Showing posts with label ಶ್ರೀರಘುರಾಮ ಪದಾಂಬುಜ ಭೃಂಗನೆ ಶ್ರೀ ರಾಘವೇಂದ್ರ sirivittala. Show all posts
Showing posts with label ಶ್ರೀರಘುರಾಮ ಪದಾಂಬುಜ ಭೃಂಗನೆ ಶ್ರೀ ರಾಘವೇಂದ್ರ sirivittala. Show all posts

Saturday, 28 December 2019

ಶ್ರೀರಘುರಾಮ ಪದಾಂಬುಜ ಭೃಂಗನೆ ಶ್ರೀ ರಾಘವೇಂದ್ರ ankita sirivittala

ಶ್ರೀ ರಘುರಾಮ ಪದಾಂಬುಜ ಭೃಂಗನೆ 
ಶ್ರೀ ರಾಘವೇಂದ್ರ ಸದ್ಗುರುವರನೆಸಾರಿದೆ 
ನಿನ್ನ ಪಾದಾರವಿಂದಯುಗಳಾರಾಧನೆಯಿತ್ತು ಸಲಹೆಮ್ಮನೂ ಪ.

ಶ್ರೀ ಮಧ್ವಶಾಸ್ತ್ರ ಸುಧಾಂಬುಧಿಯೊಳು ಪುಟ್ಟಿ ಕಾಮಾರಿ ಶಿರಮುಟ್ಟಿ ಪೂರ್ವೋತ್ತರಆ ಮಹಾ ಅಲೆಯೊಳು ಚಲಿಸಿ ದೇವಾಳಿಯಿಂ ಪ್ರೇಮದಿ ಸೇವ್ಯವಾಗಿರುತಿರುವ 1

ಹರಿಪದಾಂಬುಜಗಳಲ್ಲಿ ಬೆರೆದು ಪಂಚಭೇದ ವರತಾರತಮ್ಯದಿ ದುರ್ವಾದವತರಿದ ಶ್ರೀ ಗುರು ವಾಗ್ದೇವತಾನದಿಯನ್ನು ನಿರುತನಿರ್ಮಲಗೈಸಿ ಕರುಣಿಸಲಿ 2

ಗುರು ರಾಘವೇಂದ್ರನೆ ಸಕಲ ಪ್ರದಾತನೆ ನಿರುತ ನಿನ್ನಡಿಯಲಿ ಭಕ್ತಿಯೊಳುಇರುವರ ಪಾಪ ಪರ್ವತವನ್ನು ಭೇದಿಪೆವರದೃಷ್ಟಿಯೆಂಬ ವಜ್ರಾಯುಧದಿ 3

ಭೂವಿಭುದೇಂದ್ರನೆ ಸೇವಿಸಿ ಹರಿಯ ಮಹಾವಿಭವವನ್ನೆಲ್ಲ ಪಡೆದವನೆದೇವ ಸ್ವಭಾವನೆ ಯಾವಾಗಲೆಮ್ಮಿಷ್ಟ ದೇವತರುವಿನಂತೆ ನೀಡುವುದು 4

ಶೀಲಸ್ವರೂಪನೆ ಸಂಸಾರ ದುಃಖದ ತೂಲರಾಶಿಗೆ ಕಾಲಾನಲನೆಸುವಿಮಲರೂಪನೆ ತವಕದಿ ಪರವಾದಿ ನಿವಹಕೆ ವಾಗ್ಬಂಧನಗೈಸುವನೆ 5

ವರ ವಿದ್ವಜ್ಜನರುಗಳರಿಯಲತ್ಯಧಿಕವಾಗಿರುವ ಜ್ಞಾನವು ವಾಗ್ವೈಖರಿಯಿಂದಲಿಪರವಾದಿಗಳ ಗೆದ್ದ ಶ್ರೀ ರಾಘವೇಂದ್ರ ಸದ್ಗುರುವೆ ನಮ್ಮಿಷ್ಟವ ಸಲಿಸುವುದು 6

ಸಂತಾನ ಸಂಪತ್ತು ಭಕ್ತಿವಿಜ್ಞಾನವು ಮುಂತಾದವಾಗ್ದೇಹ ಪಾಟವವಸಂತೋಷದಿಂದಿತ್ತು ನಮ್ಮ ಶರೀರದ ಸಂತಾಪರುಜೆಯ ನಿಗ್ರಹಿಸುವವನೆ 7

