Showing posts with label ರಾಮ ರಾಮ ಸೀತಾರಾಮ ರಘುರಾಮ gurujagannatha vittala. Show all posts
Showing posts with label ರಾಮ ರಾಮ ಸೀತಾರಾಮ ರಘುರಾಮ gurujagannatha vittala. Show all posts

Friday, 27 December 2019

ರಾಮ ರಾಮ ಸೀತಾರಾಮ ರಘುರಾಮ ankita gurujagannatha vittala

SURESH HULIKUNTI RAO: 
ರಾಮ ರಾಮ ಸೀತಾರಾಮ ರಘುರಾಮ ||ಪ||

ರಾಮ ರಾಮ ರಘುನಂದನ ತೋಷನ
ಅಮಿಷ ಪದಾಂಬುಜ ಪಾವನ
ನಾಮ ವಿಮಲ ಕಮಲಾಯತ ಲೋಚನ
ಭೂಮಿಜಾರಮಣ ಸದಾ ಶುಭಮಹಿಮನೆ ||೧||

ದಂಡ ಕುಖರಹರ ವಂದಿತ ಸುಜಟಾ
ಮಂಡಿತ ಮೌಳಿ ಮುನೀಂದ್ರ ಕರಾರ್ಚಿತ
ಚಂಡಕುಲೇಶ ಖಳ ನಿಶಾಚರ
ದಂಡನ ವರಕೋದಂಡ ವಿದಾರಿ ||೨||

ವಾರಿದ ಶಾಮ ದಯಾಂಬುಧಿ ಭಕ್ತ ಸ
ಮೀರಜ ಸೇವ್ಯ ವಿಭೀಷಣ ವರದ ಸು
ಸ್ಮೇರವದನ ಸಾಮ್ರಾಜ್ಯ ಪರಾಯಣ
ಭೂರಿ ಪ್ರಸನ್ವೆಂಕಟ ಕೃಷ್ಣತೇ ನಮೋ ||೩||
[9:42 AM, 11/5/2019] SURESH HULIKUNTI RAO: ರಾಮ ರಘುಕುಲಾಬ್ಧಿ ಸೋಮಾ ||pa||

ಸಂತತ ಭಕ್ತ ಪ್ರೇಮಾ ಮಂಗಲಧಾಮಾ |
ಪರಿಪೂರ್ಣ ನಿನ್ನಯ ನಾಮವೆ ಗತಿ ಎನಗೆ ||a.pa||

ಏಸಪರಾಧಗಳೆಣಿಸದೆ ದಯವಿಟ್ಟು |
ದೋಷದೂರನ ಮಾಡೊ ಕೇಶವ ಕಮಲಾಕ್ಷಾ ||1||

ಪ್ರಣವಾಕಾರ ವಿಮಾನ ಮನಿಯಾಗಿಯಿಪ್ಪನೆ |
ಫಣಿಶಾಯಿ ರಂಗೇಶ ಮಣಿಗಣ ಭೂಷಣನೆ||2||

ಇಕ್ವಾಕು ನೃಪವರದ ಸಾಕ್ಷಾತ್ತ ಪರಮಾತ್ಮಾ-|
ಧ್ಯಕ್ಷ ವಿಜಯವಿಠ್ಠಲಾ ರಕ್ಷಿಸು ಬಿಡದೆನ್ನ||3||
[9:45 AM, 11/5/2019] SURESH HULIKUNTI RAO: ರಾಯರ ನೋಡಿರೈ – ಶುಭತಮ ಕಾಯರ ಪಾಡಿರೈ            || ಪ ||
ತೋಯಜಪತಿ ನಾರಾಯಣ ಪದಯುಗ
ಭೃಂಗ – ಭಕ್ತ ಕೃಪಾಂಗ            || ಅ ||

ಸುಂದರ ಮುಖ ಅರವಿಂದ ಲೋಚನ – ಘ್ರಾಣ
ಕುಂದಕುಟ್ಮಲಸಮರದನ – ರಾಜಿತವದನ
ಮಂದಸ್ಮಿತಯುತ ದ್ವಂದ್ವ ಓಷ್ಟ ಶ್ರುತಿ
ಛಂದವಾಗಿಹ ಚುಬುಕಾ – ಫಾಲಾದಿ ತಿಲಕಾ
ಕಂಧರಯುತ ಪುರಂದರ ಕರಿಕರ
ವೃಂದವಾಗಿಹ ಬಾಹುಯುಗಳಾ – ಮೂಲಾಂಕಿತ ಕೊರಳ
ಇಂದಿರಾಪತಿ ನಿಜಮಂದಿರವೆನಿಸುವ
ಸುಂದರ ಹೃದಯದಿ ನಾಮಾ – ಹಚ್ಚಿದ ಪ್ರೇಮಾ            || ೧ ||

ಹಸ್ತದಿ ರಾಜಿಪ ಪುಸ್ತಕ ಮಣಿಮಾಲೆ
ಸ್ವಸ್ಥಿಕಾಸನಸ್ಥಿತಮೋದ – ಕೃತ ವಿನೋದ
ಮಸ್ತಕದಿಂದಲಿ ವಿಸ್ತ್ರಿತ ಕಾಷಾಯ
ವಸ್ತ್ರದಿ ಶೋಭಿಪ ಗಾತ್ರ – ಶುಭ ಚಾರಿತ್ರ
ಸ್ವಸ್ಥ ಮನದಿ ಪ್ರಾಶಸ್ಥ ಹರಿಯ ಪಾದ
ಸ್ವಸ್ತಿಕ ಯುಗಳ ಧ್ಯಾನ – ಮಾಡುವ ಜ್ಞಾನ
ಧ್ವಸ್ತ ದೋಷ ಸಮಸ್ತ ಜಗತ್ತಿಗೆ
ಸ್ವಸ್ಥಿದ ನೆನೆನಿದ ಭೂಪಾ – ಭವ್ಯ ಪ್ರತಾಪ        || ೨ ||

ಕುಟಿಲ ವಿಮಲತರ ಪಟಲಾಂಧಕಾರಕೆ
ಪಟುತರ ದಿನಮಣಿ ರೂಪ – ನಿಜಜನ ಸುರಪ
ಸ್ಫುಟ ಮೋದತೀರ್ಥರ ಸ್ಫಟಿಕ ಜಲಧಿಯೊಳು
ಸ್ಫುಟಿತಹಾಟಕಚಂದ್ರ – ಸದ್ಗುಣಸಾಂದ್ರ
ಶಠಮಾಳ್ಪರ ಬಹು ಹಟದಿ ಶಿಕ್ಷಿಸುವ
ಚಟುಲ ಜನರ ಪರಿಪಾಲ – ಕರುಣ ವಿಶಾಲ
ಕಿಟಿರದನ ಭವನದಿತಟಕೃತಮಂದಿರ
ದಿಟ ಗುರುಜಗನ್ನಾಥವಿಠ್ಠಲ ದೂತ                || ೩ ||
******