ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ
ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ
ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1
ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2
ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3
****
ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ ||ಪ||
ನಂಬಿ ಭಜಿಸುವ ಮನದ ಭಕುತರ
ಮನದ ಹಂಬಲ ನೀಡುವರೆ, ನೀರೇ ||ಅ.ಪ||
ಸುರರೊಡೆಯನೋಲ್ ಪರಿಪರಿಯಲೈಶ್ವರ್ಯದಿಂ ರಾಜಿಸುವರ್ಯಾರೇ
ಹರಿಕಥಾಮೃತ ಗ್ರಂಥ ವಿರಚಿಸಿ ಧರಣಿಸುರರುದ್ಧರಿಸಿದವರೆ ||೧||
ಫುಲ್ಲಲೋಚನೆ ಬಲ್ಲೆಯಾ ಇವರಿಲ್ಲಿರುವ ಕಾರಣವಿದೇನೆ
ಫುಲ್ಲನಾಭನ ಹುಡುಕತಲೀ ಪ್ರಹ್ಲಾದನನುಜ ಸಹ್ಲಾದರಿವರೆ ||೨||
ಜಲಜ ತುಲಸಿಮಣಿ ಸುಮಾಲಿಕೆ ಗಳದಿ ಧರಿಸಿಹನ್ಯಾರೆ , ನೀರೇ
ಕಲಿಯುಗದಿ ಕಮಲಾಪತಿ ವಿಠಲನ ಒಲಿಸಿದಿಳೆಯೊಳಗೆ ಮೆರೆವರೆ ||೩||
***