Wednesday 16 October 2019

ವಾರಿಧಿ ಈರೇಳು ಲೋಕನಾಯಿಕೆ ದೂರ ನೋಡದಲೆ ankita vijaya vittala

ವಿಜಯದಾಸ
ವಾರಿಧಿ ಈರೇಳು ಲೋಕನಾಯಿಕೆ ಪ

ದೂರ ನೋಡದಲೆ ಅಪ

ನಿತ್ಯ ಕಲ್ಯಾಣಿ
ವೇದವತಿಯೆ ರುಕ್ಮಿಣಿ
ವೇದ ವೇದಾಂತದಭಿಮಾನಿ ವಾರಿಜ ಪಾಣಿ
ಆದಿ ಮಧ್ಯಾಂತ ಗುಣಮಣಿ
ಭೇದಗೊಳಿಪ ಕಾಮಕ್ರೋಧಗಳೋಡಿಸಿ
ನೀ ದಯದಿಂದಲೆ ಮುಂದೆ ಗತಿಗೆ ಪಂಚ
ಮಾಧವ ಪ್ರಿಯಳೆ 1

ಮಾಯಾ ಕೃತಿ ನಾಮದೊಳಪ್ಪ ಗುಣವಂತೆ
ಕೋಮಲವಾದ ವೈಜಯಂತೆ ಧರಿಸಿದ ಶಾಂತೆ
ಸೋಮಾರ್ಕ ಕೋಟಿ ಮಿಗೆ ಕಾಂತೆ
ತಾಮರಸಾಂಬಕೆ ರಮೆ ಲಕುಮಿ ಸತ್ಯ
ಭಾಮೆ ಭವಾರಣ್ಯ ಧೂಮಕೇತಳೆ
ಯಾಮ ಯಾಮಕೆ ಹರಿ
ನಾಮವ ನುಡಿಸಿ ಉತ್ತಮರೊಡನೆ ಪರಿ
ಣಾಮವನೀಯುತ 2

ಅನೇಕಾಭರಣ ಭೂಷಿತೆ ಧರಣಿಜಾತೆ
ಜ್ಞಾನಿಗಳ ಮನೋಪ್ರೀತೆ
ಆನಂದಲೀಲೆ ವಿಖ್ಯಾತೆ ಆದಿದೇವತೆ
ಕಾಣೆನೆ ದಾನಿ ಇಂದಿರಾದೇವಿ
ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯಧ್ಯಾನದೊಳಿಡುವಂಥ ಜ್ಞಾನ ಭಕುತಿ ಕೊಡು3
********

No comments:

Post a Comment