Showing posts with label ತನ್ನನರಿಯದವ ಜ್ಞಾನದ ಮಾತಾಡಿದರೇನು ಕಣ್ಣಿಲ್ಲದವ ಕನ್ನಡಿ ಪಿಡಿದರೇನು mahipati. Show all posts
Showing posts with label ತನ್ನನರಿಯದವ ಜ್ಞಾನದ ಮಾತಾಡಿದರೇನು ಕಣ್ಣಿಲ್ಲದವ ಕನ್ನಡಿ ಪಿಡಿದರೇನು mahipati. Show all posts

Wednesday, 1 September 2021

ತನ್ನನರಿಯದವ ಜ್ಞಾನದ ಮಾತಾಡಿದರೇನು ಕಣ್ಣಿಲ್ಲದವ ಕನ್ನಡಿ ಪಿಡಿದರೇನು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ತನ್ನನರಿಯದವ ಜ್ಞಾನದ ಮಾತಾಡಿದರೇನು ಕಣ್ಣಿಲ್ಲದವ ಕನ್ನಡಿ ಪಿಡಿದರೇನು pa


ಧೈರ್ಯವಿಲ್ಲದವ ಕೈಯಲಿ ಶಸ್ತ್ರ ಹಿಡಿದರೇನು ಸ್ಥೈರ್ಯವಿಲ್ಲದವ ತಪಸ್ಯಾದರೇನು ಮರ್ಯಾದಿಲ್ಲದವ ಗುರು ಸನ್ನಿಧವಿದ್ದರೇನು ಬಂಟ ಬಲ್ಲಿದನಾದರೇನು 1 

ಗಂಡ ನಿಲ್ಲದ ನಾರಿ ಸುಗುಣ್ಯುದ್ದಂಡಾದರೇನು ಷಂಡ ಸಾವಿರ ಹೆಣ್ಣು ಮದುವ್ಯಾದರೇನು ಖಂಡಿಸದೆ ಅನುಮಾನ ಪಂಡಿತನೆನಿಸಿದರೇನು ಕಂಡು ಕಾಣದ್ಹೆಳವನ ಕೊಂಡಾಡಲೇನು 2 

ಭಾನುಕೋಟಿ ತೇಜನಂಘ್ರಿ ಗುರುತಲ್ಲದರಿವೇನು ಅನುಭವಿಸಿ ಕೊಳ್ಳದ ನರಜನ್ಮವೇನು ದೀನ ಮಹಿಪತಿಸ್ವಾಮಿಕಾಣದ ಕಂಗಳವೇನುಜ್ಞಾನ ಉಂಟುಮಾಡಿಕೊಳ್ಳದವನ ಬಾಳಿವೇನು 3

***