..
ಬಾರೈಯ ಬಾರೈಯ
ಸೂರಿವರಿಯ ಐಕೂರು ನಿಲಯ ಪ
ನೀನ್ಹಾಕಿದ ಸುಜ್ಞಾನದ ಸಸಿಗಳು
ಮ್ಲಾನವಾಗುತಿವೆ ಸಾನುರಾಗದಲಿ 1
ಸತಿ ತವಕರುಣ ಸಲಿಲವ ಎರೆದು
ಫಳಿಲನೆ ವೃಥ್ಧಿಯ ಗಳಿಸಿ ಸಲಹಲು 2
ನಾಟಿಸಿದ ಸಸಿಗಳು ನೀಟಾಗುವ ಪರಿ
ತೋಟಗ ನೀ ಕೃಪೆ ನೋಟದಿ ನೋಡಲು 3
ಕೋವಿದರ ನೀ ಕಾವಲಿ ಇರಲು | ಕು
ಜೀವಿಗಳಿಂದಲಿ ಹಾವಳಿಯಾಗದು 4
ನೀಮರೆದರೆ ಸುಕ್ಷೇಮವಾಗದು
ಶಾಮಸುಂದರನ ಪ್ರೇಮದ ಪೋತ 5
***