Showing posts with label ದೇವರನ್ನು ಹಸೆಗೆ ಕರೆದ ಪದಗಳುವೇದ pranesha vittala. Show all posts
Showing posts with label ದೇವರನ್ನು ಹಸೆಗೆ ಕರೆದ ಪದಗಳುವೇದ pranesha vittala. Show all posts

Tuesday, 12 November 2019

ದೇವರನ್ನು ಹಸೆಗೆ ಕರೆದ ಪದಗಳುವೇದ ankita pranesha vittala

by ಪ್ರಾಣೇಶದಾಸರು
ದೇವರನ್ನು ಹಸೆಗೆ ಕರೆದ ಪದಗಳುವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||ಭೂ ದೇವಾ ರೂಪೀ ಹಸಿಗೇಳೂ 1

ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||ಅಗಣಿತಮಹಿಮಾ ಹಸಿಗೇಳೂ 2

ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತಶ್ರೀ ರಮಣ ಪ್ರಾಣೇಶ ವಿಠ್ಠಲನೆ ||ಸುಧಿಗಡಲಾಲಯನೆ ಹಸಿಗೇಳೂ 3
********