Showing posts with label ಎಷ್ಟೋ ಹರಿಮರುತರ ಕೃಪಿ ನಿನ್ನಲ್ಲಿ pranesha vittala. Show all posts
Showing posts with label ಎಷ್ಟೋ ಹರಿಮರುತರ ಕೃಪಿ ನಿನ್ನಲ್ಲಿ pranesha vittala. Show all posts

Sunday, 10 November 2019

ಎಷ್ಟೋ ಹರಿಮರುತರ ಕೃಪಿ ನಿನ್ನಲ್ಲಿ ankita pranesha vittala

by ಪ್ರಾಣೇಶದಾಸರು
ಎಷ್ಟೋ ಹರಿಮರುತರ ಕೃಪಿ ನಿನ್ನಲ್ಲಿ |ಕೆಟ್ಟುದೇ ಭೂಷಣವಾಗಿಹುದೋ ಪಾರ್ವತೀ ರಮಣ ಪ

ವಿಷವನ್ನೆ ಭೋಜನ ಮಾಡಿ ಜೀರ್ಣಿಸಿಕೊಂಡಿ |ವಸನಬಿಟ್ಟು ಜಿನಸ್ಥಿ ಭಸ್ಮ ಧರಿಸಿ ||ವೃಷಭವಾಹನನಾಗಿ ಭೂತ ಪ್ರೇತಗಳೊಳು ಸ್ಮ |ರಿಸದ ಭೂಮಿಯೊಳಿರಲು ಪೂಜಿಪರು ಸುರರೆಲ್ಲ 1

ತಂದೆ ತಲೆ ಕಡಿದುದಕೆಕುಂದುಹೊಂದದಲಿದ್ದೆ |ನಿಂದಿತನ ಶಿರದ ಮೇಲಿರಿಸಿಯಿದ್ದೆ ||ಒಂದೊಂದೆ ನೀನೆ ಪರದೈವ ಎಂದು ಪೇಳ್ದೆ | ಗೋವಿಂದನಿಂದರ್ಚನೆಯ ಕೊಂಡೆ ಭಳಿ ಭಳಿರೆ ಶಿವ 2

ಗುರುವೆನಿಸಿಕೊಂಬೆ ಪ್ರಾಣೇಶ ವಿಠಲನೊಳು | ಮತ್ಸರಿಸುತಿಹ ಖಳರಿಗೆ ಇದಲ್ಪವೇನೊ ||ಸರಿವಬ್ಬರಿಗೆ ಆಹೆನೆಂಬುವನು ಕೆಡುವ ನೀ |ಉರುಗನಂತಾಗಬೇಕೆಂದಾಗಿ ಮೆರೆದೆಲವೊ3
*********