ರಾಗ: ಬೇಹಾಗ್ ತಾಳ: ಆದಿ
ಪರಿಮಳಾರ್ಯರ ಭಜಿಸಿ ಕರತಾಡಿಸಿ ಪ
ಮಿರುಗವ ಸುರಧೇನು ಅಮರತರುವೆನಿಸಿ ಅ. ಪ
ಪುರಮಂತ್ರಮಂದಿರ ಗುರುಕರುಣಾಕರ
ಸ್ಮರಿಸಿಕರೆದಲ್ಲಿಗೆ ತ್ವರದಿಧಾವಿಸುವರ 1
ಅನ್ಯಾಪೇಕ್ಷಿಸದೆ ಸನ್ನುತಿಸಲು ಜವ
ಉನ್ನತ ವೈರಾಗ್ಯ ಜ್ಞಾನ ಭಕ್ತಿಯನೀವ 2
ನರಸಿಂಹನತೋರ್ದ ಪರಮಭಾಗವತ
ಮರುತಪಿತಾನಂತವಿಠಲಕಿಂಕರಪೂತ 3
***