Audio by Vidwan Sumukh Moudgalya
ಶ್ರೀ ಮುತ್ತಗಿ ಸ್ವಾಮಿರಾಜಾಚಾರ್ಯ ವಿರಚಿತ (ರಘುರಾಮವಿಠ್ಠಲಾಂಕಿತ)
" ಆತ್ಮನಿವೇದನಾ ಕೃತಿ "
(ಷೋಡಶೋಪಚಾರಗಳನ್ನು ಉಲ್ಲೇಖಿಸಿ)
ರಾಗ : ಚಂದ್ರಕೌಂನ್ಸ್ ತಿಶ್ರನಡೆ
ಎಂತು ಪೂಜಿಸಿದೆನೈ ನೀರಜಾಕ್ಷ ನಿನ್ನ-
ನೆಂತು ಪೂಜಿಸಿದೆನೈ ನೀರಜಾಕ್ಷ ॥ಪ॥
ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ॥ಅ.ಪ॥
ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು
ಮಂಗಳದ ನಾಮ ಮುದ್ರೆಗಳ ಧರಿಸೀ
ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂದಂತ-
ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ॥೧॥
ನಿರ್ಮಲೋದಕದಿಂದ ಅಭಿಷೇಚನವ ಗೈದು
ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ
ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು
ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ॥೨॥
ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ
ಅರ್ಘ್ಯ ತುಳಸಿಗಳನರ್ಪಿಸಿ ನಲಿದೆನೇ
ಅರ್ಭಕನು ನಾ ಕನಕರತ್ನಾಭರಣಗಳನು
ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ॥೩॥
ಧೂಪದೀಪಗಳಿಂದ ವಾದ್ಯ ವೈಭವದಿಂದ
ಗೀತನರ್ತನಗಳಿಂ ಸೇವಿಸಿದೆನೇ
ಶ್ರೀಪತಿಯು ನೀ ಜಗಕೆ ಜೀವಜಾಲಕೆ ಅಂತ-
ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ॥೪॥
ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ
ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ
ಭವರೋಗಪೀಡಿತನು ನಾ ನಿನ್ನ ಹವಣರಿತು
ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೊ॥೫॥
ಸರ್ವಶಕ್ತನು ನೀನು ಸರ್ವಜ್ಞಪತಿ ನೀನು
ಸರ್ವದಾ ತೃಪ್ತನೋ ನಿಗಮವೇದ್ಯಾ
ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ
ಗರ್ವಿಶಠನಜ್ಞತಮನೆನಗೆ ವಶವೇ ॥೬॥
ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ-
ಗಾದಿಯಂತ್ಯಗಳ ಜ್ಞಾನದ ಮೂಲವರಿಯೆ ನಮ್ಮ
ಮೇದಿನಿಯ ತನುಜೆಯಾ ಕೈಪಿಡಿದ ಪ್ರಭುವೆಂದು
ಸಾದರದಿ ನಮಿಪೆ ಪೊರೆ ರಘುರಾಮವಿಠಲ ॥೭॥
****
..
ಎಂತು ಪೂಜಿಸಿದೆನೈ ನೀರಜಾಕ್ಷ ನಿನ್ನ
ನೆಂತು ಪೂಜಿಸಿದೆನೈ ನೀರಜಾಕ್ಷ ಪ
ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ಅ.ಪ
ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು
ಮಂಗಳದ ನಾಮ ಮುದ್ರೆಗಳ ಧರಿಸೀ
ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂ ದಂತ
ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ1
ನಿರ್ಮಲೋದಕದಿಂದ ಅಭಿಷೇಚನವ ಗೈದು
ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ
ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು
ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ 2
ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ
ನಘ್ರ್ಯ ತುಳಸಿಗಳನರ್ಪಿಸಿ ನಲಿದೆನೇ
ಅರ್ಭಕನು ನಾ ಕನಕರತ್ನಾಭರಣಗಳನು
ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ 3
ಧೂಪದೀಪಗಳಿಂದ ವಾದ್ಯ ವೈಭವದಿಂದ
ಗೀತನರ್ತನಗಳಿಂ ಸೇವಿಸಿದೆನೇ
ಶ್ರೀಪತಿಯು ನೀ ಜಗದ ಜೀವಜಾಲಕೆ ಅಂತ
ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ 4
ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ
ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ
ಭವರೋಗಪೀಡಿತನು ನಾ ನಿನ್ನ ಹವಣರಿತು
ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೋ5
ಸರ್ವಶಕ್ತನು ನೀನು ಸರ್ವಜ್ಞಪತಿ ನೀನು
ಸರ್ವದಾ ತೃಪ್ತನೋ ನಿಗಮವೇದ್ಯಾ
ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ
ಗರ್ವಿಶಠನಜ್ಞತಮನೆನಗೆ ವಶವೇ 6
ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ
ಗಾದಿಯಂತ್ಯಗಳ ಜ್ಞಾನದ ಮೂಲವರಿಯೆ | ನಮ್ಮ
ಮೇದಿನಿಯ ತನುಜೆಯಾ ಕೈಪಿಡಿದ ಪ್ರಭುವೆಂದು
ಸಾದರದಿ ನಮಿಪೆ ಪೊರೆ ರಘುರಾಮವಿಠಲ 7
****