Tuesday, 1 June 2021

ಎಂತು ಪೂಜಿಸಿದೆನೈ ನೀರಜಾಕ್ಷ ankita raghurama vittala ಆತ್ಮನಿವೇದನಾ ಕೃತಿ ENTU POOJISIDENAI NEERAJAKSHA

ರಾಗ : ಚಂದ್ರಕೌಂನ್ಸ್   ತಿಶ್ರನಡೆ 

Audio by Vidwan Sumukh Moudgalya


RESTART MOBILE IF AUDIO IS NOT PLAYING  

or just scroll down for other devaranama/ CLICK-> HOME

ಶ್ರೀ ಮುತ್ತಗಿ ಸ್ವಾಮಿರಾಜಾಚಾರ್ಯ ವಿರಚಿತ (ರಘುರಾಮವಿಠ್ಠಲಾಂಕಿತ)


" ಆತ್ಮನಿವೇದನಾ ಕೃತಿ "

(ಷೋಡಶೋಪಚಾರಗಳನ್ನು ಉಲ್ಲೇಖಿಸಿ)


ಎಂತು ಪೂಜಿಸಿದೆನೈ ನೀರಜಾಕ್ಷ ನಿನ್ನ-

ನೆಂತು ಪೂಜಿಸಿದೆನೈ ನೀರಜಾಕ್ಷ ॥ಪ॥

ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ॥ಅ.ಪ॥


ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು

ಮಂಗಳದ ನಾಮ ಮುದ್ರೆಗಳ ಧರಿಸೀ

ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂದಂತ-

ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ॥೧॥


ನಿರ್ಮಲೋದಕದಿಂದ ಅಭಿಷೇಚನವ ಗೈದು

ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ

ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು

ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ॥೨॥


ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ

ಅರ್ಘ್ಯ ತುಳಸಿಗಳನರ್ಪಿಸಿ ನಲಿದೆನೇ

ಅರ್ಭಕನು ನಾ ಕನಕರತ್ನಾಭರಣಗಳನು

ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ॥೩॥


ಧೂಪದೀಪಗಳಿಂದ ವಾದ್ಯ ವೈಭವದಿಂದ

ಗೀತನರ್ತನಗಳಿಂ ಸೇವಿಸಿದೆನೇ

ಶ್ರೀಪತಿಯು ನೀ ಜಗಕೆ ಜೀವಜಾಲಕೆ ಅಂತ-

ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ॥೪॥


ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ

ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ

ಭವರೋಗಪೀಡಿತನು ನಾ ನಿನ್ನ ಹವಣರಿತು

ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೊ॥೫॥


ಸರ್ವಶಕ್ತನು ನೀನು ಸರ್ವಜ್ಞಪತಿ ನೀನು

ಸರ್ವದಾ ತೃಪ್ತನೋ ನಿಗಮವೇದ್ಯಾ

ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ

ಗರ್ವಿಶಠನಜ್ಞತಮನೆನಗೆ ವಶವೇ ॥೬॥


ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ-

ಗಾದಿಯಂತ್ಯಗಳ ಜ್ಞಾನದ ಮೂಲವರಿಯೆ  ನಮ್ಮ

ಮೇದಿನಿಯ ತನುಜೆಯಾ ಕೈಪಿಡಿದ ಪ್ರಭುವೆಂದು

ಸಾದರದಿ ನಮಿಪೆ ಪೊರೆ ರಘುರಾಮವಿಠಲ ॥೭॥

***


Pallavi

Entu pūjisidenai nīrajākṣa ninna |

Kantupita enna nī kāyveyentō kamalākṣa ||


Charana 1

Gaṅgēyudakadi mindu siṅgarada maḍiyuṭṭu |

Maṅgaḷada nāma mudregala dharisī |

Aṅgakaranagaḷa śōdhisi nyāsa mantradidanta-

Raṅgadi bimbamūrtiya chintisidenē ||


Charana 2

Nirmalōdakadinda abhiṣēchanava gaidu |

Nirmālya tīrthavanu sēvisidenē |

Marmavaritādimūrtiye ninna biṁbavanu |

