Showing posts with label ರಕ್ಷಿಸಿ ಪೊರೆಯೊ ದೇವನೆ ಪಕ್ಷಿವಾಹನನೆ kamalanabha vittala. Show all posts
Showing posts with label ರಕ್ಷಿಸಿ ಪೊರೆಯೊ ದೇವನೆ ಪಕ್ಷಿವಾಹನನೆ kamalanabha vittala. Show all posts

Thursday, 5 August 2021

ರಕ್ಷಿಸಿ ಪೊರೆಯೊ ದೇವನೆ ಪಕ್ಷಿವಾಹನನೆ ankita kamalanabha vittala

 ..

kruti by Nidaguruki Jeevubai


ರಕ್ಷಿಸಿ ಪೊರೆಯೊ ದೇವನೆ ಪಕ್ಷಿವಾಹನನೆ

ಸೂಕ್ಷ್ಮ ಸ್ಥೂಲದಿ ವ್ಯಾಪ್ತನೆ ಪ


ಲಕ್ಷ್ಮಿರಮಣ ಪುರುಷೋತ್ತಮ ಪುರುಷನೆ

ಕುಕ್ಷಿಯೊಳಗೆ ಜಗ ರಕ್ಷಿಸಿ ಪೊರೆವನೆ

ಅಕ್ಷರೇಢ್ಯ ಕಮಲೇಕ್ಷಣ ಮಾಧವ

ರಕ್ಷ ಶಿಕ್ಷಕ ಜಗದ್ರಕ್ಷಕ ಹರಿಯೆ ಅ.ಪ


ವಿಶ್ವರೂಪನೆ ಶ್ರೀಹರಿ ವಿಶ್ವವ್ಯಾಪಕನೆ

ವಿಶ್ವತೋ ಮುಖನೆ ಶ್ರೀಶನೆ

ವಿಶ್ವನಾಟಕನೆ ದೇವನೆ

ವಿಶ್ವೋದ್ಧಾರಕನೆ ವಿಶ್ವಮಯನೆ ಶ್ರೀ ವಿಶ್ವನೆ

ವಿಶ್ವರೂಪ ತಾಯಿಗೆ ಬಾಯೊಳು ತೋದರ್À

ವಿಶ್ವರೂಪ ಮೈದುನನಿಗೆ ತೋರಿದ

ವಿಶ್ವರೂಪ ಸಭೆಯೊಳು ಭಕ್ತರಿಗೆ ತೋರ್ದ

ವಿಶ್ವವ್ಯಾಪಕ ವಿಶ್ವ ಮೂರುತಿಯೆ 1


ಹಿಂದಿನ ಕರ್ಮಫಲದಲಿ ಬಂದು ಈ ಭವದಿ

ಕಂದಿ ಕುಂದಿದೆನೋ ವ್ಯಥೆಯಲಿ

ಬಂಧ ಮೋಚಕನೆನುತಲಿ ಬಂದೆರಗುತಲಿ

ತಂದೆ ನೀ ಪೊರೆಯಬೇಕೆನುತಲಿ

ಮಂದರೋದ್ಧರ ಗೋವಿಂದ ನಿನ್ನಯ ಪಾದ

ದ್ವಂದ್ವಕೆ ನಮಿಸುವೆ ಬಂಧನ ಬಿಡಿಸೆಂದು

ಇಂದು ಮುಂದು ಎಂದೆಂದಿಗೂ ನೀ ಗತಿ

ಎಂದು ನಂಬಿದೆನೋ ಇಂದಿರೆ ರಮಣ2


ಶ್ರಮವ ಪರಿಹರಿಸೊ ಶ್ರೀಶನೇ ಶ್ರೀನಿಕೇತನನೆ

ಕಮಲ ಸಂಭವನ ತಾತನೆ

ಕಮಲ ಜಾತೆಯ ಪ್ರೀಯನೆ ಕಮಲ ಲೋಚನನೆ

ಕಮಲ ಪೊಕ್ಕಳಲಿ ಪಡೆದನೆ

ಕಮಲ ಭವೇಂದ್ರಾದ್ಯಮರರು ಪೊಗಳಲು

ಕಮಲನಾಭ ವಿಠ್ಠಲ ವಿಠ್ಠಲನೆಂದು

ಕಮಲಪುಷ್ಪ ಮಾಲಾಲಂಕೃತ ಶೋಭಿತ

ಕಮಲದಳಾಕ್ಷನೆ ಕಮನೀಯರೂಪ 3

***