Showing posts with label ಧರ್ಮ ಏಕೋ ಸಹಾಯಃ ಪರಬ್ರಹ್ಮ ಮೂರುತಿಯ purandara vittala. Show all posts
Showing posts with label ಧರ್ಮ ಏಕೋ ಸಹಾಯಃ ಪರಬ್ರಹ್ಮ ಮೂರುತಿಯ purandara vittala. Show all posts

Thursday, 5 December 2019

ಧರ್ಮ ಏಕೋ ಸಹಾಯಃ ಪರಬ್ರಹ್ಮ ಮೂರುತಿಯ purandara vittala

ರಾಗ ಕಾಪಿ. ಅಟ ತಾಳ

ಧರ್ಮ ಏಕೋ ಸಹಾಯಃ ||ಪ||
ಪರಬ್ರಹ್ಮ ಮೂರುತಿಯ ಪಾದವ ಭಜಿಪ ಸುಜನರಿಗೆ ||ಅ||

ಹರಿಭಕುತಿಯನು ಮಾಳ್ವ ಪರಮ ಭಾಗವತರಿಗೆ
ಕರೆದು ಭೂಸುರರಿಗನ್ನವನಿತ್ತಗೆ
ಪರ ಸತಿಯರನು ಕಂಡು ಮನವೆಳಸದಿದ್ದವಗೆ
ಪರರುಪದ್ರವ ಬಿಡಿಸಿ ಪೊರೆವ ಸುಜನರಿಗೆಲ್ಲ ||

ನಿತ್ಯ ನೇಮವ ಬಿಡದೆ ಸತ್ಯದಲಿ ನಡೆದವಗೆ
ವ್ಯರ್ಥ್ತವಾಗಿ ಹೊತ್ತು ಕಳೆಯದವಗೆ
ಚಿತ್ತಶುದ್ದಿಯಲಿ ಪರವಸ್ತು ಹರಿಯನು ತನ್ನ
ಹೃತ್ಕಮಲಮಧ್ಯದಲಿ ಇಟ್ಟು ಭಜಿಪರಿಗೆಲ್ಲ ||

ಮಾತೃಪಿತೃಗಳನ್ನ ಪ್ರಿಯದಲ್ಲಿ ಪೊರೆದವಗೆ
ಯಾತ್ರೆಗಳ ಮಾಳ್ಪ ಪುಣ್ಯಾತ್ಮಗೆ
ಧಾತ್ರಿಯೊಳು ಪುರಂದರವಿಠಲನ ನಾಮವನ್ನು
ಕೀರ್ತನೆ ಮಾಡಿ ಲೋಲ್ಟಾಡುತಿಹ ಸುಜನರಿಗೆ ||
***

pallavi

dharma Ekaha sahAyaha

anupallavi

parabrahma mUrutiya pAdava bhajipa sujanarige

caraNam 1

hari bhakutiyanu mALva parama bhAgavatarige karedu bhUsurarigannavanittage
para satiyaranu kaNDu manaveLasadiddavage para rUpatrava biDisi poreva sujanarigella

caraNam 2

nitya nEmava biDade satyadali naDedavage vyarttavAgi hottu kaLeyadavage
citta shuddiyali paravastu hariyanu tanna hrtkamala madhyadali iTTu bhajiparigella

caraNam 3

mAtru pitrugaLenna priyadalli poredavage yAtregaLa mALva puNyAtmage
dhAtriyoLu purandara viTTalana nAmavannu kIrtane mADi lOlTutiha sujanarige
***