Showing posts with label ಬೃಂದಾವನ ನೋಡಿದೆ ರಾಘವೇಂದ್ರರ ಬೃಂದಾವನ venkata vittala BRUNDAVANA NODIDE RAGHAVENDRARA BRUNDAVANA. Show all posts
Showing posts with label ಬೃಂದಾವನ ನೋಡಿದೆ ರಾಘವೇಂದ್ರರ ಬೃಂದಾವನ venkata vittala BRUNDAVANA NODIDE RAGHAVENDRARA BRUNDAVANA. Show all posts

Sunday 5 December 2021

ಬೃಂದಾವನ ನೋಡಿದೆ ರಾಘವೇಂದ್ರರ ಬೃಂದಾವನ ankita venkata vittala BRUNDAVANA NODIDE RAGHAVENDRARA BRUNDAVANA

RAGA YAMAN KALYANI

ರಚನೆ : ವೆಂಕಟವಿಠಲ

ಬೃಂದಾವನ ನೋಡಿದೆ ರಾಘವೇಂದ್ರರ ಬೃಂದಾವನ ನೋಡಿದೆ
ಬೃಂದಾವನ ನೋಡಿ ಚಂದದಿ ದ್ವಾದಶಪುಂಡ್ರಾಕಿಂತಗೊಂಡ ||ಪಲ್ಲವಿ||

ತುಂಗಭದ್ರಾ ನದಿಯ ತೀರದಿ ಇದ್ದು ತುಂಗಾ ಮಂಟಪ ಮಧ್ಯದಿ
ಶೃಂಗಾರ ತುಳಸಿ ಪದ್ಮಾಕ್ಷ ಸರಗಳಿಂದ ಮಂಗಳಪರ ಮಹಿಮೆಯಿಂದೊಪ್ಪುವ ||೧||

ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದು ವಾಸವಾಗಿ ಸೇವಿಪ
ಭಾಷೆ ಕೊಟ್ಟಂದದಿ ಬಹುವಿಧ ವರಗಳ ಸೂಸುವವರ ಮಹಾಮಹಿಮೆಯಿಂದೊಪ್ಪುವ ||೨||

ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ ಮತ್ತೆ ಅಭೀಷ್ಟವ ಕರೆವ
ಸತ್ಯದಿ ಗುಣಸಿಂಧು ವೆಂಕಟವಿಠಲನ ನಿತ್ಯ ಸನ್ನಿಧಿಯಿಂದ ನಿರುತ ಪೂಜೆಗೊಂಬ ||೩||
****