Showing posts with label ಳಳ- ಕನ್ನಡ ಗೀತೆ- ಎಲ್ಲಾದರು ಇರು ಎಂತಾದರು ಇರು ELLAADARU IRU ENTAADARU IRU. Show all posts
Showing posts with label ಳಳ- ಕನ್ನಡ ಗೀತೆ- ಎಲ್ಲಾದರು ಇರು ಎಂತಾದರು ಇರು ELLAADARU IRU ENTAADARU IRU. Show all posts

Monday, 27 September 2021

ಎಲ್ಲಾದರು ಇರು ಎಂತಾದರು ಇರು others ELLAADARU IRU ENTAADARU IRU

 



p kalinga rao

- ಕುವೆಂಪು

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ ||

ಕನ್ನಡ ಗೋವಿನ ಓ! ಮುದ್ದಿನ ಕರು

ಕನ್ನಡತನವೊಂದಿದ್ದರೆ ನೀ ಯಮ್ಮಗೆ ಕಲ್ಪತರು


ನೀ ಮೆಟ್ಟುವ ನೆಲ ಅದೇ ಕರ್ನಾಟಕ

ನೀ ನೇರುವ ಮಲೆ ಸಹ್ಯಾದ್ರಿ

ನೀ ಮುಟ್ಟುವ ಮರ ಶ್ರೀಗಂಧದ ಮರ

ನೀ ಕುಡಿಯುವ ನೀರ್ ಕಾವೇರಿ

ಪಂಪನ-ನೋದುವ ನಿನ್ನ ನಾಲಿಗೆ ಕನ್ನಡವೇ ಸತ್ಯ

ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ


ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಪೆಮ್ಪಿನ ಬನವಾಸಿಗೆ ಕರಗುವ ಮನ

ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ

ಜೋಗದ ಜಲಪಾತದಿ ಧುಮುಕುವ ಮನ

ಮಲೆನಾಡಿಗೆ ಹೊಂಕುಳಿ ಹೋಗುವ ಮನ


ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಮಾವಿನ ಹೊಂಗೆಯ ತಳಿರಿನ ತಂಪಿಗೆ

ರಸ ರೋಮಾಂಚನಗೊಳುವಾ ತನ ಮನ

ಎಲ್ಲಿದ್ದಾರೆ ಏನ್ ಎಂತಿದ್ದರೆ ಏನ್ ?

ಎಂದೆಂದಿಗೂ ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಅನ್ಯವೆನಲದೆ ಮಿಥ್ಯ

***

- Kuvempu

ellAdaru iru entAdaru iru

endendigU nee kannaDavAgiru

kannaDavE satya kannaDavE nitya ||

kannada gOvina O! muddina karu

kannadatana-vondiddare nee yammage kalpataru


nee meTTuva nela adE karnATaka

nee nEruva male sahyAdri

nee muTTuva mara shrigandhada mara

nee kuDiyuva neer kAvEri

pampana-nOduva ninnA nAlage kannaDavE satya

kumAravyAsana Alipa kiviyadu kannaDavE nitya


harihara rAghavarige eraguva mana

hALAgiha hampege koraguva mana

pempina banavAsige karaguva mana

beLgoLa bEloorgaLa neneyuva mana

jOgada jalapAtadi dhumukuva mana

malenADige honkuLi hOguva mana


kAjANake giLi kOgile impige

mallige sampige kEdage sompige

mAvina hongeya taLirina tampige

rasa rOmAnchanagoLuvA tana mana

elliddare En entiddare En ?

endendigu taan kannaDavE satya kannaDavE nitya

anyavenalade mithya

***