Showing posts with label ಕಂದ ಹಾಲ ಕುಡಿಯೊ ಎನ್ನ ಗೋವಿಂದ purandara vittala KANDA HAALU KUDIYO ENNA GOVINDA. Show all posts
Showing posts with label ಕಂದ ಹಾಲ ಕುಡಿಯೊ ಎನ್ನ ಗೋವಿಂದ purandara vittala KANDA HAALU KUDIYO ENNA GOVINDA. Show all posts

Saturday, 4 December 2021

ಕಂದ ಹಾಲ ಕುಡಿಯೊ ಎನ್ನ ಗೋವಿಂದ purandara vittala KANDA HAALU KUDIYO ENNA GOVINDA


 ಪುರಂದರದಾಸರು
ರಾಗ ಕಲ್ಯಾಣಿ , ಛಾಪುತಾಳ

ಕಂದ ಹಾಲ ಕುಡಿಯೋ , ಎನ್ನ ಗೋ-
ವಿಂದ ಹಾಲ ಕುಡಿಯೋ ||ಪ||

ಮಂದರಧರ ಗೋವಿಂದ ಮುಕುಂದ
ಕಂದ ಹಾಲ ಕುಡಿಯೋ ||ಅ||

ಶೃಂಗಾರವಾದ ಗೋವಿಂದ ಚೆನ್ನ
ಪೊಂಗೊಳಲನೂದುತ ಬಂದ
ಅಂಗನೇರು ನಿನ್ನ ಚಂದ ನೋಡಿ
ಭಂಗಪಟ್ಟರು ಕಂಡ ದೇವಯ್ಯ ||

ಆಕಳ ಬಳಿಗೆ ಓಡಾಡಿ , ಹರಿ
ಶ್ರೀಕಾಂತೇರ ಒಡಗೂಡಿ
ಲೌಕಿಕ ಆಟಗಳಾಡಿ , ನಮಗೆ
ಬೇಕೆಂಬೋ ಸುಖವೀವ ಕಂದ ದೇವಯ್ಯ ||

ಸದಮಲ ಯೋಗಿಗಳೆಲ್ಲ , ಪಾದ-
ಪದುಮವ ನಂಬಿದರೆಲ್ಲ
ಯದುಕುಲತಿಲಕ ಗೋಪಾಲ , ಹಯ-
ವದನ ಪುರಂದರವಿಠಲ ||
***

pallavi

kanda hAla kuDiyO enna gOvinda hAla kuDiyO

anupallavi

mandaradhara gOvinda mukunda kanda hAla kuDiyO

caraNam 1

shrngAravAda gOvinda cenna pongaLalanUduta banda
anganEru ninna canda nODi bhangapaTTaru kaNDe dEvayya

caraNam 2

AkaLa bhaLige ODADi hari shrIkAntEra oDa gUDi
laukika ATagaLADi namage bEkembo sukhavIva kaNDe dEvayya

caraNam 3

sadamala yOgigaLella pAda padumava nambidarella
yadukula tilaka gOpAla hayavadana purandara viTTala
***

ಕಂದ ಹಾಲ ಕುಡಿಯೊ ನಮ್ಮ ಗೋ-|
ವಿಂದ ಹಾಲ ಕುಡಿಯೊ ಪ

ವೃಂದಾವನದೊಳು ಬಳಲಿ ಬಂದೆಯೊ ರಂಗ ಅ.ಪ

ಶೃಂಗಾರವಾದ ಗೋವಿಂದ-ಚೆಲುವ |ಪೊಂಗೊಳಲೂದುವ ಚೆಂದ ||ಅಂಗನೆಯರ ಒಲುಮೆಯಿಂದ-ನಮ್ಮ |ಮಂಗಳಮೂರತಿಯ ಮೋರೆ ಬಾಡಿತಯ್ಯ 1

ಆಕಳೊಡನೆ ಹರಿದಾಡಿ-ನಮ್ಮ |ಶ್ರೀಕಾಂತ ಗೆಳೆಯರ ಕೂಡಿ ||ಲೋಕವಈರಡಿಮಾಡಿ-ನಮ್ಮ |ಸಾಕುವ ಪಾದವು ಬಳಲಿದುವಯ್ಯ 2

ಸದಮಲ ಯೋಗಿಗಳೆಲ್ಲ-ನಿನ್ನ |ಪದವ ಬಣ್ಣಿಸುತಿಪ್ಪರೆಲ್ಲ ||ಯದುಕುಲ ಚೌಪಟ ಮಲ್ಲ-ಹಾಲ |ಹದನು ವಿೂರಿತಯ್ಯ ಪುರಂದರವಿಠಲ 3
********