Showing posts with label ಕಾಯೋ ಕಾಯೋ ಜಿತಕಾಯ ಗುರು ಬಾದರಾಯಣ ತತ್ವಜ್ಞರಾಯ shyamasundara. Show all posts
Showing posts with label ಕಾಯೋ ಕಾಯೋ ಜಿತಕಾಯ ಗುರು ಬಾದರಾಯಣ ತತ್ವಜ್ಞರಾಯ shyamasundara. Show all posts

Wednesday, 1 September 2021

ಕಾಯೋ ಕಾಯೋ ಜಿತಕಾಯ ಗುರು ಬಾದರಾಯಣ ತತ್ವಜ್ಞರಾಯ ankita shyamasundara

 ..

ಕಾಯೊ ಕಾಯೊ ಜಿತಕಾಯ ಗುರು ಬಾದ

ರಾಯಣ ತತ್ವಜ್ಞರಾಯ ಪ


ನಾ ಯಾರಿಗೆ ಬಿನ್ನೈಪೆ | ಹೇಯಸಂಸಾರದ

ಮಾಯವ ಬಿಡಿಸಿ ವಿಧೇಯನೆಂದರಿದೆನ್ನ ಅ.ಪ


ಎರಡೊಂದು ಮಠದಲಿ ಧರಿಸಿ ತೂರ್ಯಾಶ್ರಮ

ಸಿರಿಯರಸನ ದಿವ್ಯ ಮೂರ್ತಿಗಳ

ಕರದಿಂದ ಪೂಜಿಸಿ | ಮರುತ ದೇವನ ಮತ

ಪರಮಾನಂದವೆಂದು ಧರೆಗೆ ಬೀರಿದ ಕರುಣಿ 1


ಜ್ಷಾನಿಗಳರಹುವ | ವಾಣಿಯಿಂದಲಿ ದೇ

ವಾನನ ನೀನೆಂದು ನಾ ನಂಬಿದೆ

ಮೌನಿವರಿಯ ಎನ್ನ | ಹೀನಪಾತಕವೆಂಬ

ಕಾನನ ದಹಿಸೆಂದು | ಸಾನುರಾಗದಿ ನೋಡಿ 2


ಭೂಸುರ ಪರಿಪಾಲ | ಶ್ರೀ ಶಾಮಸುಂದರನ

ಲೇಸಾಗಿ ಒಲಿಸುತಲಿ ಕಿಟಜದಲಿ

ಭಾಸುರ ಘನವೇಣಿ | ಭೇಶಪುರದಿ ನೆಲಸಿ

ದಾಸರ ಮನದಭಿಲಾಷೆ ನೀಡುವ ದಾನಿ 3

***