Showing posts with label ಶ್ರೀವಧುವೆ ನಿನ್ನ prasannavenkata ankita suladi ಸರ್ವವ್ಯಾಪ್ತಿ ಸುಳಾದಿ SRI VADHUVE NINNA SARVA VYAAPTI SULADI. Show all posts
Showing posts with label ಶ್ರೀವಧುವೆ ನಿನ್ನ prasannavenkata ankita suladi ಸರ್ವವ್ಯಾಪ್ತಿ ಸುಳಾದಿ SRI VADHUVE NINNA SARVA VYAAPTI SULADI. Show all posts

Monday, 9 December 2019

ಶ್ರೀವಧುವೆ ನಿನ್ನ prasannavenkata ankita suladi ಸರ್ವವ್ಯಾಪ್ತಿ ಸುಳಾದಿ SRI VADHUVE NINNA SARVA VYAAPTI SULADI

1st Audio by Mrs. Nandini Sripad

Audio by Vidwan Sumukh Moudgalya


ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ 

 ಸರ್ವವ್ಯಾಪ್ತಿ ಸುಳಾದಿ 

( ಶ್ರೀಹರಿಯು ಬ್ರಹ್ಮ-ರುದ್ರ-ಇಂದ್ರಾದಿ ಎಲ್ಲ ದೇವತೆಗಳಿಗೆ ಆಶ್ರಯದಾತನಾಗಿ ದೇವ ದೇವೋತ್ತಮನಾಗಿದ್ದಾನೆ. ' ಹರಿ ಪರತರಃ ' ಎಂಬ ತತ್ತ್ವವನ್ನು ಇಲ್ಲಿ ಸಾರಿದ್ದಾರೆ. ಪರಮಾತ್ಮನ ಸರ್ವವ್ಯಾಪ್ತಿತ್ವವನ್ನು ಒತ್ತಿ ಹೇಳಿದ್ದಾರೆ. ಈ ಸುಳಾದಿಯು ಶ್ರೀ ಶಬ್ದದಿಂದ ಪ್ರಾರಂಭವಾಗಿದ್ದು , ಪಠಣ-ಪಾರಾಯಣ ಮಾಡುವುದರಿಂದ ಶ್ರೀಕರತ್ವವು ಉಂಟಾಗುವುದೆಂದು ದಾಸರು ಸೂಚಿಸುತ್ತಾರೆ. )

 ರಾಗ ನಾಟ 

 ಧ್ರುವತಾಳ 

ಶ್ರೀವಧುವೆ ನಿನ್ನ ಪೊಂದಿರಲೆಲೈ ದೇವ
ಆವ ಕಾವುದು ಸಿರಿಯೆ
ಗೋವ್ರಜದಬಲೇರ ಮನೆಯ ಪಾಲಿನ ರುಚಿ
ಆವುದಧಿ ಮಿಗಿಲೆ 
ಆವಾಗ ಮುನಿಮನಗೇಹದಿಂದ ರಥವಾಜಿ
ಬೋವತನವು ದೊಡ್ಡಿತೆ
ಭಾವಿಸಲಳವಲ್ಲನಂತ ಮಹಿಮ ನಿನ್ನ
ದೇವ ದಾನವರಿಗೊಲಿದೆ
ಕಾವನಜನಕ ಅಗಣಿತ ಗುಣನೆ ಪ್ರಸನ್ನವೆಂಕಟೇಶ ಹರೆ ॥ 1 ॥

 ಮಠ್ಯತಾಳ 

ಅಂಬುಜಭವ ಮೃಡ ಬಿಡೌಜರಿಗಿ -
ನ್ನಿಂಬುಗೊಡುವಾನಿಮಿಷರೊಡೆಯ
ನಂಬಿದರ ಕುಟುಂಬನೆ ಅಂತರ್ಬಹಿರ್ಮಯನೆ
ಕಂಬುಕೊಳಲು ಸಂಭ್ರಮದೂದುವ
ನಂಬಿದರ ಕುಟುಂಬನೆ ಕರು -
ಣಾಂಬಕ ಪ್ರಸನ್ವೆಂಕಟ ವಿಭುವೆ ॥ 2 ॥

 ತ್ರಿಪುಟತಾಳ 

ಜಲಜಜಾಂಡವು ರೋಮರೋಮದ
ಕುಳಿಯಲಿಡಿದಿರಲಖಿಳ ಶರಣರ
ಸಲಹುದರಿದೆ ತಂದೆ
ಮಲಿನಯುತ ಜನಮೇಳ ನೆನೆಯಲು
ಸಲಹುದರಿದೆ ತಂದೆ
ಬಲಿಯ ಬಿಂಕವನೊತ್ತು ಅಮರರ ಸಲಹಿದ
ಸುಲಭರರಸ ಪ್ರಸನ್ನವೆಂಕಟಾ -
ಚಲ ವಿಭುವೆ ಎನ್ನೊಬ್ಬನಿಗೆ ನೀ
ಸಲಹುದರಿದೆ ತಂದೆ ॥ 3 ॥

 ಅಟ್ಟತಾಳ 

ಮುಟ್ಟಿ ನಿನ್ನನು ನುತಿಸಿದೊಡಂ ಕಿವಿ -
ಗೊಟ್ಟು ಕಥೆಗೇಳಿ ಬಾಳ್ದಡಂ
ಕಷ್ಟ ದುಷ್ಟರೊತ್ತಿದಯ್ಯ
ಬೆಟ್ಟಿಲಿ ನಗವನೆತ್ತಿದ ಕೃಷ್ಣನೆಂದರೆ
ದಿಟ್ಟ ಪ್ರಸನ್ನವೆಂಕಟ ಕೃಷ್ಣನೆಂದರೆ ॥ 4 ॥

 ಆದಿತಾಳ 

ಶ್ರೀವರ ಮೂರುತಿ ಭೂವರಾಹನೆ
ಈ ಉರಗಾದ್ರಿಗೆ ವೈಕುಂಠವೆಂಬೆ ಗಡ
ದೇವರ ದೇವ ದೀನನ ನೇವರಿಸಿದವನೆ
ದೇವರ ದೇವ ಧ್ರುವನಿಗೆ ನೇವರಿಸಿದವನೆ
ದೇವರ ದೇವ ಭಕ್ತರ ಕಾವ ಪ್ರಸನ್ವೆಂಕಟಪತಿ 
ನಮೋ ನಮೋ ದೇವ ॥ 5 ॥

 ಜತೆ 

ತನ್ನ ವತ್ಸಕೆ ಧೇನು ತೊಳಲುವಂತೆ ಪ್ರ - 
 ಸನ್ನ ವೆಂಕಟರೇಯ ಬುಧಕಾಮಧೇನು ॥
*********