ಶ್ರೀ ಗೋಪಾಲದಾಸರು...
ರಾಗ : ದುರ್ಗಾ ತಾಳ : ಅರಝ೦ಪೆ
ಹರಿದಾಸರಾನಂದ ನೋಡಿ ಬಂದೆ ।। ಪಲ್ಲವಿ ।।
ಸಿರಿ ಪ್ರಸನ್ವೇ೦ಕಟನ ಕಿಂಕರರು ಯಿವರೆಂದು ।
ಸಿರಬಾಗಿ ನಮಿಸಿ ನಾ ಧನ್ಯತೆಯ ಕಂಡೆ ।। ಆ. ಪ ।।
ಮನವನರ್ಣಿಸಿ ಹನುಮಯ್ಯನಲ್ಲಿ ದಿನದಿನ ।
ಘನ ಭಕುತಿ ವೈರಾಗ್ಯ ಪಡೆದ ಸಂಪನ್ನ ।
ಸನ್ನತವು ಸುಖತೀರ್ಥ ಮತ ತತ್ತ್ವದಧ್ಯಯನ ।
ಜ್ಞಾನ ಧ್ಯಾನದ ತವರು ಹರಿದಾಸ ರತುನ ।। ಚರಣ ।।
ಸಾಕಲ್ಯ ಸಾರೂಪ್ಯ ಸಾಯುಜ್ಯ ಸುಖವಾ ।
ಸಕಲ ಶ್ರವಣಾದಿ ನವ ಭಕುತಿ । ಸಾಧನವಾ ।
ನೀಕತಾ ಗಳಿಸಿ ನಿಜ ಹರಿ ಭಕುತರೆನಿಸಿ ।
ಲೋಕ ಪಾವನರೆನಿಸಿ ಮೆರೆಯುತಿಹ ತೇಜಸ್ವಿ ।। ಚರಣ ।।
ದಿಟದಿ ಬಾಗಲಕೋಟೆ ಘಟತಟಾಪುರದಿ ।
ಗೂಟ ನಾಮಗಳ್ಹಚ್ಚಿ ತಂಬೂರಿ ಮೀಟುತ್ತ ।
ವಟಪತ್ರಶಾಯಿ ಹರಿ ಗೋಪಾಲವಿಠ್ಠಲನ ।
ದಿಟವಾದ ನಾಮಗಳ ವಟವಟಿಸುವಂಥ ।। ಚರಣ ।।
****