Showing posts with label ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ vijaya vittala. Show all posts
Showing posts with label ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ vijaya vittala. Show all posts

Wednesday, 16 October 2019

ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ankita vijaya vittala

ಜಾಹ್ನವಿ ಜನಕ
ಮೂಜಗತ್ಪತಿ ಸುರಕುಲ ಸನಕಾ
ದೀಜನ ಮನೋಹರ ಮಾಣಿಕ್ಯ ಕನಕಾ
ವೈಜಯಂತಿ ಹಾರ ಪಾವನ್ನ ಪದಕ ಪ

ಕೇಶಿಭಂಜನ ವ್ಯೋಮಕೇಶ ವಂದಿತ ಪಾದ
ಕ್ಲೇಶನಾಶನ ವಾತೇಶನ ಜನಕ
ಕೇಶರಿರುಹ ಮುಂಜಿಕೇಶನೆ ಕುಂಕುಮ
ಶೌರಿ 1
ವಾರುಣಿ ಪತಿನುತ ವಾರುಣನ ಭಯ ನಿ
ವಾರಣಾ ವಾರಣಾಶಿ ಪುರದರಸೆ
ವಾರಣ ನಗರಿಯ ವಾರನಹತಪಲ್ಲ
ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ 2
ಮಾದೇವಿ ರಮಣ ಭೂಮಿದೇವಿ ಉದ್ಧಾರ
ಮಾಧುರ್ಯ ವಚನ ಉಮಾದೇವಿ ವಿನುತಾ
ಮಾಧಾರ ಮಹಶೂರ ಮತ್ಕುಲನೆ ಪ್ರೇ
ಮಾಧವ ರಾಯಾ 3
ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ
ಗೋವುಗಳ ಕಾಯಿದ ಗೋವಳರಾಯಾ
ವಿಪ್ರ ಸಂರಕ್ಷ
ಗೋವಿದಾಂಪತಿ ರಂಗ ಗೋವಿಂದ ನಂದ 4
ಮಧುಕೈಟಭಾಸುರ ಮದಗರ್ವ ಮರ್ದನ
ನಿತ್ಯ ಮಧುರನ್ನ ಪಾನಾ
ಮಧುರಾಪುರ ಪಾಲ ಮದಗಜ ಹರಣಾ ಶಾ
ಮದವರ್ಣ ಶರೀರ ಮಧುಸೂದನನೆ 5
ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ
ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ
ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ
ವಿಷ್ಣು ಸರ್ವೋತ್ತಮ ವಿಶ್ವನಾಟಕನೆ6
ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ
ವಿಕ್ರಮನಾಗಿ ಕಾಲಕ್ರಮಣಿ ಮಾಡೆ
ಶಕ್ರಮರ್ಚಿಸೆ ಅನುಕ್ರಮನಾಗಿ ಪ
ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ 7
ವಾಮಲೋಚನೆಯರ ವಾಮನ ಕೆಡಿಸಿದೆ
ವಾಮನವಾಶಿಷ್ಟವಾ ಮುನಿವಂದ್ಯ
ವಾಮನದಲಿ ದಾನವಾಮನ್ಯಗಳರನ್ನು ಅ
ವಮಾನ ಮಾಡಿದೆ ಸಿರಿವಾಮನನೆ 8
ಶ್ರೀಧರ ರಮಣನೆ ಶೃಂಗಾರ ವಾರಿಧಿ
ಶ್ರೀಧನ ಸಂಪತ್ತಾಶ್ರಿತ ಜನರಿಗೆ
ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ
ಶ್ರೀದೇವಿ ಉರಭೂಷಾ ಶ್ರೀಧರನಂತಾ 9
ಋಷಿಕೇಶನ ತಾತ ಋಷಿಜನ ಸಂಪ್ರೀತ
ಋಷಿಕುಲೋದ್ಭವ ಪುರುಷ ರಾಮ ಮಹಾ
ಋಷಿನಾಮಧೇಯನೆ ಋಷಿಪತ್ನಿ ಪಾಲನೆ
ಋಷಿಗಳ ಒಡೆಯನೆ ಹೃಷಿಕೇಶ ದೇವ 10
ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ
ಪದುಮನಾಭಿಯಲ್ಲಿ ಪದುಮಜನ ಪೆತ್ತ
ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ
ಪದುಮ ಮಿಗಲು ಕಾಂತಿ ಪದುಮನಾಭನೆ11
ಧಾಮನಿಧಿಕುಲನು ಧಾಮನೆ ನಿರುತ ತ್ರಿ
ಧಾಮನಿವಾಸ ಸುಧಾಮನ ಮಿತ್ರ