ಮೇದಿನಿಯೊಳು ಗಂಗಾದಿ ತೀರ್ಥಾಧಿಕವಾದನಿನ್ನಯ ಪಾದೋದಕವುಮೋದದಿ ಬ್ರಹ್ಮಹತ್ಯಾದಿ ತ್ರೈಪಾಪವ ಛೇದಿಸಿ ಸುಕೃತವ ಕೊಡುತಿಹುದು 8

ಭೂಮಿಯೊಳು ಬಂಜೆಗೆ ಮಕ್ಕಳ ಕೊಡುವದು ಅವಯವದಬಿಳ ಕೈವಲ್ಯವನುತವಕದಿ ಸಕಲಗ್ರಹವ ನಿಗ್ರಹಿಸುತ ವಿವಿಧ ಪಾತಕ ಪರಿಹರಿಸುವುದು 9

ನಿನ್ನ ಪದಾಬ್ಜದರಜ ಧರಿಸಿರುವರ ನಿನ್ನ ಪದಾಂಬುಜ ಕೀರ್ತಿಪರಉನ್ನತ ಪರಿಪಕ್ವವಾದ ವಾಗ್ಮಿಗಳನಿನ್ನು ಸಂದರ್ಶಿಸೆ ದುರಿತಹರ 10

ಭವಶರಧಿಗೆ ಸೇತುವೆಯೆನಿಸಿರುವನೆ ಭುವಿಯೊಳು ದ್ವೇಷಿಗಳಿಲ್ಲದಿಹಸುವಿಮಲರೂಪನೆ ತವಕದಿ ಪರವಾದಿ ನಿವಹಕೆ ವಾಗ್ಬಂಧಗೈಸುವನೆ 11

ಜಯಸರ್ವತಂತ್ರಸ್ವತಂತ್ರನೆ ಜಯಜಯ ಜಯಜಯ ಶ್ರೀ ಮಧ್ವಮತವರ್ಧನಜಯ ವಿಜಯೀಂದ್ರರ ಕರಕಮಲ ಸಂಜಾತಜಯತು ಸುಧೀಂದ್ರರ ವರಪುತ್ರನೆ 12

ಪರಮಹಂಸೋತ್ತಮ ಪೂರ್ಣಾಯುಜ್ಞಾನವು ನಿರುತ ಯಶವು ಪುಣ್ಯಭಕ್ತಿಯನುಸಿರಿಯ ಸುಪುತ್ರರ ವೃದ್ಧಿಯಗೊಳಿಸೆನ್ನ ಪರಿಪರಿ ಭಯವೆಲ್ಲ ಪರಿಹರಿಸೋ 13

ದುರುಳ ದುರ್ವಾದಿಗಳನು ನಿಗ್ರಹಿಸುವ ದುರುಳರ ಹೃದಯ ಪ್ರಭೇದಿಸುವಎರಡು ಚಿಹ್ನೆಗಳನ್ನು ಧರಿಸಿದ ವಿದ್ಯಾ ಪರಿಪೂರ್ಣ ಗುರುವನ್ಯರಿಲ್ಲವೊ 14

ಹರಿಯ ಪ್ರಸನ್ನತೆ ಪಡೆದು ಪ್ರಸಿದ್ಧನಾಗಿರುತ ಸ್ಮರನಗೆಲಿದಿಷ್ಟಗಳತ್ವರಿತದಿ ಕೊಡುವ ಶ್ರೀ ಗುರುರಾಘವೇಂದ್ರರ ಹೊರತನ್ಯ ಗುರುವಿಲ್ಲ ಧರೆಯೊಳಗೆ 15

ಮರೆವು ಮೂರ್ಛಾಕ್ಷಯವಜ್ಞಾನ ಭ್ರಾಂತಿಯು ಉರುತರ ಮೂಕತ್ವ ಸಂದೇಹವುಕರಚರಣದಕಂಪ ಮೊದಲಾದ ಇಂದ್ರಿಯ ಪರದುಷ್ಟದೋಷವ ಪರಿಹರಿಸೋ 16

