Showing posts with label ಪಾಹಿ ಪಾಹಿ ಸುಧೀಂದ್ರಜ shreekara vittala. Show all posts
Showing posts with label ಪಾಹಿ ಪಾಹಿ ಸುಧೀಂದ್ರಜ shreekara vittala. Show all posts

Saturday 27 March 2021

ಪಾಹಿ ಪಾಹಿ ಸುಧೀಂದ್ರಜ ankita shreekara vittala

 ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಸ್ತೋತ್ರ ಪದ

ರಚನೆ : ಕಲ್ಲೂರು ಶ್ರೀಕರವಿಠ್ಠಲದಾಸರು.


ಪಾಹಿ ಪಾಹಿ ಸುಧೀಂದ್ರಜ!!ಪ!!

ಪಾಹಿ ಪಾಹಿ ನಮೊ! ಪಾಹಿ ಪಾಹಿ ನಮೊ!

ಪಾಹಿ ಶರಣರ ಸುರಭೂಜ!!ಅಪ!!

ಸಲ್ಹಾದನಣ್ಣ ಪ್ರಹ್ಲಾದನು ನೀನವೆ! ಬಾಹ್ಲೀಕ ದ್ವಾಪರ ಯುಗದೊಳು!!೧!! 

ಭೂಪ ಕುಂತಿಜನಿಂದ ನೀ ಪಡೆಯುತವರ!ತಾಪಸಿಯೆನಿಸಿದೆ ಇಳೆಯಳು!!೨!!

ಶ್ರೀಪಾದರಾಜರ ನೀ ಪಡೆದೊಲುಮೇಯ!ಗೋಪಿಯ ಕಂದನ ಕುಣಿಸಿದೆ!!೩!!

ಮರಳಿ ಪರಿಮಳ ವಿರಚಿಸಿ ಧರೆಯೊಳು!ಮೆರೆಯುವ ಗುರುರಾಘವೇಂದ್ರಾರ್ಯ!!೪!!

ವಂದ್ಯಾಂಧರಿಗೆ ಸುಕಂದರಕ್ಷಿಗಳ!ಕುಂದದೆ ಕೊಡುತಿಪ್ಪಯತಿವರ!!೫!!

ವಾತಜಾತನ ಮಾತು ಮಾತಿಲಿ ನೀ ಗೆಲಿದೆ! ಭೂತನಾಥನೆ ಪರನೆಂಬರಾ!!೬!!

ಸ್ಬೀಕರಿಸುತ ಸೇವೆ ಮೂಕ ಬಧಿರರಿಗೆ!ಬೇಕಾದವರವಿತ್ತು ಪೊರೆಯುವೆ!!೭!!

ಚೂತರಸದಿ ಬಿದ್ದಪೋತನ ಸಲಹಿದಿ ಖ್ಯಾತನೆ ಬಿನ್ನಪ ಲಾಲಿಸೋ!!೮!!

ಎಲ್ಲಿ ಕರೆಯೆ ನೀನಲ್ಲಿ ಬಂದೊದಗುವೆ! ಬಲ್ಲಿದ ಮಹಿಮನೆ ಬಹುಬೇಗಾ!!೯!!

ಇನಕುಲೇಶನ ಪಾದವನಜಾರಾಧಕ ಯನ್ನ! ಮನದಭಿಲಾಷೆಯ ಸಲಿಸಯ್ಯಾ!!೧೦!!

ಒಂದರಿಯದ ಬಲು ಮಂದಮತಿಯು ನಾನು! ತಂದೆ ಯನ್ನಪರಾಧ ಕ್ಷಮಿಸಯ್ಯಾ!!೧೧!!

ದಂಡ ಕಾಷಾಯ ಕಮಂಡಲ ಭೂಷಿತ! ಮಂಡೆಯ ಬಾಗಿ ನಾ ನಮಿಸುವೆ!!೧೨!!

ಮಾತು ಮಾತಿಗೆ ನೆನೆವಾತುರ ಕೊಡು ನಿನ್ನ! ವಾತಾಜ ಸುಮತಾಬ್ಧಿ ಚಂದಿರ!!೧೩!!

ಸಂತತ ನಿನ್ನನು ಚಿಂತಿಪರಿಗೆ ಬಹು! ಚಿಂತೆಕಳೆವ ಮಂತ್ರಮಂದಿರಾ!!೧೪!!

ತಾಪಸರೊಡೆಯ ಹೃತ್ತಾಪ ನಿವಾರಿಸೊ! ನಾ ಪಾದ ಪಿಡಿವೆ ಕೃಪಾಕರ!!೧೫!!

