Showing posts with label ಬಾಲಕ ಕಂಡೆನು ನಿನ್ನ ಬಾಲಕ gopalakrishna vittala. Show all posts
Showing posts with label ಬಾಲಕ ಕಂಡೆನು ನಿನ್ನ ಬಾಲಕ gopalakrishna vittala. Show all posts

Monday 2 August 2021

ಬಾಲಕ ಕಂಡೆನು ನಿನ್ನ ಬಾಲಕ ankita gopalakrishna vittala

ಬಾಲಕ ಕಂಡೆನು ನಿನ್ನ | ಬಾಲಕ ಪ.


ಬಾಲಕ ಕಂಡೆನು ನಿನ್ನಾ | ಮುದ್ದು

ಬಾಲ ತೊಡಿಗೆ ಇಟ್ಟರನ್ನಾ | ಆಹ

ಶೀಲಯತಿಗಳಿಂದ ಕಾಲ ಕಾಲದ ಪೂಜೆ

ಮೇಲಾಗಿ ಕೈಕೊಂಡು ಪಾಲಿಪ ಸುಜನರ ಅ.ಪ.


ವಸುದೇವ ಕಂದ ಗೋವಿಂದ

ವಸುಧಿ ಭಾರವನಿಳುಹೆ ಬಂದಾ | ಪುಟ್ಟ

ಹಸುಗಳ ಕಾಯ್ವ ಮುಕುಂದ | ರ

ಕ್ಕಸರನೆಲ್ಲರ ತಾನೆ ಕೊಂದಾ | ಆಹಾ

ಹಸುಮಕ್ಕಳೊಡಗೂಡಿ ಮೊಸರು ಬೆಣ್ಣೆಯ ತಿಂದು

ಶಶಿಮುಖಿಯರಮನಕಸಮ ಸಂತಸವಿತ್ತು 1

ವಿಶ್ವವ್ಯಾಪಕನಾದ ಬಾಲಾ | ಸರ್ವ

ವಿಶ್ವ ತನ್ನೊಳಗಿಟ್ಟ ಬಾಲಾ | ಸ

ರ್ವೇಶ್ವರನೆನಿಸುವ ಬಾಲಾ | ಬ್ರಹ್ಮ

ಈಶ್ವರ ಸುರ ಪರಿಪಾಲಾ | ಆಹ

ವಿಶ್ವಾದಿ ರೂಪಕ ವಿಶ್ವ ಪ್ರದೀಪಕ

ವಿಶ್ವನಾಟಕ ಸರ್ವ ವಿಶ್ವಚೇಷ್ಟಕನಾದ 2

ಸಿರಿಗರಿಯದ ಗುಣನೀತಾ | ಮತ್ತೆ

ಸಿರಿಯ ತನ್ನೊಳಗಿಟ್ಟಾತಾ | ಆ

ಸಿರಿಯಲ್ಲಿ ತಾನಿರುವಾತಾ | ಸೃಷ್ಟಿ

ಸಿರಿಯಿಂದ ಮಾಡಿಸುವಾತಾ | ಆಹ

ಸಿರಿಯ ಬಿಟ್ಟಗಲದೆ ಸಿರಿಗೆ ಮೋಹಕನಾಗಿ

ಸಿರಿ ಸೇವೆ ಕೈಕೊಂಬ ಸಿರಿಕಾಂತ ಶ್ರೀಕೃಷ್ಣ 3

ಪ್ರಳಯಾಂಬುವಟಪತ್ರ ಶಯನಾ | ಥಳ

ಥಳಿಸುವ ಪದತಳ ಅರುಣಾ | ವರ್ಣ