ಶ್ರೀ ರಾಘವೇಂದ್ರಾಯ ನಮಃ ಎಂಬುವ ದಿವ್ಯ ಸಾರಾಷ್ಟಾಕ್ಷರ ಜಪಿಸುತಲಿಆರಾಧಿಸುವರ ಇಷ್ಟಾರ್ಥ ಕೊಡುವೆಯೊ ಆದರದಿಂದಲಿ ಅನವರತ 17

ತನ್ನ ದೇಹದಿಂದ ಉತ್ಪನ್ನವಾಗುವ ತನ್ನಿಂದ ತನ್ನ ಬಂಧುಗಳಿಂದಾದಉನ್ನತ ದೋಷಗಳನ್ನು ನಿವರ್ತಿಸಿ ಮುನ್ನ ಕೊಡುವೆ ಸಕಲೇಷ್ಟಗಳ 18

ಸ್ವಾರ್ಥಸಿದ್ಧಿಗೆ ಈ ಸ್ತೋತ್ರ ತ್ರಿಕಾಲದಿ ಪ್ರಾರ್ಥಿಸಲಿಹಪರದಿಷ್ಟಗಳಅರ್ಥಿಯಿಂ ಪಡೆದು ಕೃತಾರ್ಥನಾಗುವ ಯಥಾರ್ಥವು ಇದಕೆ ಸಂದೇಹವಿಲ್ಲ 19

ಈ ಮಹಿಯೊಳಗೆ ಅಗಮ್ಯ ಮಹಿಮೆ ಉದ್ಧಾಮ ಸುಕೀರ್ತಿ ವಿಶಾರದನೇಶ್ರೀ ಮಧ್ವಮತ ದುಗ್ಧಾಬ್ಧಿಗೆ ಚಂದ್ರನೆ ಸ್ವಾಮಿ ನಿರ್ದೋಷ ನೀ ಎನ್ನ ಕಾಯೋ 20

ವೃಂದಾವನ ಪ್ರದಕ್ಷಿಣೆ ಮಾಡಲು ಪೊಂದುವ ಸಕಲ ಯಾತ್ರಾಫಲವವೃಂದಾವನದ ಉದಯಯಿಂದು ಧರಿಸಲು ಸಕಲ ತೀರ್ಥದ ಫಲ ದೊರಕುವುದು 21

ನಮಿಸುವೆ ಸರ್ವಾಭೀಷ್ಟ ಸಿದ್ಧಿಗೆ ನಾನು ವಿಮಲಶಾಸ್ತ್ರಾರ್ಥ ಜ್ಞಾನಗಳುಕ್ರಮದಿ ಲಭಿಸೆ ನಿನ್ನ ನಾಮೋಚ್ಚಾರಣೆ ಅಮಿತ ಹರುಷದಿಂದ ಮಾಡುವೆನು 22

ಪರಿಪರಿ ದುಃಖದಿ ಪರಿಪೂರ್ಣವಾಗಿಹ ಉರುತರ ಗಂಭೀರವಾಗಿರುವ ಅರಿಯಲಸದಳ ಪಾತಾಳವು ಉತ್ತರಿಸಲು ಸಾಧ್ಯವು ಸಮಸಮವಿಲ್ಲದ 23

ನಿರುತ ದೋಷಗಳೆಂಬ ಜಲಪಿಶಾಚಿಗಳಿಂದ ಬೆರೆದರಿಷಡ್ವರ್ಗ ತರಂಗದಿಪರಿಮಿತಿಯಿಲ್ಲದೆ ಭಯಸಮೂಹವೆ ಬಿಳಿ ನೊರೆಯು ವ್ಯಸಲವಗಾಧವಾದ 24

ಎಂದಿಗು ಹಿಂಗದ ವಿಷಜಲವಿರುತಿಹ ಬಂಧಕವಾದ ಸಂಸಾರವೆಂಬಸಿಂಧುವಿನೊಳು ಬಿದ್ದು ಮಗ್ನನಾದೆ ರಾಘವೇಂದ್ರ ಗುರುವೆ ಎನ್ನನುದ್ಧರಿಸೋ 25

ನಿಷ್ಠೆಯಿಂದಲಿ ಸ್ತೋತ್ರ ಮಾಡಲಷ್ಟಾದಶ ಕಷ್ಠಾಂಧ ಮೂಕ ಬಧಿರತ್ವ ಹರಸೃಷ್ಟಿಯೊಳಗೆ ಪೂರ್ಣಾಯು ಸಂಪತ್ತುಯುತ್ಕೃಷ್ಟ ಸುಖಗಳನಿತ್ತು ಸಲಹುವೆಯೋ 26