Nirmalāntaḥkaraṇa pīṭhadali nilisidenē ||


Charana 3

Śubravastrugaḷa parimaḷa gandha puṣpagaḷa |

Arghya tuḷasigaḷanarpisi nalidenē |

Arbhakanu nā kanakaratnābharaṇagaḷanu |

Abdhi tanayaḷaramana ninage arpisidenē ||


Charana 4

Dhūpadīpagaḷinda vādya vaibhavadinda |

Gītanartana-gaḷim sēvisidenē |

Śrīpatiyu nī jagake jīvajālake anta-

Rātmanenduaritu naivēdyavarpidenē ||


Charana 5

Vividha khādyagaḷalli vividha rasa rūpadali |

Vividha sānnidhyagaḷa dhyānisidenē |

Bhavarōgapīḍitanu nā ninna havaṇaritu |

Suvihita vidhiyante pūjisuva pariyentō ||


Charana 6

Sarvaśaktanu nīnu sarvajñapati nīnu |

Sarvadā tṛptanō nigamavēdyā |

Sarvabhūtāntargatanu ninage uṇabaḍise |

Garviśaṭhanajñatamane-nage vaśavē ||


Charana 7

Vēdaśāstragaḷa gandhavanariye hariye nina- |

Gādiyantyagaḷa jñānada mūlavariye namma |

Mēdiniya tanujeyā kaipidida prabhuvendu |

Sādaradi namipe pore raghurāmaviṭhala ||

***

Pronunciation Guide (Simplified)

Retroflex Sounds (ḍ, ḷ, ṇ, ṣ, ṭ): Curl your tongue tip back to touch the roof of the mouth.

Aspirated Consonants (dh, bh, gh, kh, ph): Add a soft puff of air after the letter.

Vowel Length (ā, ī, ū, ē, ō): Hold these sounds for twice the duration of short vowels.

'Ś' Sound: Pronounce 'ś' like the 'sh' in "shoe".

Rhythmic Flow: Maintain a steady pace, holding the final syllables of each line slightly longer to keep the musical rhythm.

***


ಶ್ರೀ ಮುತ್ತಗಿ ಸ್ವಾಮಿರಾಜಾಚಾರ್ಯರು ರಚಿಸಿರುವ ಈ "ಆತ್ಮನಿವೇದನಾ ಕೃತಿ"ಯು ಭಗವಂತನಿಗೆ ಸಲ್ಲಿಸುವ ಷೋಡಶೋಪಚಾರಗಳ ಸಾರವನ್ನು ಒಳಗೊಂಡಿದೆ. ಇದರ ಅರ್ಥ ಮತ್ತು ವಿವರಣೆ ಇಲ್ಲಿದೆ.


Summary (Kannada)

ಈ ಕೀರ್ತನೆಯಲ್ಲಿ ಆಚಾರ್ಯರು ಭಗವಂತನಿಗೆ ಷೋಡಶೋಪಚಾರ (16 ಬಗೆಯ ಪೂಜಾ ವಿಧಿಗಳು) ಪೂಜೆಯನ್ನು ಹೇಗೆ ಮಾಡಬೇಕು ಎಂಬುದನ್ನು ವಿವರಿಸುತ್ತಲೇ, ತಮ್ಮ ಅಜ್ಞಾನವನ್ನು ಒಪ್ಪಿಕೊಳ್ಳುತ್ತಾರೆ. ಭಗವಂತನೇ ಸರ್ವಸ್ವ, ಅವನೇ ಎಲ್ಲದರ ಅಂತರ್ಯಾಮಿ ಎಂದು ತಿಳಿದ ಮೇಲೆ ನಾವೇನು ಅರ್ಪಿಸಲು ಸಾಧ್ಯ? ಎನ್ನುವ ಭಕ್ತಿಭಾವ ಇಲ್ಲಿದೆ. ಅಂತಿಮವಾಗಿ "ನಿನಗೆ ಅಣಿತೊಡಿಸಲು ನಾನೇನು ಅರ್ಹ? ನೀನೇ ಕರುಣಿಸು" ಎಂದು ರಘುರಾಮ ವಿಠಲನನ್ನು ಪ್ರಾರ್ಥಿಸಿದ್ದಾರೆ.


Padyada Artha (Kannada)

ಪಲ್ಲವಿ:

ಎಂತು ಪೂಜಿಸಿದೆನೈ ನೀರಜಾಕ್ಷ ನಿನ್ನ | ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ||

ಅರ್ಥ: ಕಮಲಾಕ್ಷನೇ, ನಿನ್ನನ್ನು ನಾನು ಹೇಗೆ ಪೂಜಿಸಲಿ? ಮನ್ಮಥನ ತಂದೆಯೇ, ನೀನೇ ನನ್ನನ್ನು ರಕ್ಷಿಸು.


