Sunday, 5 September 2021

ನಾರಾಯಣ ನರಹರಿ ಪರಮಾತ್ಮ ನೀ ಪಾಲಿಸೋ ankita tulasiramadasa

 ಚನ್ನಪಟ್ಟಣದ ಅಹೋಬಲದಾಸರು

ನಾರಾಯಣ ನರಹರಿ ಪರಮಾತ್ಮ ನೀ ಪಾಲಿಸೋ ಪ 


ಆರು ಮೂರಾರೊಳೆನ್ನ ಬಿಡಿಸೊ ಪಾರುಗಾಣಿಸೋ ಮುನ್ನಾ ಪರ ತೋರೋ ನಿಜ ನರಹರಿ 1 

ಬಾಲಪ್ರಹ್ಲಾದನಾರ್ತನಾಗಿ ಶ್ರೀಲೋಲನೆಂದು ಕರೆಯೆ ಕಂಬದಿ ಬೇಗಾ ನೀಲಮೇಘಶ್ಯಾಮನೆನಿಸಿದ ನರಹರಿ 2 

ಧರಣಿಗಧಿಪ ಮದ್ಗುರುವು ತುಲಸೀರಾಮದಾಸನೆನ್ನುತ ಬಂದೆ [ವರದ] ಪಾರಾ ಮಹಿಮ ಪರಾತ್ಪರ ನರಹರಿ 3

***


No comments:

Post a Comment