ಮುದದಿ ಈ ಸ್ತೋತ್ರದಿಂದಭಿಮಂತ್ರಿತವಾದ ಉದಕ ಪ್ರಾಶನದಿಂದ ಉದರದೊಳುಉದುಭಿಸಿದ ಮಹಾರೋಗಗಳೆಲ್ಲವು ಅಧಿಕ ಶೀಘ್ರದಿ ನಾಶವಾಗುವುದು 27

ವೃಂದಾವನದ ಬಳಿ ಸ್ತೋತ್ರ ಪ್ರದಕ್ಷಿಣೆಯಿಂದ ವಂದಿಸಿ ಕುಂಟನಾದವನುಚಂದದಿ ನಡೆಯುವ ಶಕ್ತಿಯ ಕಾಲೊಳು ಪೊಂದುವ ಗುರುವಿನನುಗ್ರಹದಿ 28

ರವಿಶಶಿಗ್ರಹಣ ಪುಷ್ಯಾರ್ಕಾದಿ ದಿನದಲ್ಲಿ ಸ್ತವನವ ನೂರೆಂಟು ಸಲ ಮಾಡಲುತವಕದಿಂದಲಿ ಭೂತ ಪ್ರೇತ ಪಿಶಾಚಿಯು ವಿಧವಿಧ ಬಾಧೆಗಳೆಲ್ಲ ಪರಿಹರವು 29

ವಿಮಲ ಬೃಂದಾವನದೆಡೆಯೊಳು ಸ್ತೋತ್ರದಿ ನಮಿಸುತ್ತ ದೀಪವನಿಡುವವರುಶ್ರಮವಿಲ್ಲದ ಸುಜ್ಞಾನ ಸತ್ಪುತ್ರರ ಮಮತೆಯಿಂದಲಿ ಹೊಂದಿ ಸುಖಿಸುವರು 30

ಪರವಾದಿಗಳ ದಿಗ್ವಿಜಯ ದಿವ್ಯಜ್ಞಾನ ಪರಿಪೂರ್ಣ ಭಕ್ತಿಯ ವರ್ಧಿಸುತನಿರುತದಿ ಸಕಲೇಷ್ಟ ದೊರಕಿದ ವಿಷಯದಿ ಬರಿದಾದ ಯೋಚನೆ ಫಲವಿಲ್ಲವು 31

ಚೋರ ಮಹೋರಗ ನೃಪ ನಕ್ರ ವ್ಯಾಘ್ರಾದಿ ಘೋರಭಯವ ಪರಿಹರಿಸುವುದುಧಾರುಣಿಯೊಳಗೀ ಸ್ತೋತ್ರ ಪ್ರಭಾವವೆ ಸಾರುತಲಹುದು ಸಂದೇಹವಿಲ್ಲ 32

ಪರಿಶುದ್ಧ ಭಕ್ತಿಯಿಂ ಗುರುರಾಘವೇಂದ್ರರ ಚರಣ ಸ್ಮರಿಸಿ ಸಂಸ್ತುತಿಸುವರುಅರಿಯರು ಲವಲೇಶ ದುಃಖವ ಸ್ವಪ್ನದಿ ಹರಿಯ ಅನುಗ್ರಹ ಬಲದಿಂದಲಿ 33

ವಸುಧೆಯೊಳಗೆ ಸಕಲೇಷ್ಟ ಸಮೃದ್ಧಿಯು ದಿಶೆ ದಿಶೆಯೊಳು ಕೀರ್ತಿಸಮವಿಲ್ಲದಎಸೆವ ಐಶ್ವರ್ಯವು ದೊರಕಿಪುದಕೆ ಹಯಾಸ್ಯನೆ ಸಾಕ್ಷಿಯಾಗಿರುತಿಹನು 34

ಧರೆಯೊಳಗತಿ ಪೂಜ್ಯ ಗುರುರಾಘವೇಂದ್ರನೆ ನಿರುತವು ಸತ್ಯಧರ್ಮದಿ ರತನೆಸ್ಮರಿಸುವವರಿಗೆ ಸುರತರುವೆ ನಮಿಪರಿಗೆ ಸುರಭಿಯೆನಿಸಿ ನಿತ್ಯ ಪೊರೆಯುವನೆ 35