ಎಳೆಗೂಸಿನಂತಿಹ ಚಿಣ್ಣಾ | ಆರು

ತಿಳಿಯಲಾಗದ ಗುಣಪೂರ್ಣ | ಆಹ

ನಳಿನಭವನ ಪೊಕ್ಕಳಲಿ ಪಡದು ತನ್ನ

ನಿಲಯ ತೋರಿಸಿ ಕಾಯ್ದ ಚಲುವ ಚನ್ನಿಗ ದೇವ4

ಸತಿ ಪ್ರಾಯ ಕೆಡಿಸದೆ ತನ್ನಾ | ಮೈಯ್ಯೋಳ್

ಸುತರ ಪಡೆದಂಥ ಸಂಪನ್ನಾ | ವೇದ

ತತಿಗೆ ಶಿಲ್ಕದ ಸುಗುಣಾರ್ಣ | ಅ

ದ್ಭುತ ರೂಪ ಜಗದೇಕ ಘನ್ನಾ | ಆಹ

ಜಿತಮಾನಿಗಳಿಗೆ ಹಿತಕೃತಿ ಕಲ್ಪಿಸಿ

ಜತನದಿ ಜಗಜೀವತತಿಗಳ ಕಾಯೂವ 5

ಸುರತತಿಗಳನೆ ನಿರ್ಮೀಸಿ | ಅವರೊಳ್

ತರತಮ ಭೇದ ಕಲ್ಪಿಸಿ | ತನ್ನ

ವರಪುತ್ರನೋಶಕೆ ವಪ್ಪೀಸಿ | ಸೃಷ್ಟಿ

ಗರಸನ್ನ ಮಾಡಿ ನೀ ನಿಲಿಸೀ | ಆಹ

ಕಿರಿಪುತ್ರನಿಗೆ ಭಾವಿ ಪರಮೇಷ್ಟಿ ಪದವಿತ್ತು

ಸರುವ ಜೀವರ ಶ್ವಾಸಕ್ಕರಸನೆಂದೆನಿಸಿದ 6

ಸರಿ ಇಲ್ಲ ವಾಯುಗೆಂದೆನಿಸೀ | ತತ್ವ

ಸುರರಿಗಧೀಶನೆಂದೆನಿಸೀ | ತನ್ನ

ಶರಣರ ಕಾಯ್ವನೆಂದೆನಿಸೀ | ಅವ

ನಿರುವಲ್ಲಿ ತಾ ಸಿದ್ಧನೆನಿಸೀ | ಆಹ

ತರಣಿಜಗೊಲಿಯುತ್ತ ಕುರುಕುಲವಳಿಯುತ್ತ

ಪರಮತ ಖಂಡಿಸಿ ಕರೆಯೆ ತನ್ನನು ಬಂದಾ 7

ತ್ರಿವಿಧ ಜೀವರಗತಿದಾತಾ | ನಮ್ಮ

ಪವನನಂತರ್ಯಾಮಿ ಈತಾ | ಪದ್ಮ

ಭವ ರುದ್ರ ತ್ರಿದಶರ ಪ್ರೀತಾ | ಭಕ್ತ

ರವಸರಕೊದಗುವ ದಾತಾ

ಧ್ರುವಗಜ ಅಜಮೀಳ ಪವನಜ ಸತಿಭಕ್ತ

ನಿವಹ ತಾಪದಿ ಕೂಗೆ ಭುವಿಯಲ್ಲಿ ಪೊರೆದಂಥ 8

ಶುಕ್ಲ ಶೋಣಿತ ನೀಲ ಕಾಯಾ | ದೇವ

ಅಕ್ಲೇಶ ಆನಂದಕಾಯಾ | ಯುಗಕೆ

ತಕ್ಕಂಥ ವರ್ಣಸುಕಾರ್ಯ | ಮಾಳ್ಪ

ರಕ್ಕಸಾಂತಕ ಕವಿಗೇಯಾ | ಆಹ

ಪೊಕ್ಕಳ ನಾಡಿಯೊಳ್ ಸಿಕ್ಕುವ e್ಞÁನಿಗೆ

