Showing posts with label ಒಂದು ಪೂವು ಒಂದು ಫಲವೊಂದೇ purandara vittala. Show all posts
Showing posts with label ಒಂದು ಪೂವು ಒಂದು ಫಲವೊಂದೇ purandara vittala. Show all posts

Tuesday 3 December 2019

ಒಂದು ಪೂವು ಒಂದು ಫಲವೊಂದೇ purandara vittala

[8:39 PM, 11/29/2019] SURESH HULIKUNTI RAO: ರಾಗ: ಕಾಮ್ಭೋಜಿ    ತಾಳ : ಝಂಪೆ

ಒಂದು ಪೂವು  ಒಂದು ಫಲವೊಂದೇ  ಬಿಂದು ಜಲ ಒಂದೇ ತುಳಸಿದಳ
ಒಂದೇ  ಕೇವಲ ದನಿಯೊಂದೇ  ಪ್ರದಕ್ಷಿಣೆಯೊಂದನರ್ಪಿಸಿದೊಡೆ ಕುಂದದಾನಂದನೀವ
ನುಡಿದ ಶಬ್ಧಗಳೆಲ್ಲ  ಹೂವುಗಳು  ನಡಿವುದೆಲ್ಲವು  ನಾಟ್ಯಂಗಳು ||


ಹೂವ ತರುವರ ಮನೆಗೆ  ಹುಲ್ಲ ತರುವ
ಆವ ಲಕುಮಿ ರಮಣ  ಇವಗಿಲ್ಲ ಗರುವ ||

ಒಂದುದಳ  ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗೆ  ಅರ್ಪಿತವೆನ್ನುತ್ತ  |
ಒಂದೇ ಮನದಲಿ  ಸಿಂಧುಶಯನ  ಮುಕುಂದಯನೇ  ಎಂದೆಂದೂ  ವಾಸಿಪನ ಮಂದಿರದೊಳಗೆ ||

ಪರಿ ಪರಿಯ ಪುಷ್ಪಗಳ  ಪರಮಾತ್ಮಗರ್ಪಿಸಿ  ಪರಿಪೂರ್ಣನೆಂದು  ಪೂಜೆಯನು  ಮಾಡೇ |
ಸರಿಸಜಾಕ್ಷನು ತನ್ನ ಸಕಲ  ಸ್ವಾತಂತ್ರ್ಯದಲಿ  ಸರಿಭಾಗ ಕೊಡುವ  ತನ್ನರಮನೆಯೊಳಗೆ ||

ಪಾಂಡವರ ಮನೆಯೊಳಗೆ  ಕುದುರೆಗಳ ತಾ ತೊಳೆದು ಪುಂಡರಿಕಾಕ್ಷ  ತಾ  ಹುಲ್ಲ ತಿನಿಸಿದ |
ಅಂಡಜಾದಿಪ  ನಮ್ಮ   ಪುರಂದರ ವಿಠಲನು  ತೊಂಡರಿಗೆ  ತೊಂಡನಾಗಿ  ಸಂಚರಿಸುತಿಹನು ||
********
Lyrics In English



OndE poovu ondu phalavondE bindu jala OndE tulasi dala
OndE kEvaladani ondE pradakshinE ondanarpisidOdE kundadaanandaneeva
nudida shabdagalElla hoovugalu nadivudEllavu naatyangalu....\\2\\


hoova taruvara manEge hulla taruva
aava lakumiramaNa ivagilla garuvaa....

Ondudala shreetulasi bindu gangOdakava
Indiraramanage arpitavennutta
Onde manadali sindhushayanaa mukundaAEne
endendu vaasipana mandirada olage \\hoova\\


paripariya pushpagala paramatmagarpisi
paripoornanEndu poojeyanu maadE
sarijaakshanu tanna sakala swaathanrtyadali
saribhaaga koduva tanna aramanEyOlagE \\hoova\\


pandavara maneyOlagE kudurEgala taa tOlEdu
pundarikaaksha taa hulla tinisida
andajadipa namma purandara viTHalanu

tondarigE tondanagi sancharisutihanu \\hoova\\
*******