Showing posts with label ಹರಿಯೇ ಸ್ವತಂತ್ರ ಚತುರದಶ ಭುವನಕೆ ಪರಮೇಷ್ಠಿ ಶಿವಾದ್ಯರಾತಗೆ vijaya vittala. Show all posts
Showing posts with label ಹರಿಯೇ ಸ್ವತಂತ್ರ ಚತುರದಶ ಭುವನಕೆ ಪರಮೇಷ್ಠಿ ಶಿವಾದ್ಯರಾತಗೆ vijaya vittala. Show all posts

Thursday, 17 October 2019

ಹರಿಯೇ ಸ್ವತಂತ್ರ ಚತುರದಶ ಭುವನಕೆ ಪರಮೇಷ್ಠಿ ಶಿವಾದ್ಯರಾತಗೆ ankita vijaya vittala

ವಿಜಯದಾಸ
ಹರಿಯೆ ಸ್ವತಂತ್ರ ಚತುರದಶ ಭುವನಕೆ |
ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು ಪ

ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು |
ಪರಮ ಭಕುತಿಯಿಂದ ಕ್ರೋಧಮುನಿಪ ||
ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು |
ವಸಂತ ಕಾಲದಂತೆ ಪೊಳಿಯೇ1

ತಪಸಿ ತಪವನೆ ಮಾಡುತಿರಲು ಖರಾಟಖಳ |
ಉಪಹತಿ ಕೊಡುತಿಪ್ಪ ವರಬಲದಿ ||
ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ |
ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ2

ಪರಮೇಷ್ಠಿ ಹರಿಯ ಬಳಿಗೆ ಬಂದು |
ಖಳನ ಕೋಲಾಹಲವ ಬಿನ್ನೈಸಲು ||
ಪುಲಿತೊಗಲಾಂಬರನ ಸಹಿತ ಸರ್ವೋತ್ತಮನ |
ಒಲಿಮೆಯಿಂದ ಬಂದು ಸುಳಿದರಾಗಂದು 3

ದಾನವನ ಕೊಂದು ದೇವತೆಗಳ ಸುಖಬಡಿಸಿ |
e್ಞÁನಕ್ರೋಢಮುನಿ ಮನಕೆ ಪೊಳೆದು ||
ಆನಂದದಿಂದಲಿ ನಿಂದು ಮೆರೆದ ಲೀಲೆ |
ಏನೆಂಬೆನಯ್ಯ ಹರಿಹರ ವಿಚಿತ್ರಾ 4

ಪ್ರವಿಷ್ಠ ಕೇ|
ಶವನು ತಾನೆ ಕಾಣೊ ಸ್ವಾತಂತ್ರನು ||
ಇವರು ಶಂಕರನಾರಾಯಣನೆಂಬೊ ಪೆಸರಿನಲಿ |
ಅವನಿಯೊಳು ಪ್ರಖ್ಯಾತರಾಗಿ ನಿಂದಿಹರೋ 5

ಎರಡು ಮೂರುತಿಗಳು ನೋಳ್ಪರಿಗೆ |
ಶ್ರೀ ನಾರಾಯಣಗೆ ಈಶ ಸಮನೇ 6

ಚಕ್ರ ಶಂಖ ಗದೆ ಪದುಮ ಹರಿಗೆ ನೋಡು |
ಮುಕ್ಕಣ್ಣಗೆ ಡಮರುಗ ತ್ರಿಶೂಲವು ||
ಮುಖ್ಯ ದೇವತಿ ಹರಿ ಅವಾಂತರ ಶಿವನು |
ಶಕ್ರಾದ್ಯರೊಲಿದು ಭೇದವನು ಪೇಳುವರು 7

ಸತ್ಯಂ ವದವೆಂಬ ಶ್ರುತಿವರದು ಪೇಳುತಿದೆ |
ಭೃತ್ಯ ರುದ್ರನು ಕಾಣೊ ಲಕುಮಿವರಗೆ ||
ಸತ್ಯದಲಿ ಸಿದ್ಧವಯ್ಯ ಎಂದು ತಿಳಿದು |
ಸ್ತೌತ್ಯ ಮಾಡಿದವಗೆ ವೈಕುಂಠ ಪದವಿ 8

ಕ್ರೋಢ ಪರ್ವತವಿದೆ ತೀರ್ಥ ಪಾವನಕರ |
ನಾಡೊಳಗೆ ಕ್ಷೇತ್ರ ಉತ್ತಮ ಮಾನವಾ ||
ಪಾಡಿದರೆ ವಿಜಯವಿಠ್ಠಲರೇಯ ಒಲಿದು |
ಕೂಡಾಡುವನು ದೃಢ ಭಕುತಿಯಿತ್ತು ಅನುದಿನಾ 9
***********