ಚರಣ 1:

ಗಂಗೆಯುದಕದಿ ಮಿಂದು... ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂದ... ಬಿಂಬಮೂರ್ತಿಯ ಚಿಂತಿಸಿದೆನೇ ||

ಅರ್ಥ: ಪವಿತ್ರ ಗಂಗೆಯಿಂದ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ, ನಾಮ-ಮುದ್ರೆಗಳನ್ನು ಧರಿಸಿ, ನ್ಯಾಸ ಮಂತ್ರಗಳಿಂದ ಅಂತರ್ಯಾಮಿ ಬಿಂಬಮೂರ್ತಿಯನ್ನು ಧ್ಯಾನಿಸಿದೆ.


ಚರಣ 2:

ನಿರ್ಮಲೋದಕದಿಂದ ಅಭಿಷೇಚನವ ಗೈದು... ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ ||

ಅರ್ಥ: ನಿರ್ಮಲವಾದ ಜಲದಿಂದ ಅಭಿಷೇಕ ಮಾಡಿ, ತೀರ್ಥ ಸೇವಿಸಿ, ನಿನ್ನ ಬಿಂಬವನ್ನು ನನ್ನ ನಿರ್ಮಲವಾದ ಮನಸ್ಸಿನ ಪೀಠದಲ್ಲಿ ಪ್ರತಿಷ್ಠಾಪಿಸಿದೆ.


ಚರಣ 3:

ಶುಭ್ರವಸ್ತ್ರಗಳ... ಅರ್ಘ್ಯ ತುಳಸಿಗಳನರ್ಪಿಸಿ ನಲಿದೆನೇ... ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ ||

ಅರ್ಥ: ಗಂಧ, ಪುಷ್ಪ, ತುಳಸಿಗಳನ್ನು ಅರ್ಪಿಸಿ, ಲಕ್ಷ್ಮೀಪತಿಯಾದ ನಿನಗೆ ರತ್ನಭೂಷಣಗಳನ್ನು ಅರ್ಪಿಸಿ ನಲಿದಿದ್ದೇನೆ.


ಚರಣ 4:

ಧೂಪದೀಪಗಳಿಂದ... ಗೀತನರ್ತನಗಳಿಂ ಸೇವಿಸಿದೆನೇ... ನೈವೇದ್ಯವರ್ಪಿಸಿದೆನೇ ||

ಅರ್ಥ: ಧೂಪ, ದೀಪ, ಸಂಗೀತ ಮತ್ತು ನೃತ್ಯಗಳಿಂದ ಸೇವಿಸಿ, ನೀನೇ ಜಗತ್ತಿನ ಎಲ್ಲ ಜೀವಿಗಳ ಆತ್ಮ ಎಂದು ತಿಳಿದು ನೈವೇದ್ಯ ಅರ್ಪಿಸಿದ್ದೇನೆ.


ಚರಣ 5:

ವಿವಿಧ ಖಾದ್ಯಗಳಲ್ಲಿ... ಭವರೋಗಪೀಡಿತನು ನಾ... ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೊ ||

ಅರ್ಥ: ವಿವಿಧ ಖಾದ್ಯಗಳನ್ನು ಅರ್ಪಿಸಿ, ನಿನ್ನ ಸಾನ್ನಿಧ್ಯವನ್ನು ಧ್ಯಾನಿಸಿದೆ. ಸಂಸಾರವೆಂಬ ರೋಗದಿಂದ ಪೀಡಿತನಾದ ನಾನು ನಿನಗೆ ಪೂಜೆ ಮಾಡುವ ಕ್ರಮ ನನಗೇ ಗೊತ್ತಿಲ್ಲ.


ಚರಣ 6:

ಸರ್ವಶಕ್ತನು ನೀನು... ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ... ನನಗೆ ವಶವೇ ||

ಅರ್ಥ: ನೀನು ಸರ್ವಜ್ಞ, ಸರ್ವಶಕ್ತ. ಎಲ್ಲರ ಒಳಗಿರುವ ನಿನಗೆ ನಾನು ಊಟ ಹಾಕುವುದೇ? ಇದು ನನ್ನ ಅಜ್ಞಾನವಲ್ಲವೇ?