ದಕ್ಕುವ ಸುರರಿಗೆ ಠಕ್ಕಿಪ ದನುಜರ 6

ಸಚ್ಚಿದಾನಂದ ಸ್ವರೂಪ | ಭಕ್ತ

ರಿಚ್ಛೆ ಸಲ್ಲಿಸಿ ಕಳೆವ ತಾಪಾ | ಶ್ರೀ

ವತ್ಸ ಲಾಂಛನ ಭವ ಕೂಪಾ | ದಲ್ಲಿ

ಮುಚ್ಚಿಡ ತನ್ನನ್ನೆ ಸ್ತುತಿಪಾ | ಆಹ

ಅಚ್ಚ ಭಾಗವತರ ಮೆಚ್ಚಿ ಕಾಯುತ ಅಘ

ಕೊಚ್ಚಿ ತನ್ನುದರದಿ ಬಚ್ಚಿಟ್ಟು ಕಾಯುವ 10

ವಲ್ಲನು ಸಿರಿಸತಿ ಪೂಜೆ | ಮತ್ತೆ

ವಲ್ಲನು ಸುರ ಸ್ತುತಿ ಗೋಜೆ | ತಾ

ನೊಲ್ಲನು ಮುನಿಗಳ ಓಜೆ | ಹರಿ

ವಲ್ಲನು ಋಷಿಯಾಗವ್ಯಾಜೆ | ಆಹ

ಬಲ್ಲಿದ ಭಕುತರ ಸೊಲ್ಲಿಗೊದಗಿ ಬಂದು

ಚಲ್ವರೂಪದಿ ಹೃದಯದಲ್ಲಿ ನಿಲ್ಲುವ ಕರುಣಿ11

ಅಂಬುದಿಶಯನ ಶ್ರೀಕಾಂತಾ | ಸರ್ವ

ಬಿಂಬನಾಗಿಹ ಮಹಶಾಂತ | ತನ್ನ

ನಂಬಿದ ಸುಜನರ ಅಂತಾ | ರಂಗ

ಅಂಬುಜ ಮಧ್ಯ ಪೊಳೆವಂಥಾ | ಆಹ

ಅಂಬುಜನಾಭ ಪ್ರಲಂಬ ಭಂಜನ ಪಶ್ಚಿ-

ಮಾಂಬುಧಿ ತಡಿವಾಸ ಶಂಬರಾರೀಪಿತ12

ಸ್ವಪ್ನದಿ ಗೋಪಿಕರ ತಂದು | ಎನ

ಗೊಪ್ಪಿಸೆ ತನ್ನ ಕೂಸೆಂದು | ಚಿನ್ನ

ದಪ್ಪಾರಭರಣವದೆಂದೂ | ನಾನು

ವಪ್ಪದಿರಲು ಎತ್ತೆನೆಂದೂ | ಆಹಾ

ತಪ್ಪಿಸಿಕೊಳ್ಳೆ ಮತ್ತೊಪ್ಪಿಸಿ ಪೋದಳು

ಅಪ್ಪಿ ಎನ್ನ ತೋಳೊಳೊಪ್ಪಿದ ಶಿಶುರೂಪ 13

ಶ್ರೀ ಮಾಯಾಜಯ ಶಾಂತಿ ರಮಣಾ | ಕೃತಿ

ನಾಮಕ ಶಿರಿವರ ಕರುಣಾ | ಪೂರ್ಣ

ಹೇಮಾಂಡ ಬಹಿರಾವರ್ಣ | ವ್ಯಾಪ್ತ

ಮಾ ಮನೋಹರ ಪ್ರಣವ ವರ್ಣಾ | ಆಹ

ಸ್ವಾಮಿ ಸರ್ವೋತ್ತಮ ಧಾಮತ್ರಯದಿ ವಾಸ

ಶ್ರೀಮದಾಚಾರ್ಯರ ಪ್ರೇಮ ಮೂರುತಿ ಮುದ್ದು14

ದ್ವಿ ದಳ ಮಧ್ಯದಿ ರಥ ನಿಲಿಸೀ | ಪಾರ್ಥ

