ಆತ್ಮನೀವೇದನೆಯ ಕೃತಿ
ಆಕಾರವಿಲ್ಲದ ಅನಾದಿಯೊಳು ಪಂತ
ಸಾಕಾರನಾಗಿಹನು ಶ್ರೀ ಲಕ್ಷ್ಮೀಕಾಂತ ಪ
ಕುಸುಮಶರನೆ ಪೂವು ಅದರೊಳಗಿಲ್ಲ
ಎಸೆಯೆ ಕೋದಂಡ ಕಬ್ಬೈಸೆ ಧನುವಲ್ಲ
ಹೊಸ ಬಗೆಯಾಗಿ ನಾಂಟದ ಸರಳಲ್ಲ
ವಿಷಮ ವಿಗ್ರಹಕಿನ್ನು ಕೇಳ್ ಪ್ರಾಣವಿಲ್ಲ 1
ಮುಂದುವರೆವರೆ ಮೋಹರದೊಳು ತನ್ನ
ಚಂದದಿಂದೊಪ್ಪುವಂಗವ ಕಾಣೆ ಮುನ್ನ
ಕುಂದದಕೇದಗೆಯೆಸಳಿವೆ ನೋಡು ತನ್ನ
ಸಂಧಿಸಿತೇನೊ ಚಿದ್ರೂಪ ಗುಣರನ್ನ 2
ಸರಿಯಲ್ಲದವರೊಳು ಸಮರವ ಮಾಡಿ
ಧುರದೊಳು ಮಿಗೆ ನೊಂದೆನಯ್ಯ ಮೈ ಬಾಡಿ
ಪರಿಹರಿಸೆಲವೊ ಸುರಸತಿಯರ ಮಧ್ಯೆಕೂಡಿ
ಸುರಪುರಪತಿ ದುರಿತವಿರದೊಂದುಗೂಡಿ3
***