ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವಿನರಿಯದಾರಂಭ ತೋರುವುದ್ಯಾತಕೆ ಡಂಭ ಸುರಮುನಿಗಳಿಗಿದು ಗುಂಭ ಗುರುಮಾರ್ಗವಾಗಿರಾಲಂಬ 1
ಹೃದಯದೊಳಿರಲಙÁ್ಞನ ತುದಿನಾಲಗಿಲ್ಯಾತಕ ಙÁ್ಞನ ಇದು ನಿಜ ಮೋಹಿಸು ಖೂನ ಸಾಧಿಸುದಲ್ಲ ನಿಧಾನ 2
ಅಳಿಯದೆ ಕಾಮಕ್ರೋಧ ಹೊಳುವದ್ಯಾತಕೆ ಬೋಧ ತಿಳಿಯದೆ ಶ್ರೀಗುರುಪಾದ ಬೆಳಿಸುವದ್ಯಾತಕೆ ವಿವಾದ 3
ತತ್ವನರಿಯದ ಕವಿತ್ವ ಯಾತಕಿದು ಅಹಮತ್ವ ಸತ್ವದೊಳಾಗದೆ ಕವಿತ್ವ ಮಿಥ್ಯವಿದ್ಯಾತಕೆ ಮಹತ್ವ 4
ಆಶಿಯನಳಿದರೆ ಸಾಕು ವೇಷದೋರುದ್ಯಾತಕೆ ಬೇಕು ಹಸನಾದರ ರಸಬೇಕು ಭಾಸುದು ಮಹಿಪತಿ ಘನಥೋಕು 5
****