..
kruti by ವೀರನಾರಾಯಣ Veeranarayana
ನಾನೇನು ನಿನ್ನಯ ಚರಣವ ಮಾಣೆನು ಪ
ಮಾನವ ಕಾಯ್ವರನನ್ಯರ ಕಾಣೆನು ಅ.ಪ.
ಕಣ್ಣನು ಬಿಡುತಲಿ ಬಿರಿಬಿರಿ ನೋಡುತಿಣ್ಣನೆ ಬೆಟ್ಟದ ಮೇಲೆ ಬಿಸಾಡುಮಣ್ಣನುಗ್ಗಲು ಹಲ್ಲಲ್ಲಿ ತೋಡುಸಣ್ಣನ ಉಗುರಿಲಿ ಹರಿಕೊಂಡು ನೋಡು 1
ಕಾಲಲಿ ತಲೆಯನು ತುಳಿಯುತೋಡಾಡುಮೇಲಾಗಿ ಕೊಡಲಿಯನೊಗೆದು ಈಡಾಡುಬಾಲದ ಮಂಗನ ಕರಡಿಯ ಛೂಬಿಡುಸೋಲಿಸಲಾವುದೆ ತಂತ್ರವ ಹೂಡು 2
ಮೃದು ನುಡಿಯಲಿ ಅವಮಾನಿಸಿ ನೂಕುಕುದುರೆಯ ತಂದೆನ್ನ ಮೈಮೇಲೆ ಹಾಕುಗದುಗಿನ ವೀರನಾರಾಯಣ ಸಾಕುಪದಗಳ ಸೇವೆಯು ನಿತ್ಯದಿ ಬೇಕು 3
***