Showing posts with label ನೋಡದಿರು ಪರ ಸ್ತ್ರೀಯರ ನೋಡಿದರೆ ಕೇಡಹದು purandara vittala. Show all posts
Showing posts with label ನೋಡದಿರು ಪರ ಸ್ತ್ರೀಯರ ನೋಡಿದರೆ ಕೇಡಹದು purandara vittala. Show all posts

Thursday, 5 December 2019

ನೋಡದಿರು ಪರ ಸ್ತ್ರೀಯರ ನೋಡಿದರೆ ಕೇಡಹದು purandara vittala

ರಾಗ ಆನಂದಭೈರವಿ ಝಂಪೆತಾಳ 

ನೋಡದಿರು ಪರ ಸ್ತ್ರೀಯರ ||ಪ||

ನೋಡಿದರೆ ಕೇಡಹದು ತಪ್ಪದಿದಕೋ ||ಅ||

ನೋಡಿದರೆ ಸ್ತ್ರೀಹತ್ಯವು, ನುಡಿಸಿ ಮಾತಾಡಿದರೆ ಗೋಹತ್ಯವು
ಕಾಡಿದರೆ ಶಿಶುಹತ್ಯವು ಮೈಗೂಡಿದರೆ ಬ್ರಹ್ಮಹತ್ಯವು ||

ಎರಳೆಗಂಗಳರೊಲುಮೆಗೆ ಮರುಳಾಗಿ ಬರಿದೆ ನೀ ಕೆಡಬೇಡವೋ
ದುರುಳ ಯಮಲೋಕದಲ್ಲಿ ಕರೆದೊಯ್ದು ಉರಿಗಂಬವಪ್ಪಿಸುವರೋ ||

ಮರುಳು ಮಾನವನೆ ಕೇಳೋ ಪರಸತಿಯು ಉರಿಯೆಂದು ನೋಡು ನಿತ್ಯ
ವರದ ಪುರಂದರವಿಠಲನ ನೆನೆದರೆ ಸ್ಥಿರವಾದ ಮುಕುತಿಯಹುದು ||
***

pallavi

nODadiru para strIyara

anupallavi

nOdidare kEDahadu tappadidakO

caraNam 1

nODidare strI hatyavu nuDisi mA tADidare gO hatyavu
kADidare shishu hatyavu mai gUDidare brahma hatyavu

caraNam 2

eraLe gangaLeyolumege maruLAgi baride nI keDabEDavO
duruLa yama lOkadalli karedoidu urigaMbavappisuvarO

caraNam 3

maruLu mAnavane kELO para satiyu uriyendu nODu nitya
varada purandara viTTalana nenedare sthiravAda mukutiya hudu

***