ರಾಗ : ಶಂಕರಾಭರಣ ಆದಿತಾಳ
ಶ್ರೀ ಪ್ರಾಣೇಶದಾಸಾರ್ಯ ವಿರಚಿತ
ಶ್ರೀಕೃಷ್ಣಕೃತ ಭೀಮಸೇನ ದ್ರೌಪದಿ ಭಕ್ತಿ ವರ್ಣನೆ
ಪಾಂಚಾಲೆ ನುಡಿಗೆ ವಿರಿಂಚಿಪಿತಾನು ಮೆಚ್ಚಿ
ವಂಚನಿಲ್ಲದಲೆ ನುಡಿವಾನು ಕೋಲೆ
ವಂಚನಿಲ್ಲದಲೆ ನುಡಿವ ಶುಭ ವಾಕ್ಯವಾ
ಮುಂಚೆ ಪೇಳುವೆನು ಕೇಳಿರೆಲ್ಲ ಕೋಲೆ॥೧॥
ಏನೆನ್ನಾಲೆ ದ್ರೌಪದಿ ಈ ನಾರಿಯರ ಮುಯ್ಯಾ
ಕಾಣಿಸಿತವ್ವಾ ನಿಮ್ಮನಿಂದೂ ಕೋಲೆ
ಕಾಣಿಸಿತವ್ವಾ ನಿಮ್ಮನಿಂದೂ ಮರಳೆ ಶ್ರೀ
ಶ್ರೀನಿವಾಸನೂ ಆಡುತಿಹ ಕೋಲೆ॥೨॥
ನೀನು ನಿನಗಂಡಾನಿಲ್ಲದಾನೀರಲಾರೆನವ್ವಾ
ಪ್ರಾಣಿಗಳಲ್ಲೀ ಜಡದಲ್ಲಿ ಕೋಲೆ
ಪ್ರಾಣಿಗಳಲ್ಲೀ ಜಡದಲ್ಲಿ ಹೇ ತಂಗಿ ಇಗೇ
ನಂದೇನುಪಚಾರಲ್ಲವವ್ವಾ ಕೋಲೆ॥೩॥
ಶಂಭೂ ಸುರೇಶ ಸೋಮಾರ್ಕೆಂಬೊರೆಲ್ಲಾರೆನ್ನಲಿ
ಡಂಭಾಕ ಭಕುತಿ ಮಾಡುವರು ಕೋಲೆ
ಡಂಭಾಕ ಭಕುತಿ ಮಾಡೋರು ನಿನ ಗಂಡಾ ನೀನು
ನಂಬೀಮಾಡುವಿರೆ ನಿಜಭಕ್ತಿ ಕೋಲೆ॥೪॥
ಪ್ರಥಮಂಗಾರೆಂಬೊ ನಾಮಾ ಇತರರಿಗಿಲ್ಲಾ ಕಂಡ್ಯಾ
ದಿತಿಜಾರೀಗಳೋಳು ನೋಡಲ್ಕೆ ಕೋಲೆ
ದಿತಿಜಾರಿಗಳೋಳು ನೋಡಲಕ್ಕೆ ಈ ಮಾತು
ಮಾರತಗೆ ವಪ್ಪುವುದು ಶ್ರುತಿಶಿದ್ಧಾ ಕೋಲೆ॥೫॥
ಶುದ್ಧಾ ಭಾಗವತರನ್ನಾ ಶುದ್ಧಾ ಭಾಗೀರ್ಥಿ ಉದಕಾ
ಶುದ್ಧಾ ಹರಿತೀರ್ಥಾ ಹರಿದಿನ ಕೋಲೆ
ಶುದ್ಧಾ ಹರಿತೀರ್ಥ ಹರಿದಿನ ನಿಮ್ಮನಕ್ಕೆ
ಬುದ್ಧಿಪೂರ್ವಕದೀ ಬಂದೆನೀಗ ಕೋಲೆ॥೬॥
ದೇವರೆಂದು ಲೋಕಕ್ಕೆ ನೀವೆ ತಿಳಿಸೀದಿರೆನ್ನ
ಈ ವಿಬುಧರೋಳು ಒಬ್ಬರಿಲ್ಲ ಕೋಲೆ
ಈ ವಿಬುಧರೋಳು ಒಬ್ಬರಿಲ್ಲ ಹೇ ತಂಗಿ
ಈ ಉಪಕಾರಾಕೊಳಗಾದೆ ಕೋಲೆ॥೭॥
ದಾನವಾದ್ರಿಭೀದೂರ ಪ್ರಾಣೇಶವಿಠ್ಠಲೀರ
ಮಾನೀನಿಯೊಡನೆ ಹಿತ ಮಾತು ಕೋಲೆ
ಮಾನೀನಿಯೊಡನೆ ಹಿತ ಮಾತುಗಳಾಡುತ
ಮಾನವಾರಂತೆ ಮೋಹಿಸೂವ ಕೋಲೆ॥೮॥
***