ಕಾಖಂಡಕಿ ಶ್ರೀ ಕೃಷ್ಣದಾಸರು
ಎಂಥಾ ಬಾಲಕನಿವನು ಎಷ್ಟೆಂದ್ಹೇಳಲಿ ನಾನು ಪಂಥಗಾರಿಕೆಯಂಗ ಪರಮ ಪುರುಷರಂಗ ಅಂತವ ತಿಳಿಗುಡನು ಗೋಪೆಮ್ಮಾ ಪ
ನೋಟಾವೇಟದಿ ನಲುವಾ ನಡೆಯಾಲೊಲ್ಲದೆ ನಿಲುವಾ ಸ್ಫೋಟ ಹೃದಯವಾಗುವ ಪರಿಯಂಜಿಸುವ ಮಗು ನೀಟ ಘಾತಪಾತಕನಮ್ಮಾಗೋಪೆಮ್ಮ ನಿತ್ಯ ಬೆಣ್ಣೆಯ ಸವಿದು ಕಾಟಕಾರವೆ ಭಂಡಾ ತುರುಗಾವರೋಳು ಪುಂಡಾ ಆಟಕೆ ಗುಣವೇನ ಗೋಪೆಮ್ಮಾ 1
ನಯ ಮಾತಿಲಿ ಬರುವಾ ನೋಡಲು ಕಠಿಣಿರುವಾ ತಾಯಡಬಲ ನೋಡಾ ತರುಣಿಯರನ ಬಿಡಾ ಬಾಯಾದೆರೆದು ಬೇಡವಾ ಗೋಪೆಮ್ಮಾ ತಾಯಿಂಗಂಜನು ನಿನಗೆ ತಡೆದುರೋಗವ ಹೊರಗೆ ಮಾಯಾಗಾರನೆ ಗೋವಾ ಮತಿಯ ಕಡುವನಿವ ಸಾಯಸ ಕಲಿಯಮ್ಮ ಗೋಪೆಮ್ಮಾ 2
ಇದರೇರಿ ಚಿನ್ನವರಾ ಇಕ್ಕಿ ಅಂಗವ ತೋರಾ ಕಾಲ ಕೆದರಿ ಪೊರೆವ ಬಾಲಾ ಅದ್ಭುತ ವಿಕ್ರಮನೆ ಗೋಪೆಮ್ಮಾ ಉದ ಧಿಗಂಜನು ಧುಮುಕಿ ಉಲುವಾ ಬುದ್ದಿಯ ಸೊಕಿ ಮುದದಿ ವಾಜಿರಿಸೇ ಮಹಿಪತಿಸುತ ಪ್ರಭು ಬುಧ ಜನರೊಲುವಂತೆ ಗೋಪೆಮ್ಮಾ3
***