RAO COLLECTIONS SONGS refer remember refresh render DEVARANAMA
ಶ್ರೀದೇವಿ ವರಮಂಚಕೆ ಬರುವದೀಗಲೆ
ಸಖಿಯೆ ಬರುವದೀಗಲೆ ಪ
ಕರಿದಂತ ರಚಿತ ಚರಣ ವರಮೌಕ್ತಿಕ ವಿಲಾಸ
ಪರಿಶೋಭಿತ ಪರಿಯಂಕಕೆ ಬರುವದೀಗಲೆ1
ಮಂದರಧರ ಸಮೀರ ವಂದಿತನಂದ ಕುವರÀ
ಕಂದರ್ಪ ಪಿತನ ಸುಖ ಶಯನಕೆ ಬರುವದೀಗಲೆ 2
ಏಣಾಂಕ ಬಿಂಬವದÀನೆ ಸುಶ್ರೋಣಿ ಮಂದಗಮನೆ
ಶ್ರೀ ನಾರಸಿಂಹನ ವರಮಂಚಕೆ ಬರುವದೀಗಲೆ3
****