ಕಂಡವರನು ಬೇಡಿ ಬೆಂಡಾದ ತವಪಾದ! ಪುಂಡರಿಕದಿ ಮನನಿಲ್ಲಿಸಯ್ಯಾ!!೧೬!!

ಮುಂದಾರಿಗಾಣನೆ ನೊಂದೆನೊ ತವಪಾದ! ಸಂದರುಶನವನು ನೀಡಯ್ಯಾ!!೧೭!!

ಶರಗೊಡ್ಡಿ ಬೇಡುವೆ ಪರಿಮಾಳಾರ್ಯನೆ ನಿನ್ನ! ಕರುಣ ಬಾರದೆ ಇನ್ನು ಎನ್ನೊಳು!!೧೮!!

ನಿನ್ನನೆ ನಂಬಿನ್ನು ಅನ್ಯರಿಗಾಲ್ಪರಿಯೆ! ಎನ್ನ ಮನವ ನೀನರಿಯೆಯಾ!!೧೯!!

ಮೋದದಿ ದಾಸರ ಪಾದಧೂಳಿಯೊಳು!ಸಾದುವರಿಯ ಹೊರಳಾಡಿಸೊ!!೨೦!!

ತುಂಗಾತಟದ ಯತಿಪುಂಗವ ಹೃದ! ಯಾಂತರಂಗದಲ್ಲಿಪ್ಪನ ತೋರಯ್ಯ!!೨೧!

ಕರಕರಿಗಾರದೆ ಮೊರೆಹೊಕ್ಕೆ ಎನ್ನನು! ಮರೆಯುವುದುಚಿತವೆ ಗುರುವರಾ!!೨೨!!

ಜನನಿ ಜನಕ ನೀನೆ ವಿನಯದಿ ಬೇಡುವೆ! ಘನಮಹಿಮನೆ ದಯವಿರಲಯ್ಯಾ!!೨೩!!

ಕೂಸಿನ ಜನನಿ ನಿರಾಸೆಗೊಳಿಪಳೆ! ದೋಷದೂರನೆ ಆಸೆ ಪೂರ್ತಿಸೊ!!೨೪!!

ಅನ್ಯರ ಭಜಿಸದೆ ನಿನ್ನನೆ ಭಜಿಸುವೆ! ಮನ್ನಿಸದಿರುವರೆ ಗುರುವರ!!೨೫!!

ಕುಂಬಣಿಯೋಳು ನಿನ್ನ ನಂಬಿದ ಜನ ಬಲು! ಸಂಭ್ರಮದೊಳಗಿರುತಿಹರಯ್ಯಾ!!೨೬!!

ಏಕಮನದಿ ನಮ್ಮ ಶ್ರೀಕರವಿಠಲನ್ನ ! ಲೋಕದೊಳ್ ಪರನೆಂದು ಸಾರಿದ.

