Showing posts with label ಸ್ವಾಮಿ ಶ್ರೀಕೃಷ್ಣ ವಾಸುದೇವ ಲಕ್ಷ್ಮೀಪತಿ ಜಗಜನ್ಮಾದಿ ಕಾರಣ bheemesha krishna. Show all posts
Showing posts with label ಸ್ವಾಮಿ ಶ್ರೀಕೃಷ್ಣ ವಾಸುದೇವ ಲಕ್ಷ್ಮೀಪತಿ ಜಗಜನ್ಮಾದಿ ಕಾರಣ bheemesha krishna. Show all posts

Wednesday, 1 September 2021

ಸ್ವಾಮಿ ಶ್ರೀಕೃಷ್ಣ ವಾಸುದೇವ ಲಕ್ಷ್ಮೀಪತಿ ಜಗಜನ್ಮಾದಿ ಕಾರಣ ankita bheemesha krishna

..

ಕನ್ನಡ ಮಂತ್ರ

ಸ್ವಾಮಿ ಶ್ರೀಕೃಷ್ಣ ವಾಸುದೇವ ಲಕ್ಷ್ಮೀಪತಿ ಜಗಜನ್ಮಾದಿ ಕಾರಣ

ನಾರಾಯಣ ನರಕಾಂತಕ ನಾರದಪ್ರಿಯ ನರಸಖನಾದ

ನಾರಸಿಂಹಮೂರ್ತಿಗೆ ನಮಸ್ಕಾರಗಳು

ಗೋವ್ರಜದೊಳಿದ್ದ ಗೋವರ್ಧನುದ್ಧಾರ ಗೋಪೀನಾಥ

ಗೋಕುಲದರಸು ಯಾದವಶಿರೋಮಣಿಯೆನ್ನ

ಬಿನ್ನಪವ ಲಾಲಿಸಿ ಕೇಳಯ್ಯ ಕೃಷ್ಣ

ಕಾಮ ಕ್ರೋಧ ಮದ ಮತ್ಸರ ದುರ್ಬುದ್ಧಿ ದುರಾಚಾರ

ದುರ್ವಿಷಯಗಳ ಮೋಹ ಲೋಭಗಳ ಮರೆಸಿ

ಮುಂದೆ ಬಿರುದಿನಿಂದ ಭಕÀ್ತಜನ ಬಂಧು

ನೀ ದಯಾಸಿಂಧು ನಾ ಬೇಡಿಕೊಂಬುವೆನು ಬಂದು

ಸಜ್ಜನರಕ್ಷಕ ದುರ್ಜನಶಿಕ್ಷಕ ಅರ್ಜುನ ಸಾರಥಿಯಾದ

ಅನಂತಮಹಿಮ ನಿರ್ಜರೇಶ ನಿತ್ಯ ಮುಕ್ತ

ದ್ವಾರಾವತೀ ಮಧ್ವಮುನಿಗೊಲಿದಂಥ ಮೂರ್ಜಗಾಧೀಶ

ಉದ್ಧಾರ ಮಾಡಯ್ಯ ಉರಗಾದ್ರಿವಾಸ ಪದ್ಮಾವತೀಕಾಂತ

ಶ್ರೀ ವೆಂಕಟೇಶ ಜ್ಞಾನಭಕ್ತಿ ಘನ ವೈರಾಗ್ಯ

ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ

ಶ್ರೇಷ್ಠವಾದ ಸಂತಾನ ಸಕÀಲಾಭೀಷ್ಟಗಳ ಕೊಡುವನೆಂದು

ಬಿರುದು ನಿಂದು ಭಕ್ತಜನ ಬಂಧು ನೀ ದಯಾಸಿಂಧು

ನಾ ಬೇಡಿಕೊಂಬುವೆನು ಬಂದು ಎನ್ನಬಾರ ಎನ್ನ

ಪರಿವಾರ ನಿನ್ನಗೊಪ್ಪಿಸುವೆನು ಮನ್ಮಥನಪಿತ ಎನಗೆ

ಇನ್ನು ಧರ್ಮಾರ್ಥ ಕಾಮಿತ ಫಲಗಳನು ಸನ್ಮಾನದಲಿ ಕೊಟ್ಟು

ಮನ್ನಿಸಿ ನೀಡೆನಗೆ ಮಂಗಳವ ಅನುದಿನದಿ

ಸುಜ್ಞಾನಿಗಳೊಡೆಯ ಸುರರಿಂದ್ವಂದಿತವಾದ ನಿನ್ನ

ಪದ್ಮಪಾದಗಳಿಗೆ ಬಿದ್ದೆ ್ಹೀಳಿಕÉೂಂಬುವೆನು

ಭೀಮೇಶಕೃಷ್ಣ ರುಕ್ಮಿಣೀವಲ್ಲಭನೆ

***