ಕೆಂಡಕೆ ಜಿರಳೆ ಮುತ್ತುವುದುಂಟೆ
ಪಾಂಡುರಂಗನ ದಾಸರಿಗೆ ಭಯವುಂಟೆ ||ಪ||
ಆನೆ ಸಿಂಹನ ಕೂಡೆ ಸ್ನೇಹ ಬೆಳೆಸುವುದುಂಟೆ
ಶ್ವಾನ ಹೆಬ್ಬುಲಿ ಕೂಡೆ ಸರಸವುಂಟೆ
ಏನೆಂಬೆ ಮನದಲ್ಲಿ ಸರ್ವದಾ ನಿನ್ನಂಘ್ರಿ
ಧ್ಯಾನದೊಳಿದ್ದವಗೆ ದಾರಿದ್ರ್ಯವುಂಟೆ ||
ಕತ್ತಲೆಯೊಳು ರವಿ ಕವಿದು ಮುಚ್ಚುವುದುಂಟೆ
ಹುತ್ತ ಸರ್ಪನ ಕಪ್ಪೆ ನುಂಗುವುದುಂಟೆ
ಅತ್ತಿತ್ತ ತೊಲಗದೆ ಚಿತ್ತಜನಯ್ಯನ
ಚಿತ್ತದೊಳಿಟ್ಟವಗೆ ಚಿಂತೆಯುಂಟೆ ||
ಮಾರುತನ ಗುದ್ದಿ ಅಂಗ ನೋಯಿಸುವುದುಂಟೆ
ಹೇಮಗಿರಿಯ ವಜ್ರ ಸೀಳೋದುಂಟೆ
ಸ್ವಾಮಿ ಶ್ರೀ ಪುರಂದರವಿಠಲರಾಯನ
ನಾಮಧಾರಿಗಳಿಗೆ ನರಕವುಂಟೆ ||
***
ರಾಗ ಕಾಂಭೋಜ ಝಂಪೆತಾಳ (raga tala may differ in audio)
pallavi
keNDake jiraLe muttuvuduNTe pANDurangana dsarige bhayavuNTe
caraNam 1
Ane simhana kUDe snEha beLasuvuduNTe shvAna hebbuli kUDe sarasavuNTe
Enemba manadalli sarvadA ninnanghri dhyAnadoLiddavage dAridryavuNTe
caraNam 2
kattaleyoLu ravi kavidu muccuvuduNTe hutta saroana kappe nunguvuduNTe
attitta tolagade cittajanayyana cittadoLiTTavage cinteyuNTe
caraNam 3
A mArutana guddi anga nOyipuduNTe hEmagiriya vajra sILOduNTe
svAmi shrI purandara viTTla rAyana nAmadhArigaLige narakavuNTe
***