ನೆದೆಗುಂದೆ ತತ್ವಾರ್ಥ ತಿಳಿಸೀ | ನಿನ್ನ

ಅದುಭುತ ರೂಪ ತೋರಿಸೀ | ಸ-

ನ್ಮುದವಿತ್ತು ಕುರುಕುಲವರಸಿ | ಆಹ

ವಿದುರನ ತಾತ ನಿನ್ನೊಡೆಯ ಬಾಣದಿ ಫಣೆ

ಯದುವೀರ ಚಕ್ರ ಹಸ್ತದಿ ಧರಿಸುತ ಬಂದ 15

ನಿತ್ಯನೂತನ ದೇವ ದೇವಾ | ಸರ್ವ

ಶಕ್ತ ನಿನ್ಹೊರತಾರು ಕಾವಾ | ಎನ್ನ

ಚಿತ್ತದಿ ನೆಲಸು ಪ್ರಭಾವಾ | ಸರ್ವ

ಕೃತ್ಯ ನಿನ್ನದೊ ವಿಜಯ ಭಾವಾ | ಆಹಾ

ಮುಕ್ತಿ ಪ್ರದಾತನೆ ಮುಕ್ತರಿಗೊಡೆಯನೆ

ತತ್ವ ನಿಯಾಮಕ ತತ್ವಾರ್ಥ ತಿಳಿಸೈಯ್ಯಾ 16

ಚರಣತಳಾರುಣ ಪ್ರಭೆಯೂ | ಹತ್ತು

ಬೆರಳ ನಖ ಪಂಕ್ತಿಯ ಪರಿಯೂ | ಗೆಜ್ಜೆ

ಸರಪಳಿ ಪಾಡಗರುಳಿಯೂ | ಮೇಲೆ

ಜರೆಯ ಪೀತಾಂಬರ ನೆರಿಗೆಯೂ | ಆಹ

ವರ ಜಾನುಜಂಘೆಯು ಕರಿಸೊಂಡಲಿನ ತೊಡೆ

ಸರ ಮಧ್ಯ ಉರುಕಟಿ ಕಿರಿಗೆಜ್ಜೆ ಉಡುದಾರ 17

ಸರಸಿಜೋದ್ಭವ ವರಸೂತ್ರ | ಮೇಲೆ

ಮೆರೆವಂಥ ಸಿರಿಯ ಮಂದೀರ | ಹೃದಯ

ವರರತ್ನ ಪದಕದ ಹಾರ | ಸ್ವಚ್ಛ

ದರ ವರ್ಣ ಪೊಲ್ವ ಕಂಧಾರಾ | ಆಹ

ಕರದ್ವಯ ಕಂಕಣುಂಗುರ ತೋಳ ಬಾಪುರಿ

ಸುರರಿಗಭಯ ತೋರ್ಪ ಕರಕಮಲದ ಪುಟ್ಟ 18

ಮೊಸರರ್ಧ ಕಡದಿರೆ ಜನನೀ | ಬಂದು

ಹಸುಗೂಸು ಮೇಲೆ ಬೇಡೆ ನನ್ನೀ | ಯಿಂದ

ಮುಸುಗಿಟ್ಟು ಪಾಲ್ಕುಡಿಯಲು ನೀ | ಒಲೆ

ಬಿಸಿ ಹಾಲುಕ್ಕಲು ಪೋಗೆ ಜನನೀ | ಆಹ

ಹಸಿವಡಗದ ಕೋಪಕ್ಮಸರ್ಗಡಿಗೆಯ ವಡ-

ದೆಸೆವ ಕಡಗೋಲ್ವಡಿದ್ಕೊಸರೋಡಿ ಬಂದ ಹೇ19

ಪದ್ಮ ಮುಖದ ಕಾಂತಿ ಸೊಂಪೂ | ಅಧರ

ತಿದ್ದಿ ಮಾಡಿದ ದಂತ ಬಿಳುಪೂ | ತುಂಬಿ

ಮುದ್ದು ಸುರಿಸುವ ಗಲ್ಲದಿಂಪೂ | ಕರ್ಣ

