ಚನ್ನಪಟ್ಟಣದ ಅಹೋಬಲದಾಸರು
ನಾರಾಯಣ ನರಹರಿ ಪರಮಾತ್ಮ ನೀ ಪಾಲಿಸೋ ಪ
ಆರು ಮೂರಾರೊಳೆನ್ನ ಬಿಡಿಸೊ ಪಾರುಗಾಣಿಸೋ ಮುನ್ನಾ ಪರ ತೋರೋ ನಿಜ ನರಹರಿ 1
ಬಾಲಪ್ರಹ್ಲಾದನಾರ್ತನಾಗಿ ಶ್ರೀಲೋಲನೆಂದು ಕರೆಯೆ ಕಂಬದಿ ಬೇಗಾ ನೀಲಮೇಘಶ್ಯಾಮನೆನಿಸಿದ ನರಹರಿ 2
ಧರಣಿಗಧಿಪ ಮದ್ಗುರುವು ತುಲಸೀರಾಮದಾಸನೆನ್ನುತ ಬಂದೆ [ವರದ] ಪಾರಾ ಮಹಿಮ ಪರಾತ್ಪರ ನರಹರಿ 3
***