ಧಾಮ ಪುಣ್ಯಧಾಮ ಭಕ್ತ ಹೃದ್ವನಜ
ಧಾಮ ಮಧುಕರನೆ ದಾಮೋದರ ಧರ್ಮಾ 12
ಶಂಖ ಸುರಾಹರಾ ನಿಃಶಂಕ ಚರಿತ
ಶಂಖಪಾಣಿ ಶಶಾಂಕ ಸುವದನ
ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ
ಸಂಕರುಷಣನುವುಜ ಸಂಕರುಷಣನೆ 13
ಪ್ರಧಾನ ಮೂರುತಿ
ಪ್ರದ್ವೀಪ ವರ್ಣ ಸುಪ್ರದಾಯಕನೆ
ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ
ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ14
ವಾಸುವಾನುಜ ಶ್ರೀನಿವಾಸ ಪುಂಡ್ರೀಕ
ವಾಸುದೇವನ ಶಮನಪುರದಲ್ಲಿ
ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ
ವಾಸುದೇವ 15
ಅನುಗಾಲವು ನಿನ್ನ ಅನುಸರಿಸಿದೆ ನಾನು
ಅನುಕೂಲವಾಗಿ ಎನ್ನನು ಸಾಕುವುದು
ಅನುಮಾನವ್ಯಾತಕೆ ಅನಿಮಿತ್ತ ಬಂಧು
ಅನಿರುದ್ಧ ಶ್ರೀಶಾ 16
ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ
ಪುರುಷೇಶ್ವರ ತತ್ಪುರುಷಾದಿ ಪುರುಷ
ಪುರುಷ ಬೀಜ ವೇದ ಪುರುಷ ಪರಮ
ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ 17
ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ
ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ
ಅಕ್ಷಯ ಪಾತ್ರಿಯ ಶಾಖಾದಳವನ್ನು
ಅಕ್ಷಯ ಮಾಡಿದಧೋಕ್ಷಜ ಚಕ್ರಿ 18
ನರಸಖ ನರಹರಿ ನಾರಾಯಣ ವಾ
ನರ ದಳನಾಯಕ ನಾರದ ವಿನುತ
ನರಕ ಉದ್ಧಾರಕ ನರಕಾಂತಕ ಕಿ
ನ್ನರ ಸುರನರೋರಗ ವೃಂದ ನರಸಿಂಹ 19
ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ
ಸಚ್ಚರಾಚರದೊಳೂ ಗುಣಪರಿಪೂರ್ಣ
ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ
ಸಚ್ಚೂತ ಚುತಿ ದೂರ ಚಿನ್ಮಯ ರೂಪಾ 20
ಜನನ ಮರಣ ನಾಶ ಜನನಾದಿಕರ್ತಾಂ
ಜನಸುತಗತಿ ಪ್ರೇಮಾಂಜನ ಗಿರಿಧಾಮ
ಜನಕವರದ ಸಜ್ಜನರಘದಹನ ದು
ರ್ಜನರ ಕುಲರಾತಿ ಜನಾರ್ದನನೆ 21
ವೀಂದ್ರವಾಹನ ಮಹೇಂದ್ರಧಾರನೆ ಗ
ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ
ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ
ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ 22
ಹರಿ ಎನುತಾ ಹರಿ ಹರಿದು ಓಡಿ ಬರೆ
ಹರಿದು ಪೋಗಿ ಪರಿಹರಿಸಿದ ಖಳನ
ಹರಿ ಹರಿಯು ನಲಿವನೆ ಹರಿರೂಪ ಪರಿ
ಹರಿನಾಮವೆ ಗತಿ ಹರಿ ಸರ್ವೋತ್ತಮಾ23
ಕೃಷ್ಣದ್ವಯಪಾಯನ ಉತ್ಕøಷ್ಟ ಮುನೇಶ
ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ
ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ
ಕೃಷ್ಣಾವತಾರ ಕೃಷ್ಣ ಕಮಲೇಶ 24
ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ
ನಿನ್ನೊಳಗೆ ನೀನು ಬೀಯ ಬೀಜವನು
ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ 25
************