Showing posts with label ನಮೋ ನಮೋ ನಾರದವಂದ್ಯ ನಮೋ ನಮೋ ನಿಗಮನಿಕರವೇದ್ಯ devapura lakshmikanta. Show all posts
Showing posts with label ನಮೋ ನಮೋ ನಾರದವಂದ್ಯ ನಮೋ ನಮೋ ನಿಗಮನಿಕರವೇದ್ಯ devapura lakshmikanta. Show all posts

Monday, 2 August 2021

ನಮೋ ನಮೋ ನಾರದವಂದ್ಯ ನಮೋ ನಮೋ ನಿಗಮನಿಕರವೇದ್ಯ ankita devapura lakshmikanta

ನಮೋ ನಮೋ ನಾರದವಂದ್ಯ

ನಮೋ ನಮೋ ನಿಗಮನಿಕರವೇದ್ಯ ಪ


ನಮೋ ವರದಾಧಿಪ ಸುರಪುರ ಲಕ್ಷ್ಮೀಶ

ಭವಭಯರೋಗವೈದ್ಯ ಅ.ಪ


ಹರಿಚರನಾಗಿ ವೇದವ ತಂದೆ ಹರಿಪತಿಯನು ಮೇಲಾಂತು ನಿಂದೆ

ಹರಿನಯನನ ಕೊಂದೆ ಹರಿಯ ರೂಪಾದೆ ನೀ ಹರಿಪದಕಡಿಯನಿಟ್ಟೆ

ಹರಿವಂಶಜರನೆಲ್ಲರ ತರಿದೆ ಹರಿವಾಹಿನಿಯ ನೀನಾಳ್ದೆ

ಹರಿಸುತಗೊಲಿದು ಹೆಂಗಳ ವ್ರತಕೆಡಿಸಿದೆ ಹರಿವಾಹನ ಜಯತು 1


ಶಿವವಾಹನ ಧ್ವಜರೂಪ ಶಿವಧರನೆನಿಪ ಯುಗ ಪ್ರತಾಪ

ಶಿವಭಕ್ತನ ಕೊಂದೆ ಶಿವನ ರೂಪಾದೆ ನೀಂ ಪದಕಡಿಯನಿಟ್ಟೆ

ಶಿವವೈರಿಯ ರಿಪುವೆನಿಸಿದೆ ಶಿವನ ಬಿಲ್ಲನು ಬಾಗಿಸಿ ಮುರಿದೆ

ಶಿವನ ತುಳಿದೆ ನೀ ಶಿವನಿಗೆ ಸಖನಾದೆ ಶಿವವಾಹನ ಜಯತು2


ಸುರಜ್ಯೇಷ್ಠನಿಗೆ ಶ್ರುತಿಯನಿತ್ತೆ ಸುರರಿಗೆ ಸುಧೆಯನು ಕರೆದೆರೆದೆ

ಸುರನಗವರ್ಣ ಹಿರಣ್ಯಾಕ್ಷನ ಕೊಂದೆ ಸುರಸಿಂಧುವಪಡೆದೆ

ಸುರಭಿಯ ನೆವದಿ ಭೂಪರನೆಲ್ಲ ತರಿದೆ ಸುರರಿಪು ದಶವದನನ ತರಿದೆ

ಸುರನಗವರ್ಣ ಸರ್ವಜ್ಞ ಹಯಾರೂಢ ಸುರಪುರ ಲಕ್ಷ್ಮೀಶ 3

****