ಚರಣ 7:

ವೇದಶಾಸ್ತ್ರಗಳ ಗಂಧವನರಿಯೆ... ಸಾದರದಿ ನಮಿಪೆ ಪೊರೆ ರಘುರಾಮವಿಠಲ ||

ಅರ್ಥ: ನನಗೆ ವೇದ ಶಾಸ್ತ್ರಗಳ ಜ್ಞಾನವಿಲ್ಲ. ರಘುರಾಮ ವಿಠಲನೇ, ನಿನ್ನ ಮಹಿಮೆ ತಿಳಿಯದ ನಾನು ನಿನಗೆ ನಮಸ್ಕರಿಸುತ್ತೇನೆ, ದಯವಿಟ್ಟು ನನ್ನನ್ನು ಕಾಪಾಡು.

***

Summary

In this "Atmanivedana" (self-surrender) hymn, the poet describes the 16-fold worship (Shodashopachara) offered to Lord Rama (Raghurama Vithala). He recounts the rituals—bathing, wearing sacred marks, performing Nyasa, offering perfumes, jewelry, incense, lamps, and food. He humbly confesses that as the Lord is the indweller of all beings (Antaryami), his offerings are insufficient and born of limited understanding. He concludes with complete surrender, asking the Lord to accept his humble salutations.


Pallavi

Entu pujisidenai nirajaksha ninna |

Kantupita enna ni kayveyento kamalaksha ||

Meaning: O Lotus-eyed Lord, how can I worship You? O Father of Manmatha, please protect me.


Stanza 1

Gangeyudakadi mindu singarada madiyuttu |

Mangalada nama mudregala dharisi |

Angakaranagala shodhisi nyasa mantradidanta-

Rangadi bimbamurtiya chintisidene ||

Meaning: Bathing in sacred water, wearing clean clothes and sacred marks, purifying my senses through mantras, I meditated upon Your Bimba-murti in my heart.


Stanza 2

Nirmalodakadinda abhishechanava gaidu |

Nirmalya tirthavanu sevisidene |

Marmavaritadimurtiye ninna bimbavanu |

Nirmalantahkarana pithadali nilisidene ||

Meaning: Performing abhishek with pure water, partaking in the holy Tirtha, I installed You, the primordial Lord, on the pedestal of my pure heart.


Stanza 3

Shubravastragala parimala gandha pushpagala |

Arghya tulasigalanarpisi nalidene |

Arbhakanu na kanakaratnabharanagalanu |

Abdhi tanayalaramana ninage arpisidene ||

Meaning: Offering clean clothes, fragrant flowers, and Tulasi, I, like a small child, offered golden ornaments to You, the consort of Lakshmi.


Stanza 4

Dhupadipaladinda vadya vaibhavadinda |

Gitanartanagalim sevisidene |

Sripatiru ni jagake jivajalake anta-

Ratmanenduaritu naivedyavarpidene ||

Meaning: Serving You with incense, lamps, music, and dance, I offered food, realizing You are the soul of all living beings.


Stanza 5

Vividha khadyagalalli vividha rasa rupadali |

Vividha sannidhyagala dhyanisidene |

Bhavarogapiditanu na ninna havanaritu |

Suvihita vidhiyante pujisuva pariyento ||

Meaning: Meditating on Your presence in various forms, I, who am suffering from the disease of worldly existence, wonder how to worship You correctly.


Stanza 6

Sarvashaktanu ninu sarvajñapati ninu |

Sarvada truptano nigamavedyat |

Sarvabhutantargatanu ninage unabadise |

Garvishathanajnatamanenage vashave ||

Meaning: You are All-powerful, All-knowing, and eternally satisfied. How can I, an ignorant and arrogant being, offer food to You who dwell within all creatures?


Stanza 7

Vedashastragala gandhavanariye hariye nina- |

Gadiyantyagala jnanada mulavariye namma |

Mediniya tanujeya kaipidida prabhuvendu |

Sadaradi namipe pore raghuramavithala ||

Meaning: I know not the scent of Vedas and Shastras. I bow to You, the husband of Sita, O Raghurama Vithala, please protect me.

