತಾನೆನುತ್ತ ಪರರ ಅವಘಡಿಸದಿರೆಚ್ಚರಿಕೆ
ಬಡಬಗ್ಗರ ಬಾಯ ಬಡಿದು ಪಾಪದಿ ಹೆಜ್ಜೆ ಇಡಬೇಡ ಎಚ್ಚರಿಕೆ ||

ದೊರೆ ಎನ್ನ ಬಲವು ಸುಸ್ಥಿರವೆಂದೆಲ್ಲರ ಹಗೆ ತರವಲ್ಲ ಎಚ್ಚರಿಕೆ
ಉರಗನ ಮುತ್ತಿ ಕಟ್ಟಿರುವೆಯು ಕೊರೆದಂತ ತೆರನಪ್ಪುದೆಚ್ಚರಿಕೆ
ಕರವ ಮುಗಿದು ಸಜ್ಜನರಿಗೆ ಶಿರ ಬಾಗಿ ಚರಿಸುತಿರೆಚ್ಚರಿಕೆ
ಸಿರಿಸೊಡರಿಗೆ ಗುರುಹಿರಿಯರ ಅವಮಾನ ಬಿರುಗಾಳಿ ಎಚ್ಚರಿಕೆ ||

ಲೋಕಾಪವಾದಕೆ ಅಂಜಿ ನಡೆವುದು ವಿವೇಕ ಕೇಳೆಚ್ಚರಿಕೆ
ನಾಕೇಶಗಾದರು ಬಿಡದಪಕೀರ್ತಿ ಪರಾಕು ಕೇಳೆಚ್ಚರಿಕೆ
ಕಾಕು ಜನರ ಚಾಡಿ ನೀ ಕೇಳಿ ಕೋಪೋದ್ರೇಕ ಬೇಡೆಚ್ಚರಿಕೆ
ಭೂಕಾಂತೆ ನಡುನಡುಗುವಳು ನಿಷ್ಠುರವಾದ ವಾಕು ಬೇಡೆಚ್ಚರಿಕೆ ||

ನಳಮಾಂಧಾತರೇನಾದರೆಂಬುದ ನೀ ತಿಳಿದು ನೋಡೆಚ್ಚರಿಕೆ
ಅಳಿವುದು ಕಾಯವು ಉಳಿವುದೊಂದೇ ಕೀರ್ತಿ ಇಳೆಯೊಳಗೆಚ್ಚರಿಕೆ
ಅಳಲಿಸಿ ಪರರನು ಗಳಿಸಿ ತಂದರ್ಥವು ಉಳಿಯದು ಎಚ್ಚರಿಕೆ
ಉಳಿದಲ್ಪ ಕಾಲವು ಧರ್ಮದ ಹಾದಿಯ ಹಳಿಯಬೇಡೆಚ್ಚರಿಕೆ ||

ಪರಸತಿ ಧನ ಅಪಹರಿಸಲು ಸಿರಿ ಮೊಗದಿರುಹುವಳೆಚ್ಚರಿಕೆ
ನೆರೆ ಛಿದ್ರಕುಂಭದ ನೀರಿನಂತಾಯುಷ್ಯ ಸರಿಯುತಿದೆಚ್ಚರಿಕೆ
ಬರುವ ಹಾನಿ ವೃದ್ಧಿ ತನ್ನ ಕಾಲವ ಮೀರಲರಿಯದು ಎಚ್ಚರಿಕೆ
ವರದ ಪುರಂದರವಿಠಲನ ಚರಣವ ಮರೆಯದಿರೆಚ್ಚರಿಕೆ ||
***

pallavi

neccadIri bhAgya yArigU sthiravilla nishcayaveccarike

anupallavi

heccade higgade iddare lOkakke meccu kELeccarike

caraNam 1

poDavipanolumeya kaDu necci garvadi naDeyadireccarike
koDana andhaka pottu naDEvante adhikAra kaDEyalli eccarike
kaDu caLakanu tAnenutta parara avaghaDisadireccarike
baDabaggara bAya baDidu pApadi hejje iDabEDa eccarike

caraNam 2

dore enna balavu su-sthiravendallara hage taravalla eccarike
uragana mutti kaTTIruveyu koredanta teranappudeccarike
karava mugidu sajjanarige shira bAgi sarisutireccarike
sirisoDarige guru hiriyara avamAna birugALi eccarike

caraNam 3

lOkApavAdake anji naDEvudu vivEka kELeccarike
nA kEshagAdaru biDadapa kIrti parAku kELeccarike
kAku janara cADi nI kELi kOpOdrEka bEDeccarike
bhUkAnte naDanaDuguvaLu niSTUravAda vAku bEDeccarike

caraNam 4

naLa mandAdarEnAdarembuda nI tiLidu nODaeccarike
aLivudu kAyavu uLivudonde kIrti iLeyoLageccarike
aLasili pararanu gaLisi tandarttavu uLiyadu eccarike
uLidalla kAlavu dharmada hAdiya haLiya bEDeccarike

caraNam 5

para sati dhana apaharisalu siri mogadiruhuvaLeccarike
nere chidrakumbhada nIrinantAyuSya sariyutideccarike
baruva hAni vrddhi tanna kAlava mIralariyadu eccarike
varada purandara viTTalana caraNava mareyadireccarike
***

ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲನೆಚ್ಚದಿರೆಚ್ಚರಿಕೆಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆಮೆಚ್ಚು ಕೇಳೆಚ್ಚರಿಕೆ ಪ.

ಪೊಡವಿಪರೊಲೂಮೆ ಸುಸ್ಥಿರವೆಂದು ಗರ್ವದಿನೆಡೆಯದಿರೆಚ್ಚರಿಕೆಕೊಡವನಂಧಕ ಪೊತ್ತು ನಡೆವಂತೆ ಅಧಿಕಾರಕಡೆಉಒಲ್ಲ ಎಚ್ಚರಿಕೆಕಡುಚಪಲನು ತಾನೆಂದು ಪರರವಗಡಿ ಸದಿರೆಚ್ಚರಿಕೆಬಡವರೆಡರ ಲಾಲಿಸದೆಮುಂದಕ್ಕಿ ಹೆಚ್ಚುಇಡಬೇಡವೆಚ್ಚರಿಕೆ 1

ದೊರೆಗಳ ಒಲವಲಂಯಂತೆಂದಲ್ಲರೊಳುಹಗೆತರವಲ್ಲ ಎಚ್ಚರಿಕೆಉರಗನ ಮುತ್ತಿ ಕಟ್ಟಿರುವೆಯು ಕೊರೆದಂಥತೆರನಪ್ಪುದೆಚ್ಚರಿಕೆಗುರುಹಿರಿಯರ ಕಂಡು ಚರಣಕೆ ಶಿರಬಾಗಿನಡೆಯುತಿರೆಚ್ಚರಿಕೆಸಿರಿಯೆಂಬ ಸೊಡರಿಗೆ ಮಾನ್ಯರ ಅವಮಾನಬಿರುಗಾಳಿ ಎಚ್ಚರಿಕೆ 2

ಲೋಕಾಪವಾದಕೆ ಅಂಜಿ ನಡೆಯುವುದು ವಿವೇಕ ಕೇಳಚ್ಚರಿಕೆನಾಕೇಂದ್ರನಾದರೂ ಬಿಡದಪಕೀರ್ತಿ ಪರಾಕು ಕೇಳೆಚ್ಚರಿಕೆಕಾಕು ಮನುಜರಕೊಂಡೆಯ ಕೇಳೀ ಕೋಪದುದ್ರೇಕ ಬೇಡೆಚ್ಚರಿಕೆಭೂಕಾಂತೆ ನಡು - ನಡುಗುವಳು ನಿಷ್ಠುರವಾದವಾಕುಕೇಳೆಚ್ಚರಿಕೆ3

ನಳ - ಮಾಂಧಾತರೆಂಬವರೇನಾದರುತಿಳಿದು ನೋಡೆಚ್ಚರಿಕೆಅಳಿವುದು ಈ ದೇಹ ಉಳಿವೂದೆಂದೇ ಕೀರ್ತಿಇಳೆಯೊಳಗೆಚ್ಚರಿಕೆಅಳಲಿಸಿ ಪರರನು ಗಳಿಸಿದಂಥ ಹೊನ್ನುಉಳಿಯದು ಎಚ್ಚರಿಕೆಉಳಿದಲ್ಪಕಾಲದಿ ಬಡವರಾದವರನುಹಳಿಯದಿರೆಚ್ಚರಿಕೆ 4

ಪರಸತಿ - ಪರಧನಕಳುಪಲು ಸಿರಿಮೊಗದಿರುಹುವಳಚ್ಚರಿಕೆನೆರೆ ಛಿದ್ರಕುಂಭದ ನೀರಿನಂತಾಯುಷ್ಯಸರಿಯುವುದೆಚ್ಚರಿಕೆಬರುವ ಹಾನಿವೃದ್ಧಿ ತನ್ನ ಕಾಲದ ಮೀರಲರಿಯದು ಎಚ್ಚರಿಕೆವರದ ಪುರಂದರವಿಠಲರಾಯನಮರೆಯದಿರೆಚ್ಚರಿಕೆ 5
********