ದಯೆ ತೋರಮ್ಮ ಶ್ರೀ ತುಳಸಿ
ವರನೀಡಮ್ಮ ಶ್ರೀ ತುಳಸಿ
ದಯಮಾಡಮ್ಮ ಶ್ರೀ ತುಳಸಿ
ನಿತ್ಯವು ಪೂಜಿಪೆ ವರ ತುಳಸಿ
ಇಂದಿರೆ ಸುಂದರಿ ವಂದಿಪೆ ಮಾಧವಿ
ಶುಭವನು ಮಾಡೆ ಜಯ ತುಳಸಿ
||ಇಂದಿರೆ||
ವ್ರಂದಾವನವೆ ಮಂದಿರವಾಗಿದೆ
ನಿಂದಿರೆ ಶ್ರೀತುಳಸಿ||ವ್ರಂದಾವನವೇ||
ನಂದನಂದನ ಮುಕುಂದಗೆ ಪ್ರಿಯಳಾದ ||2||
ಚೆಂದದ ಶ್ರೀ ತುಳಸೀ....
|| ವ್ರಂದಾವನವೆ||
ತುಳಸಿಯ ವನದಲಿ ಹರಿ ಇಹನೆಂಬುದ
ಶ್ರತಿಸಾರುತಿದೆ ಕೇಳಿ
ತುಳಸಿ ದರ್ಶನದಿಂದ ದುರಿತಗಳೆಲ್ಲವು
ದೂರವಾಗುವುದು ಕೇಳಿ||ತುಳಸಿಯ||
ತುಳಸಿ ಸ್ಪರ್ಶವ ಮಾಡೆ,ದೇಹ ಪಾವನವೆಂದು||2||
ತಿಳಿದುದಿಲ್ಲವೆ ಕೇಳಿ
ತುಳಸಿ ಸ್ಮರಣೆ ಮಾಡಿ ,ಸಕಲ ಇಷ್ಟವ ಪಡೆದು||2||
ಸುಖದಲಿ ನೀವು ಬಾಳಿ
||ವ್ರಂದಾವನವೆ||
ಮೂಲ ಮ್ರತ್ತಿಕೆಯನು ಮುಖದಲಿ ಧರಿಸಲು ,ಮೂರ್ಲೋಕ ವಶವಹುದು
ಮಾಲೆ ಕೊರಳಲಿಟ್ಟ ,ಮುನುಜಗೆ ಮುಕುತಿಯ ,ಮಾರ್ಗವ ತೋರುವುದು
||ಮೂಲ ಮ್ರತ್ತಿಕೆಯನು||
ಕಾಲ ಕಾಲಗಳಲಿ ,ಮಾಡುವ ದುಷ್ಕರ್ಮ||2||
ಕಳೆದು ಬಿಸಾಡುವುದು
ಕಾಲನ ದೂತರ ಕಳಚಿ ಕೈವಲ್ಯದ||2||
ಲೀಲೆಯ ತೋರುವುದು
||ವ್ರಂದಾವನವೆ||
ಧರೆಯೊಳು ಸುಜನರ ಮರೆಯದೆ
ಸಲಹುವ ,ವರಲಕ್ಷ್ಮಿ ಶ್ರೀ ತುಳಸಿ
ಪರಮ ಭಕ್ತರ ಘೋರ ಪಾಪಗಳ ತರಿದು,ಪಾವನ ಮಾಡುವ ತುಳಸಿ
||ಧರೆಯೊಳು||
ಸಿರಿ, ಆಯು, ಪುತ್ರಾದಿ ಸಂಪದಗಳನ್ನಿತ್ತು||2||
ಹರುಷಗೊಳಿಪ ತುಳಸೀ...
ಪುರಂದರವಿಠ್ಠಲನ ಚರಣ ಕಮಲಗಳ||2||
ಪುರಂದರವಿಠ್ಠಲನಾ......ಆ...ಆ...||3||
ಪುರಂದರವಿಠ್ಠಲನ ಚರಣ ಕಮಲಗಳ||3||
ಸ್ಮರಣೆ ಕೊಡುವ ತುಳಸಿ
||ವ್ರಂದಾವನವೆ||
********