***


ಎಂತು ಪೂಜಿಸಿದೆನೈ ನೀರಜಾಕ್ಷ ನಿನ್ನ

ನೆಂತು ಪೂಜಿಸಿದೆನೈ ನೀರಜಾಕ್ಷ ಪ


ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ಅ.ಪ


ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು

ಮಂಗಳದ ನಾಮ ಮುದ್ರೆಗಳ ಧರಿಸೀ

ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂ ದಂತ

ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ1

ನಿರ್ಮಲೋದಕದಿಂದ ಅಭಿಷೇಚನವ ಗೈದು

ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ

ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು

ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ 2

ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ

ನಘ್ರ್ಯ ತುಳಸಿಗಳನರ್ಪಿಸಿ ನಲಿದೆನೇ

ಅರ್ಭಕನು ನಾ ಕನಕರತ್ನಾಭರಣಗಳನು

ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ 3

ಧೂಪದೀಪಗಳಿಂದ ವಾದ್ಯ ವೈಭವದಿಂದ

ಗೀತನರ್ತನಗಳಿಂ ಸೇವಿಸಿದೆನೇ

ಶ್ರೀಪತಿಯು ನೀ ಜಗದ ಜೀವಜಾಲಕೆ ಅಂತ

ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ 4

ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ

ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ

ಭವರೋಗಪೀಡಿತನು ನಾ ನಿನ್ನ ಹವಣರಿತು

ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೋ5

ಸರ್ವಶಕ್ತನು ನೀನು ಸರ್ವಜ್ಞಪತಿ ನೀನು

ಸರ್ವದಾ ತೃಪ್ತನೋ ನಿಗಮವೇದ್ಯಾ

ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ

ಗರ್ವಿಶಠನಜ್ಞತಮನೆನಗೆ ವಶವೇ 6

ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ

ಗಾದಿಯಂತ್ಯಗಳ ಜ್ಞಾನದ ಮೂಲವರಿಯೆ | ನಮ್ಮ

ಮೇದಿನಿಯ ತನುಜೆಯಾ ಕೈಪಿಡಿದ ಪ್ರಭುವೆಂದು

ಸಾದರದಿ ನಮಿಪೆ ಪೊರೆ ರಘುರಾಮವಿಠಲ 7

***


  ಶ್ರೀ ಮುತ್ತಗಿ ಸ್ವಾಮಿರಾಜಾಚಾರ್ಯ ವಿರಚಿತ 

(ರಘುರಾಮವಿಠ್ಠಲಾಂಕಿತ)


" ಆತ್ಮನಿವೇದನಾ ಕೃತಿ "

(ಷೋಡಶೋಪಚಾರಗಳನ್ನು ಉಲ್ಲೇಖಿಸಿ)


 ರಾಗ : ಚಂದ್ರಕೌಂನ್ಸ್   ತಿಶ್ರನಡೆ 


ಎಂತು ಪೂಜಿಸಿದೆನೈ ನೀರಜಾಕ್ಷ ನಿನ್ನ-

ನೆಂತು ಪೂಜಿಸಿದೆನೈ ನೀರಜಾಕ್ಷ ॥ಪ॥

ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ॥ಅ.ಪ॥


ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು

ಮಂಗಳದ ನಾಮ ಮುದ್ರೆಗಳ ಧರಿಸೀ

ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂದಂತ-

ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ॥೧॥


ನಿರ್ಮಲೋದಕದಿಂದ ಅಭಿಷೇಚನವ ಗೈದು

ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ

ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು

ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ॥೨॥


ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ

ಅರ್ಘ್ಯ ತುಳಸಿಗಳನರ್ಪಿಸಿ ನಲಿದೆನೇ

ಅರ್ಭಕನು ನಾ ಕನಕರತ್ನಾಭರಣಗಳನು

ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ॥೩॥


ಧೂಪದೀಪಗಳಿಂದ ವಾದ್ಯ ವೈಭವದಿಂದ

ಗೀತನರ್ತನಗಳಿಂ ಸೇವಿಸಿದೆನೇ

ಶ್ರೀಪತಿಯು ನೀ ಜಗಕೆ ಜೀವಜಾಲಕೆ ಅಂತ-

ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ॥೪॥


ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ

ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ

ಭವರೋಗಪೀಡಿತನು ನಾ ನಿನ್ನ ಹವಣರಿತು

ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೊ॥೫॥


ಸರ್ವಶಕ್ತನು ನೀನು ಸರ್ವಜ್ಞಪತಿ ನೀನು

ಸರ್ವದಾ ತೃಪ್ತನೋ ನಿಗಮವೇದ್ಯಾ

ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ

ಗರ್ವಿಶಠನಜ್ಞತಮನೆನಗೆ ವಶವೇ ॥೬॥


ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ-

ಗಾದಿಯಂತ್ಯಗಳ ಜ್ಞಾನದ ಮೂಲವರಿಯೆ  ನಮ್ಮ

ಮೇದಿನಿಯ ತನುಜೆಯಾ ಕೈಪಿಡಿದ ಪ್ರಭುವೆಂದು

ಸಾದರದಿ ನಮಿಪೆ ಪೊರೆ ರಘುರಾಮವಿಠಲ ॥೭॥

****


No comments:

Post a Comment