Showing posts with label ಎಲೊ ರಮಾಪತಿ ಹಕ್ಕಿಗಳು ಬಾಯಿ pranesha vittala. Show all posts
Showing posts with label ಎಲೊ ರಮಾಪತಿ ಹಕ್ಕಿಗಳು ಬಾಯಿ pranesha vittala. Show all posts

Saturday, 9 November 2019

ಎಲೊ ರಮಾಪತಿ ಹಕ್ಕಿಗಳು ಬಾಯಿ ankita pranesha vittala

by ಪ್ರಾಣೇಶದಾಸರು
ಎಲೊ ರಮಾಪತಿ ಹಕ್ಕಿಗಳು ಬಾಯಿ ಬಿಡುವಂತೆಬಳಲುವೆವೊ ಈಗ ನಾವೆಲ್ಲ | (ನಾವೆಲ್ಲ) ಈ ಬ್ರಹ್ಮಕುಲದ ಅಭಿಮಾನ ನಿನದಲ್ಲೆ ಪ

ಗೌಡ ಪ್ರಬಲಾಗೆ ತಲೆಗೂಡೆನಿಸಿತೆನಗೆ ನೋಡ ಮನೆಕಡೆಗೆ ಮಡಿವಾಳ | (ಮಡಿವಾಳ) ಮರ ಹಾಳುಮಾಡುವರು ದ್ವಿಜರೆಂಬನು ಜೀಯ 1

ಗಡಿಗೆಗಳು ಒಂದನ್ನ ಕೊಡನು ಗ್ರಹಣಗಳು ಹನ್ನೆ-ರಡೂ ಆದರನ್ನಾ ಕುಂಬಾರ | (ಕುಂಬಾರ)ನಿದ ಸ್ಮರಿಸಿಅಡವಿಯೊಳು ಕುಳಿತು ಆ(ಅ ?)ಳಬೇಕು 2

ಭಕ್ರಿಯೆಂಬುದು ತುಪ್ಪ ಸಕ್ರಿ ಮಾಡಿದ ಬಡಿಗಅಕ್ರೂರ ವರದ ದಯಾಸಿಂಧು | (ದಯಾಸಿಂಧು) ಎಂದು ಈಅಕ್ರಮವ ನಿನಗೇ ಉಸಿರುವೆ3

ಕಾಲರಕ್ಷೆಯ ಹೊಲಿಯ ಧಾಳಾಯ ಕೊಡುಯೆಂದುಗೋಳಾಡಿಸುವನು ಅತಿಶೂದ್ರ | (ಅತಿಶೂದ್ರ) ಈ ದುಃಖಕೇಳುವರೇ ಇಲ್ಲೋ ಪರಮಾತ್ಮ 4

ಯರಿಬೀಳು ಅದಕೂ ಮತ್ತೇರಿಸುವನೋ ಎಲ್ಲೋ ಎಂ-ದಿರುಳೆಲ್ಲ ನಿದ್ರಿಲ್ಲೋ ಮೇಲ್ಪøತ್ತಿ | (ಮೇಲ್ಪøತ್ತಿ)ಯೆಂಬುವದುಗುರುತಿಲ್ಲಧೋಯ್ತೋ ಗುರುವರ್ಯ 5

ಇದ್ದ ಜ್ಞಾತಿಗಳಿಂದೆ ಮುದ್ದ್ಯಾಗಬೇಕೆಂಬಶ್ರದ್ಧೆಯನೇ ಬಿಟ್ಟು ಅವನನ್ನೇ | (ಅವನನ್ನೇ) ಕೊಂಡಾಡಿಹೊದ್ದಿ ದಿನಗಳದೂ ಬದುಕುವರು6

ಈ ರೀತಿ ನೋಡಲ್ಕೆ ಮೂರನೆ ಕಾಲವೇಂತೋರುವದೊ ಯಮಗೆ ಪ್ರಾಣೇಶ | (ಪ್ರಾಣೇಶ) ವಿಠಲ ಉ-ದ್ಧಾರ ಮಾಡುವದು ನೀ ಬಲ್ಲೆ7
*********