Showing posts with label ಸುಮ್ಮನೊಲಿವನೆ ಪರಬೊಮ್ಮನಾದ varaha timmappa. Show all posts
Showing posts with label ಸುಮ್ಮನೊಲಿವನೆ ಪರಬೊಮ್ಮನಾದ varaha timmappa. Show all posts

Friday 27 December 2019

ಸುಮ್ಮನೊಲಿವನೆ ಪರಬೊಮ್ಮನಾದ ankita varaha timmappa

by ನೆಕ್ಕರ ಕೃಷ್ಣದಾಸರು
ರಾಗ ಮಧ್ಯಮಾವತಿ ಆದಿತಾಳ

ಸುಮ್ಮನೊಲಿವನೆ ಪರಬೊಮ್ಮನಾದ 
ತಿಮ್ಮರಾಯ ಸುಮ್ಮನೊಲಿವನೆ? ||ಪ||

ಮಂದವಾರ ದಿವಸದಲ್ಲಿ
ಮಿಂದು ಮಡಿಯನುಟ್ಟುಕೊಂಡು ಗೋ
ವಿಂದ ಎನುತ ನಾಮವಿಕ್ಕಿ
ವಂದನೆಯ ಮಾಡದನಕ ||೧||

ಗರ್ವವನ್ನು ಉಳಿದು ಮನದಿ
ಸಾರ್ವಭೌಮನನ್ನು ನೆನೆದು
ನಿರ್ವಹಿಸಿ ಶೇಷನು ಸುತ್ತಿದ
ಪರ್ವತವನ್ನು ಏರದನಕ ||೨||

ಕಾಸು ದುಡ್ಡು ಚಕ್ರನಾಣ್ಯ
ವೀಸವುಳಿಯದಂತೆ ಬಡ್ಡಿ
ವಾಸಿಯಿಕ್ಕಿ ಗಂಟ ಕಟ್ಟಿ
ಈಸುಕೊಂಡು ಸೂಸದನಕ ||೩||

ದೇಶ ದೇಶದಿಂದ ಕಪ್ಪ
ಗಾಸಿಯಾಗದಂತೆ ತರಿಸಿ
ಕೋಶಕಿಕ್ಕಿ ಕೊಂಬ ಲಕ್ಷ್ಮಿಯ
ಈಶನನ್ನು ನೆನೆಯದನಕ ||೪||

ಗುಡವ ಕದಡಿಕೊಂಡು
ಸಂಗಡ ಕಡಲೆಯನ್ನು ನೆನೆಸಿ ಇಟ್ಟು
ಒಡೆದ ನಾರಿಕೇಳವು ಸಹಿತ
ಒಡೆಯಗೆಂದು ಇಡದ ತನಕ ||೫||

ಆಶಾಪಾಶವನ್ನು ಬಿಟ್ಟು
ದೇಶವನ್ನು ತೊಳಲಿ ಬಳಲಿ
ಕೇಶವಾದಿ ನಾಮದೊಳಗೆ
ವಾಸುದೇವನ ನೆನೆಯದನಕ ||೬||
*****