***


ರಾಗ: ಮಾಂಡ್ ತಾಳ: ಕವ್ವಾಲಿ

ಪಾಹಿ ಪಾಹಿ ಸುಧೀಂದ್ರಜ

ಪಾಹಿ ನಮೋ ಪಾಹಿ ನಮೋ

ಪಾಹಿ ಶರಣರಸುರಭೂಜಾ ಅ.ಪ

ಸಹ್ಲಾದನಣ್ಣ ಪ್ರಹ್ಲಾದ ನೀನೇವೆ

ಬಾಹ್ಲೀಕ ದ್ವಾಪರಯುಗದೊಳು 1

ಭೂಪ ಕುಂತಿಜನಿಂದ ನೀ ಪಡೆಯುತ ವರ

ತಾಪಸಿಯೆನಿಸಿದೆ ಇಳೆಯೊಳು 2

ಶ್ರೀಪಾದರಾಜರ ನೀ ಪಡೆದೊಲುಮೆಯ

ಗೋಪಿಕಂದನ ಕುಣಿಸಿದೆ 3

ಮರಳಿ ಪರಿಮಳವಿರಚಿಸಿ ಧರೆಯೊಳು

ಮೆರೆಯುವ ಗುರು ರಾಘವೇಂದ್ರಾರ್ಯ 4

ವಂಧ್ಯಾಂಧರಿಗೆ ಸುಕಂದರಕ್ಷಿಗಳ

ಕುಂದದೆ ಕೊಡಿತಿಪ್ಪ ಯತಿವರ 5

ವಾತಜಾತನ ಮಾತು ಮಾತಿಲಿ ನೀ ಗೆಲಿದೆ

ಭೂತನಾಥನೆಪರನೆಂಬರಾ 6

ಸ್ವೀಕರಿಸುತಸೇವೆ ಮೂಕ ಬಧಿರರಿಗೆ

ಬೇಕಾದ ವರವಿತ್ತು ಪೊರೆಯುವೆ 7

ಚೂತರಸದಿ ಬಿದ್ದ ಪೋತನ ಸಲಹಿದ

ಖ್ಯಾತನೆ ಬಿನ್ನಪ ಲಾಲಿಸೋ 8

ಎಲ್ಲಿ ಕರೆಯೆ ನೀನಲ್ಲಿ ಬಂದೊದಗುವೆ

ಬಲ್ಲಿದ ಮಹಿಮನೆ ಬಹುಬೇಗ 9

ಇನಕುಲೇಶನ ಪಾದವನಜಾರಾಧಕ ಎನ್ನ

ಮನದಭಿಲಾಷೆಯ ಸಲಿಸಯ್ಯಾ 10

ಒಂದರಿಯದ ಬಲು ಮಂದಮತಿಯು ನಾನು

ತಂದೆ ಎನ್ನಪರಾಧ ಕ್ಷಮಿಸಯ್ಯಾ 11

ದಂಡಕಾಷಾಯಕಮಂಡಲಭೂಷಿತ

ಮಂಡೆಯ ಬಾಗಿ ನಾ ನಮಿಸುವೆ 12

ಮಾತುಮಾತಿಗೆ ನೆನೆವಾತುರ ಕೊಡು ನಿನ್ನ

ವಾತಜಸುಮತಾಬ್ಧಿಚಂದಿರ 13

ಸಂತತ ನಿನ್ನನು ಚಿಂತಿಪರಿಗೆ ಬಹು

ಚಿಂತೆ ಕಳೆವ ಮಂತ್ರಮಂದಿರಾ 14

ತಾಪಸರೊಡೆಯ ಹೃತ್ತಾಪ ನಿವಾರಿಸೋ

ನಾ ಪಾದಪಿಡಿವೆ ಕೃಪಾಕರ 15

ಕಂಡವರನು ಬೇಡಿ ಬೆಂಡಾದೆ ತವಪಾದ

ಪುಂಡರೀಕದಿ ಮನ ನಿಲ್ಲಿಸಯ್ಯಾ 16

ಮುಂದಾರಿಗಾಣದೆ ನೊಂದೆನೋ ತವಪಾದ

ಸಂದರುಶನವನು ನೀಡಯ್ಯಾ 17

ಶೆರಗೊಡ್ಡಿ ಬೇಡುವೆ ಪರಿಮಳಾರ್ಯನೆ ನಿನ್ನ

ಕರುಣಬಾರದೆ ಇನ್ನು ಎನ್ನೊಳು 18

ನಿನ್ನನೆ ನಂಬಿನ್ನು ಅನ್ಯರಿಗಾಲ್ಪರಿಯೆ

ಎನ್ನಮನವ ನೀನರಿಯೆಯಾ 19

ಮೋದದಿ ದಾಸರ ಪಾದಧೂಳಿಯಲಿ

ಸಾಧುವರಿಯ ಹೊರಳಾಡಿಸೋ 20

ತುಂಗಾತಟದ ಯತಿಪುಂಗವ ಹೃದ-

ಯಾಂತರಂಗದಲ್ಲಿಪ್ಪನ ತೋರಯ್ಯ 21

ಕರಕರಿಗಾರದೆ(?) ಮೊರೆಹೊಕ್ಕೆ ಎನ್ನನು

ಮರೆಯುವುದುಚಿತವೆ ಗುರುವರನೆ 22

ಜನನಿಜನಕ ನೀನೆ ವಿನಯದಿ ಬೇಡುವೆ

ಘನಮಹಿಮನೆ ದಯವಿರಲಯ್ಯಾ 23

ಕೂಸಿನ ಜನನಿ ನಿರಾಶೆಗೊಳಿಪಳೆ

ದೊಷದೂರನೆ ಆಸೆಪೂರ್ತಿಸೋ 24

ಅನ್ಯರ ಭಜಿಸದೆ ನಿನ್ನನೆ ಭಜಿಸುವೆ

ಮನ್ನಿಸದಿರುವರೆ ಗುರುವರ 25

ಕುಂಭಿಣಿಯೊಳು ನಿನ್ನ ನಂಬಿದಜನ ಬಲು

ಸಂಭ್ರಮದೊಳಗಿರುತಿಹರಯ್ಯಾ 26

ಏಕಮನದಿ ನಮ್ಮ ಶ್ರೀಕರವಿಠಲನ್ನ

ಲೋಕದೊಳ್ ಪರನೆಂದು ಸಾರಿದಾ 27

***