Showing posts with label ಗುರುವರದೇಂದ್ರ ದಯಾ pranesha vittala varadendra teertha stutih. Show all posts
Showing posts with label ಗುರುವರದೇಂದ್ರ ದಯಾ pranesha vittala varadendra teertha stutih. Show all posts

Friday, 27 December 2019

ಗುರುವರದೇಂದ್ರ ದಯಾ ankita pranesha vittala varadendra teertha stutih

by ಪ್ರಾಣೇಶದಾಸರು
ಗುರುವರದೇಂದ್ರ ದಯಾಂಬುಧೇ ಶರಣಾಗತ ವತ್ಸಲ ಈಶ |ಚರಣಕಮಲಷಟ್ಪದ ಪಾಲಿಸು ಕಾಷಾಯವಸನಭೂಷಾ ಪ

ದುರ್ಮತಭುಜಗಕುಘರ್ಮ ವಿನಾಯಕಕರ್ಮಬದ್ಧವ್ರತಾ |ಶರ್ಮತ್ರಿಧರ ಪ್ರಿಯ ಧರ್ಮಾಸಕ್ತನೆ ನಿರ್ಮಲ ಶುಭಚರಿತಾ ||ಭರ್ಮ ಸಮಾಂಗ ಅಧರ್ಮ ಶಿಕ್ಷಕರಿಚರ್ಮಾಂಬರ ಪ್ರೀತ |ಕಿರ್ಮೀರಾರಿ ಸುಶರ್ಮ ತೀರ್ಥಸಖಕರ್ಮಂದಿಪ ನಾಥ 1

ಶ್ರೀ ಮನೋರಮ ಸು ತ್ರಿಧಾಮದೇವ ಶ್ರೀರಾಮ ಪದಾಸಕ್ತಾ |ಕಾಮಿತ ಫಲದಧರಾಮರವಂದಿತ ಸ್ವಾಮಿ ನಮಿಪ ಭಕ್ತ ||ಶ್ರೀಮಂದಾರಅನಾಮಯ ಸದ್ಗುಣಧಾಮನೆ ಸುವಿರಕ್ತಾ |ಪಾಮರದೂರ ಲಲಾಮ ವದಾನ್ಯ ಮಹಾಮಹಿಮನೆ ಶಕ್ತ 2

ಮಾನಿ ಪೂಜ್ಯ ಸುಜ್ಞಾನಿ ಧೀರ ಸದ್ಭಾನುಚಂದ್ರ ಭಾಸ |ದೀನ ಪೋಷಕ ನಿಜಾನುಗ ಪಾಲಕ ಕ್ಷೋಣಿಪ ನಿರ್ದೋಷ ||ಸಾನುರಾಗದಲಿ ಪೋಣಿಸುಸನ್ಮತಿಮೌನಿ ಕುಲಾಧೀಶ |ನೀನಲ್ಲದೆ ಶ್ರೀ ಪ್ರಾಣೇಶ ವಿಠ್ಠಲ ತಾನೊಲಿಯನು ಲೇಶ 3
*******