ದ ದ್ವಯ ಕುಂಡಲ ಕೆಂಪೂ | ಆಹ

ಮಧ್ಯ ಮೂಗುತಿ ನಾಸ ಪದ್ಮದಳಾಕ್ಷವು

ಸದ್ಭಕ್ತರೇಕ್ಷಣ ಶುದ್ಧಾತ್ಮ ಸುಖಪೂರ್ಣ20

ಕಮಲಸಂಭವ ವಾಯುಚಲನಾ | ಹುಬ್ಬು

ವಿಮಲ ಫಣೆ ತಿಲುಕದಹನಾ | ಮೇಲೆ

ಭ್ರಮರ ಕುಂತಳ ಕೇಶ ಚನ್ನಾ | ವಜ್ರ

ಅಮಿತ ಸುವರ್ಣ ಮುತ್ತೀನಾ | ಆಹ

ಕಮನೀಯ ಮಕುಟವು ಸುಮನಸರೊಂದಿತ

ಕಮಲ ತುಳಸಿಹಾರ ವಿಮಲಾಂಗ ಸುಂದರ 21

ಅಂತರ ಬಹಿರ ದಿವ್ಯಾಪ್ತಾ | ಸರ್ವ

ರಂತರ ಬಲ್ಲ ನೀ ಗುಪ್ತಾ | ಜೀವ

ರಂತರಂಗದಿ ವಾಸ ಸುಪ್ತಾ | ದಿಗ

ಳಂತಾನೆ ನಡೆಸುವ ಆತ್ತಾ | ಆಹ

ಸಂತತ ಚಿಂತಿಪರಂತರಂಗದಿ ನಿಂತು

ಕಂತುಪಿತ ಇನಕೋಟಿಕಾಂತಿ ಮೀರಿದ ಪ್ರಭ22

ಎಚ್ಚತ್ತು ಇರುವ ಸರ್ವದಾ | ಕಾಲ

ಮುಚ್ಚಿ ಕೊಂಡಿಪ್ಪೊದೆ ಮೋದಾ | ಅಜ

ನುಚ್ವಾಸದುತ್ಪತ್ತಿಯಾದ | ಬಾಯ

ಮುಚ್ಚಿದ ಅದ್ಭುತ ಪಾದ | ಆಹ

ಮುಚ್ಚೆ ಭೂವ್ಯೋಮವು ಹೆಚ್ಚಿನ ಕೋಪವು

ಇಚ್ಚಿಪವನವಾಸ ಸ್ವೇಚ್ಛಾ ವಿಹಾರನೇ 23

ಗೊಲ್ಲರೊಡನಾಟ ಬಯಸೀ | ವಸ್ತು

ವಲ್ಲದೆ ಪರಸ್ತ್ರೀಯರೊಲಿಸೀ | ಮತ್ತೆ

ಚಲ್ವ ಕುದುರೆ ಏರಿ ಚರಿಸೀ | ತಾ

ನೆಲ್ಲಿ ನೋಡಲು ಪೂರ್ಣನೆನಿಸೀ | ಆಹ

ವಲ್ಲದೆ ದ್ವಾರಕೆ ಇಲ್ಲಿಗೈತಂದು ಮ

ತ್ತೆಲ್ಲರ ಕಾಯುವ ಚೆಲ್ವ ಮಧ್ವೇಶ ಶ್ರೀ 24

ಗೋಪಿ ಕಂದನೆ ಮುದ್ದು ಬಾಲಾ | ಚೆಲ್ವ

ರೂಪ ಸಜ್ಜನ ಪರಿಪಾಲಾ | ಗುರು

ಗೋಪತಿ ನಿತ್ಯ ನಿರ್ಮಾಲಾ | ದೇವಾ

ಗೋಪಾಲಕೃಷ್ಣವಿಠ್ಠಾಲ | ಆಹ

ಈ ಪುಟ್ಟ ರೂಪದಿ ಈ ಪರಿ ನಿಂತು ಮ

ಹಾಪೂಜೆ ಕೈ ಕೊಂಡ ಶ್ರೀಪತಿ ಮರುತೇಶ 25

***