..
Kruti by ಸರಸಾಬಾಯಿ Sarasabai
ತಂದೆ ಶ್ರೀನಿವಾಸ ನೀನು ಬಂದು ಕಾಯೊ ಎನ್ನ
ಸ್ವಾಮಿ ನಿಂತು ಕಾಯೋ ಎನ್ನ ಪ.
ಇಂದಿರೆ ರಮಣನೆ ಬಂಧನ ಬಿಡಿಸೆನ್ನ ತಂದೆ ಗೋವಿಂದ ಅ.ಪ.
ಖಗವಾಹನ ದೇವಾ ಸ್ವಾಮಿ ನಗೆಮೊಗದೊಡೆಯನೆ
ನಾಗಶಯನನೆ ಯೋಗಿಗಳರಸನೆ
ಬೇಗದಿ ಬಂದು ಕಾಯೋ ಎನ್ನನು 1
ಶೇಷಾಚಲ ನಿವಾಸ ಸ್ವಾಮಿ ಆಸೆಯ ಬಿಡಿಸೆನ್ನಾ
ವಾಸುದೇವ ನಿನ್ನ ಲೇಸು ಕರುಣವ ತೋರಿ
ನಿನ್ನ ದಾಸರ ಸಂಗದೊಳು ಇರಿಸೋ ಎನ್ನ 2
ರಾಮ ರಾಮ ಎಂಬೋ ನಿನ್ನ ನಾಮನೇಮದಿ
ನುಡಿಸೆನೆಗೆ ರಮಾವಲ್ಲಭವಿಠಲ
ಭಾಮೆಯರರಸನೆ ಪ್ರೇಮವ ತೋರೋ 3
***