ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ನಿರಂಜನ ಭಂಜನ ಗುರು ತಾರಕ ಋಷಿಮುನಿ ಜೀವನ ಪ
ಅನಂತ ಗುಣ ಪರಿಪೂರ್ಣ ಅನಂದಮಯ ಘನ ಸ್ವಾನಂದ ಸದೋದಿತ ಸದ್ಗುರು ನಿಧಾನ ಅನಾದಿ ಮಹಿಮಾನಂದ ಸುಙÁ್ಞನಾಂಜನ ಅನೇಕ ಸಕಲಾಗುಮಪೂಜಿತ ಸೇವಿತ ತ್ರಿಭುವನ 1
ಕಲ್ಪತರು ಚಿಂತಾಯಕ ಅನಾಥ ರಕ್ಷಣ ತ್ರಿಜಗ ಜೀವನ ಅತೀತ ಸುಙÁ್ಞನ ಭಕ್ತ ಕೃಪಾನಿಧಿ ವಿಶ್ವವಂದನ 2
ಸಜ್ಜನ ಸಂಜೀವನ ಸದ್ಗುರು ಚಿದ್ಫನ ಸಗುಣ ನಿರ್ಗುಣ ಸಹಕಾರ ಸುರಮುನಿ ರಂಜನ ಮಹಿಪತಿ ತಾರಕ ಗುರು ಪತಿತಪಾವನ ಸದ್ಬ್ರಹ್ಮಾನಂದ ಸದೋದಿತ ಸದ್ಗತಿ ಸಾಧನ 3
****