ಮಂಗಳ ಮಂತ್ರಾಲಯ ಪುರದಧಿಪನೆ ಮಂಗಳ ತುಂಗಾತೀರದೊಳುಹಿಂಗದೆ ವಿವರಿಸಿ ಶ್ರೀರಾಮಚಂದ್ರನೆ ಮಂಗಳ ಮೂರ್ತಿಯ ಪಾಡುವನೇ 36

ಇಂತು ಶ್ರೀ ಗುರುಸ್ತೋತ್ರರಾಯನುಗ್ರಹ ಸಂತತ ಪಡೆದ ಅಪ್ಪಣ್ಣಾಚಾರ್ಯರುಸಂತಸರ ಸುಖಕ್ಕಾಗಿ ರಚಿಸಿದವರ ಮಹಂತೋಪಕ್ಕಾರಕ್ಕನಂತ ನಮೋ 37

ಹರಿವಾಯುಗಳು ಸದಾ ಸ್ಥಿರವಾಗಿದ್ದಿರು-ವಲ್ಲೀಪರಿ ವೈಭವದಿಂದ ಮೆರೆಸುವರೈಶರಣುಪೊಕ್ಕವರನ್ನು ಪೊರೆವ ಸಮರ್ಥರು ಧರೆಯೊಳನ್ಯರು ಯಾರು ಇರುತಿಹರೈ 38

ಕೃತದಲ್ಲಿ ನರಹರಿ ತ್ರೇತೇಲಿ ಶ್ರೀರಾಮ ತೃತೀಯ ಯುಗದಿ ಶ್ರೀಯಾದವಪತಿಯಾನುತಿಸಿ ವ್ಯಾಸರ ಮನೋಗತಪೂರ್ಣ ಬೋಧರ ಮತಸುವರ್ಧನರಾಗಿ ಕಲಿಯುಗದೀ 39

ಹರಿಹರಿಯೆನ್ನಲು ಹರಿವುದು ಭವಬಂಧ ಮರುತನ ಧ್ಯಾನದಿಂದಲಿ ನಾಶನಾವರಗುರುಚರಣ ಸಂಸ್ಮರಣ ಸಂತತ ಇಹಪರಕೆ ಸಕಲ ಸಾಧನವು ಪೂರಣ 40

ಸಾಧಾರಣವಲ್ಲವೀ ಗುರುಗಳ ಸೇವಾ ಸಾಧುಜೀವರಿಗಷ್ಟೆ ಲಭಿಸುವುದುಪಾದಸ್ಮರಣೆಗೈಯದವ ಕಡುಪಾಪಿ ವಿವಾದವೇತಕೆ ಇದು ಹಯವದನ ಸಾಕ್ಷಿ 41

ಸರುವದಾ ಈ ಸ್ತೋತ್ರ ಪಠಿಸಲಾಗದ ಸುಜೀವರು ಓಂ ಶ್ರೀ ರಾಘವೇಂದ್ರಾಯ ನಮಃಗುರುಮಂತ್ರವೆಂದಷ್ಟೇ ಸ್ಥಿರವಾಗಿ ಜಪಿಸಲು ಬರದು ಯಾವ ದೋಷ ಭವದೊಳಗೆ 42

ಆವದಾದರೂ ಏನು ಈ ಮಂತ್ರ ಜಪಿಸುವ ಭಾವ ಬುದ್ಧಿಯು ಮಾತ್ರವುಳ್ಳತನಕಕಾವುದು ಕರುಣದಿ ಸತ್ಯ ಶ್ರೀಹರಿವಾಯು ಈ ವಿವರಣೆಗೆಂದೂ ಚ್ಯುತಿಯಿಲ್ಲವೊ 43

ಮಂಗಳಂ ಶ್ರೀ ತುಂಗಾತೀರದೊಳ್ಮೆರೆಯುವ ಮಂಗಳಂ ವರಮಂತ್ರಾಲಯ ನಿಲಯಾಮಂಗಳಂ ಕಾರ್ಯಗಳ್ಹಿಂಗದೆ ನಡೆಸುವ ಶೃಂಗಾರ ಮಂಗಳ ಮೂರ್ತಿ ಸಿರಿವಿಠ್ಠಲರಾಯಾ 44
**************