ಸ್ತ್ರೀಯರು ದೀಪ ಹಚ್ಚುವ ಸ್ತುತಿ
ಹರಿದಾಸಿತಾಯಿ ಹರಪನಹಳ್ಳಿ ಭೀಮವ್ವನವರ ರಚನೆ
ಅನಂತಾನಂತಕಲ್ಯಾಣ ಗುಣಪೂರ್ಣನು ಆದಂಥಹ, ಅನಂತೋತ್ತಮನು, ಬ್ರಹ್ಮಾಂಡೋತ್ಪಾದಕನೂ ಆದ ನೀನು, ನಮ್ಮನ್ನು ನಿಮಿತ್ತಮಾತ್ರ ಇಟ್ಟಿದ್ದೀ.
ಪಾತ್ರೆಯಲ್ಲಿ ಬ್ರಹ್ಮದೇವರ ಸನ್ನಿಧಾನ,
ತೈಲದಲ್ಲಿ ನಿಮ್ಮ ಕಾಂತೇ ಲಕ್ಷ್ಮಿಯ ಸನ್ನಿಧಾನ,
ಬತ್ತಿಯಲ್ಲಿ ವಾಸುದೇವ ಸಂಕರ್ಷಣನ ಸನ್ನಿಧಾನ,
ಬಿಳುಪಿನಲ್ಲಿ ವಾಯುದೇವರ ಸನ್ನಿಧಾನ,
ಕೆಂಪಿನಲ್ಲಿ ಇಂದ್ರದೇವರ ಸನ್ನಿಧಾನ,
ಕಪ್ಪಿನಲ್ಲಿ ರುದ್ರದೇವರ ಸನ್ನಿಧಾನ,
ಇಷ್ಟುಮಂದಿ ತುಂಬಿರುವ,
ಅಜ್ಞಾನ ನಾಶಮಾಡುವ ಈ ದೀಪ ನಿಮ್ಮ ಪಾದಕ್ಕೆ ಸಮರ್ಪಣೆ.
ತೈಲಕ್ಕೂ ಕಾರ್ಯಕ್ಕೂ ಲಕ್ಷ್ಮೀದೇವಿಯ ಸನ್ನಿಧಾನ,
ಬತ್ತಿಯಲ್ಲಿ ಶ್ರೀಕೃಷ್ಣಪರಮಾತ್ಮನಾದಂಥಹ ಶ್ರೀ ಲಕ್ಷ್ಮೀನಾರಾಯಣನ ಸನ್ನಿಧಾನ.
ಇಂಥಾ ಲಕ್ಷ್ಮೀನಾರಾಯಣನ ದೀಪ ಹಚ್ಚಿದರೆ ಬೆಳಕು,
ಹಚ್ಚದಿದ್ದರೆ ಕತ್ತಲೆ ಎಂಬುವಂಥಾದ್ದು ಇಲ್ಲ.
ನಿಮ್ಮ ಬೆಳಕೇ ಬೆಳಕು.
ನಿಮ್ಮ ಪ್ರಕಾಶವೇ ಕೋಟಿ ಸೂರ್ಯಪ್ರಕಾಶ.
ನಿಮ್ಮ ಕಾಂತಿಯೇ ಕಾಂತಿ.
ಎನ್ನ ಹೃದಯದಲ್ಲಿ ಅಜ್ಞಾನಾಂಧಕಾರ ತುಂಬಿದ್ದೀರಿ.
ಈ ಅಜ್ಞಾನ ಅಂಥಕಾರ ಬಿಡಿಸಿ ಜ್ಞಾನ ಭಕ್ತಿ ವೈರಾಗ್ಯ ಕೊಟ್ಟು ರಕ್ಷಿಸಬೇಕೆಂದು ಹಚ್ಚುವಂತಹ ಈ ದೀಪ ಭೀಮೇಶ ವಿಠಲನಿಗೆ ಅರ್ಪಿತ
ತಾಯಿ ಹರಪನಹಳ್ಳಿ ಭೀಮವ್ವ ವಿರಚಿತ ದೀಪಸ್ತೋತ್ರಮ್ ಸಂಪೂರ್ಣಂ
***