ಕಾಖಂಡಕಿ ಶ್ರೀ ಮಹಿಪತಿರಾಯರು
ಭಜಿಸಿ ನೋಡಿರೋ ಭಾವಭೋಕ್ತನ ಅಜಸುರೊಂದ್ಯ ಸುಜನಪಾಲ ತ್ರಿಜಗದಾತ್ಮನ ಪ
ಭಾವಕ ಸುಲಭ ಜೀವದ ನೆಲೆನಿಭ ಕಾವಕರುಣ ದೇವನೀತ ಪ್ರಾಣವಲ್ಲಭ 1
ರಾಜಿಸುತಿಹ್ಯನು ತೇಜೋಮಯದಲಿ ಭಜಕ ಪ್ರಿಯನಾಗಿ ಒಲಿವ ನಿಜಸುಮನದಲಿ 2
ಡಂಭಭಕುತಿಗೆ ಇಂಬದೋರನು ನಂಬಿನಡೆವ ಭಕ್ತಜನರ ಮನೆಯೊಳಿಹ್ಯನು 3
ಭಕುತಿ ಭಾವಕ ನೆಲಿಯುಗೊಂಬನು ಮಕುಟಮಣಿ ಸುಭಾನುಕೋಟಿ ಪ್ರಕಟ ಹೊಳೆವನು 4
ಒಂದು ಮನದಲಿ ಹೊಂದಿ ಸುಖಿಸಿರ್ಯೊ ಎಂದೆಂದು ಬಿಡದೆ ಸಲಹುತಿಹ್ಯ ಮಹಿಪತಿ ಸ್ವಾಮಿಯ 5
***