Showing posts with label ವಾರಿಧಿ ಈರೇಳು ಲೋಕನಾಯಿಕೆ ದೂರ ನೋಡದಲೆ vijaya vittala. Show all posts
Showing posts with label ವಾರಿಧಿ ಈರೇಳು ಲೋಕನಾಯಿಕೆ ದೂರ ನೋಡದಲೆ vijaya vittala. Show all posts

Wednesday 16 October 2019

ವಾರಿಧಿ ಈರೇಳು ಲೋಕನಾಯಿಕೆ ದೂರ ನೋಡದಲೆ ankita vijaya vittala

ವಿಜಯದಾಸ
ವಾರಿಧಿ ಈರೇಳು ಲೋಕನಾಯಿಕೆ ಪ

ದೂರ ನೋಡದಲೆ ಅಪ

ನಿತ್ಯ ಕಲ್ಯಾಣಿ
ವೇದವತಿಯೆ ರುಕ್ಮಿಣಿ
ವೇದ ವೇದಾಂತದಭಿಮಾನಿ ವಾರಿಜ ಪಾಣಿ
ಆದಿ ಮಧ್ಯಾಂತ ಗುಣಮಣಿ
ಭೇದಗೊಳಿಪ ಕಾಮಕ್ರೋಧಗಳೋಡಿಸಿ
ನೀ ದಯದಿಂದಲೆ ಮುಂದೆ ಗತಿಗೆ ಪಂಚ
ಮಾಧವ ಪ್ರಿಯಳೆ 1

ಮಾಯಾ ಕೃತಿ ನಾಮದೊಳಪ್ಪ ಗುಣವಂತೆ
ಕೋಮಲವಾದ ವೈಜಯಂತೆ ಧರಿಸಿದ ಶಾಂತೆ
ಸೋಮಾರ್ಕ ಕೋಟಿ ಮಿಗೆ ಕಾಂತೆ
ತಾಮರಸಾಂಬಕೆ ರಮೆ ಲಕುಮಿ ಸತ್ಯ
ಭಾಮೆ ಭವಾರಣ್ಯ ಧೂಮಕೇತಳೆ
ಯಾಮ ಯಾಮಕೆ ಹರಿ
ನಾಮವ ನುಡಿಸಿ ಉತ್ತಮರೊಡನೆ ಪರಿ
ಣಾಮವನೀಯುತ 2

ಅನೇಕಾಭರಣ ಭೂಷಿತೆ ಧರಣಿಜಾತೆ
ಜ್ಞಾನಿಗಳ ಮನೋಪ್ರೀತೆ
ಆನಂದಲೀಲೆ ವಿಖ್ಯಾತೆ ಆದಿದೇವತೆ
ಕಾಣೆನೆ ದಾನಿ ಇಂದಿರಾದೇವಿ
ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯಧ್ಯಾನದೊಳಿಡುವಂಥ ಜ್ಞಾನ ಭಕುತಿ ಕೊಡು3
********