Showing posts with label ಆಶಾವಿಡಿದು ಬಂದಿಹೆ ದೇಶಿಗ ನಾನು ಅಭಿಲಾಷೆ prasannavenkata AASHAVIDIDU BANDIHE DESHIGA NAANU ABHILAASHE. Show all posts
Showing posts with label ಆಶಾವಿಡಿದು ಬಂದಿಹೆ ದೇಶಿಗ ನಾನು ಅಭಿಲಾಷೆ prasannavenkata AASHAVIDIDU BANDIHE DESHIGA NAANU ABHILAASHE. Show all posts

Thursday, 7 November 2019

ಆಶಾವಿಡಿದು ಬಂದಿಹೆ ದೇಶಿಗ ನಾನು ಅಭಿಲಾಷೆ ankita prasannavenkata AASHAVIDIDU BANDIHE DESHIGA NAANU ABHILAASHE

by ಪ್ರಸನ್ನವೆಂಕಟದಾಸರು
ಆಶಾವಿಡಿದು ಬಂದಿಹೆ ದೇಶಿಗ ನಾನು ಅಭಿಲಾಷೆ 
ಪೂರಿಸೆಮ್ಮಯ್ಯ ಶೇಷಗಿರಿಯ ತಿಮ್ಮ್ಮಯ್ಯ ಪ.

ಘೊರ ಭವಾರಣ್ಯದಲ್ಲಿ ದಾರಾಪತ್ಯಬಂಧು 
ಜನರೆಂಬಕ್ರೂರಮೃಗಾಸ್ಯಕೆ ಸಿಲುಕಿ 
ದಾರಿವರಿಯೆನಾರಸಿಂಹ ನಿನ್ನವರು ತೋರಿದರು 
ಶ್ರೀಮಂಗಳಮೂರುತಿಯ ಕಂಡು 
ಸುಖಸಾರಾಮೃತವುಣ್ಣಲಾಗಿ 1

ಒಡಲಿಗೋಸುಗವೃತ್ತಿಹಿಡಿದು ತಡವರಿಸುತ
ಕಡೆಗಾಣದೊರಲಿ ಅಂಜ್ಯೋಡುತಿರಲುಒಡೆಯ 
ನಿನ್ನಯ ಸಿರಿಸಡಗರ ನಾಮಕೇಳಿಹುಡುಕುತ 
ನಲಿವಿಂದ ಬಡತನ ಹಿಂಗಲೆಂದು 2

ಈಗಿದೆÉೀ ವೈಕುಂಠವೆಂದುಭೋಗಿವಾಸುದೇವ
ನೆಂದುಬಾಗಿಶ್ರುತಿಸ್ಮøತಿಗಳು ಕೂಗುತಲಿವೆಯೋಗಿ
ಪ್ರಸನ್ವೆಂಕಟ ಭಾಗವತರ ಪ್ರಿಯನೆಂದುಹೀಗೆ 
ಘನಗೋಳಿಡುತ ನಾ ನೀಗುವೆ ಚಿಂತೆಯನೆಂದು 3
***