..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಹ್ಯಾಗೆ ಬರುವ ವೇದ ವೇದ್ಯ
ನಾಗವೇಣಿ ಶುಕವಾಣಿ ಸಖಿ ಪ
ಭೋಗ ಭಾಗ್ಯ ಬಯಸುವ | ಕು
ಯೋಗ ಕುತ್ಸಿತಳಲಿ ಅ.ಪ.
ಅಗಣಿತ ಗುಣಾರ್ಣವಗೆ
ಸುಗುಣನೆಂದರಿತು ನಾ ಮಣಿಯಲರಿಯೆ
ಬಗೆ ಬಗೆ ಕುಸುಮಂಗಳನು ಸೊಗಸಿನಿಂದಲಂಕರಿಸಿ
ನಗಧರನ ಸ್ತುತಿಸಲರಿಯದವಳಲ್ಲಿ 1
ರಮಾಭಿಮಾನ್ಯನಂತಾಸನ ಸದನಗೆ
ಕಮಲಾಸನವಿತ್ತು ಪ್ರೇಮ ಮಾಡಲರಿಯೆ
ಸೋಮ ಸೂರ್ಯನಂತರುಧಾಮದಿ ಬೆಳಗುತ್ತಿರೆ
ನೇಮದಿಂದ ದೀಪದಾರತಿಯ ಮಾಡುವಳಲ್ಲಿ 2
ಸಿರಿಭವಾದ್ಯರೆ ಆಭರಣ ಉಳ್ಳವಗೆ
ಕರಗುವ ಕನಕ ತೊಡಿಸಲರಿಯೆ
ಕರಿವರದ ವಿಜಯ ರಾಮಚಂದ್ರವಿಠಲನ್ನ
ಅರಿತು ಒಲಿಸಲರಿಯದವಳಲ್ಲಿ 3
***