Showing posts with label ಪಾಲಿಸೋ ದಯಪಾಲಿಸೋ ಗುರುಪಾಲಿಸೋ harivittalesha ಪ್ರಾರ್ಥನಾಷ್ಟಕ rayara prarthana ashtaka. Show all posts
Showing posts with label ಪಾಲಿಸೋ ದಯಪಾಲಿಸೋ ಗುರುಪಾಲಿಸೋ harivittalesha ಪ್ರಾರ್ಥನಾಷ್ಟಕ rayara prarthana ashtaka. Show all posts

Monday, 6 September 2021

ಪಾಲಿಸೋ ದಯಪಾಲಿಸೋ ಗುರುಪಾಲಿಸೋ ankita harivittalesha ಪ್ರಾರ್ಥನಾಷ್ಟಕ rayara prarthana ashtaka

 ankita ಶ್ರೀಹರಿವಿಠಲೇಶ 

ಪ್ರಾರ್ಥನಾಷ್ಟಕ


ಪಾಲಿಸೋ ದಯಪಾಲಿಸೋ ಗುರುಪಾಲಿಸೋ ಪರಿಪಾಲಿಸೋ

ಮೂಲರಾಮ ಪದಾಬ್ಜಭೃಂಗ ಸುಶೀಲ ಮೂರುತಿ ಪಾಲಿಸೋ


ಮಂದಹಾಸ ಮುಕುಂದ ಮಾನಸದಿಂದ ರಾಜಿಪ ಸುಂದರ

ಇಂದಿರೇಶನ ಪೊಂದಿದಾಹೃದಯದಿಂದ ಶೋಭಿಪ ಚಂದಿರಾ

ಬಂದುಬೇಡಿದ ತಂದುನೀಡುವ ವೃಂದಾವನಧುರಂಧರಾ

ತಂದೆ ಕಾಯುವುದೆಮ್ಮ ಶ್ರೀಗುರು ಮಂತ್ರಾಲಯಮಂದಿರಾ 1

ನಂದತೀರ್ಥರ ದುಂದುಭಿ ಧ್ವನಿಯಿಂದ ಪೂರಿತ ಕಂಧರಾ

ನಂದಗೋಪನಕಂದ ಕೃಷ್ಣಮುಕುಂದ ಆಜ್ಞೆಗೆ ಬಂದರಾ

ಎಂದಿಗಾದರು ತಂದೆ ನೀ ಗತಿ ಎಂದರೊಳ್ ಕೃಪಾಸಿಂಧುರಾ

ಪೊಂದಿದೆ ಪದವೃಂದವಂ ಗುರುಮಂತ್ರಾಲಯಮಂದಿರಾ 2

ಸಾಧುಸಂತರ ಮೋದ ಚಿಂತಕ ಶ್ರೀಧರಾ ಸ್ವಜನೋದರಾ

ಯಾದವೇಶನಗಾಧ ಲೀಲೆ ವಿನೋದವಾದ ಯಶೋಧರಾ

ಬಾಧೆಯೊಳ್ ಭವಬಾಧೆ ತಾಳದೆ ಪಾದ ನಂಬಿರಲೀತೆರಾ-

ಗೈದ ಮುನ್ನ ಅಪರಾಧ ನೋಳ್ಪರೆ ಮಂತರಾಲಯಮಂದಿರಾ  3

ಶ್ರೀಶನಿಂದಪರೋಕ್ಷ ಭೂಷಿತ ಭಾಸುರಾಮರ ಭೂಸುರಾ

ದೋಷರಾಶಿವಿನಾಶ ನೇತ್ರ ಯತೀಶ್ವರಾ ನತಧೀಶ್ವರಾ

ಆಶೆಪಾಶೆದುರಾಶೆಯೊಳ್ ಬಲುಘಾಸಿಯಾದೆ ಮುನೀಶ್ವರಾ

ಕೂಸಿನಂದದಿ ಪೋಷಿಸೆನ್ನನು ಮಂತರಾಲಯಮಂದಿರಾ  4

ರಾಘವೇಂದ್ರ ಸದಾಗಮ ಶ್ರುತಮೇಘ(ಮೋಘ?) ಬೋಧ ಮಹಾಸ್ಮೃತಾ

ರಾಘವೇಶನ ಪಾದ ಸಂಸ್ಕೃತ ಯೋಗದೊಳ್ ಬಲುವಿಸ್ತೃತಾ

ನೀಗಲಾರದ ಭೋಗದೊಳ್ ಭವ ಸಾಗದಂತಿದೆ ಶ್ರೀ ಗುರೋ

ಬಾಗಿಬೇಡುವೆ ಬೇಗ ಕೈಪಿಡಿ ಮಂತರಾಲಯಮಂದಿರಾ  5

ವಾಣಿಯಿಂದಭಿಮಾನಿ ತಾನನ ಗಾನಸಂಪದ ಸಾಧನಾ

ಭಾನು ಚಿನ್ಮಯ ಧೇನು ಚಿಂತಿತ ಜ್ಞಾನ ಕೀರ್ತಿ ಮಹಾ ಘನ

ಧ್ಯಾನ ಚಿಂತನ ಗಾನಕೀರ್ತನೆ ಏನು ಇಲ್ಲದ ಹೀನ ನಾ

ಜ್ಞಾನಿ ನೀ ಮತಿಗಾಣಿಸೆನ್ನನು ಮಂತರಾಲಯಮಂದಿರಾ  6

ರಾಮನಾರ್ಚನೆ ನೇಮದಿಂಕೃತ ಶ್ರೀಮಹಾಕರಯುಗ್ಮನೆ

ಕಾಮಿತಾರ್ಥವನೀವ ಕಾರ್ಯ ವಿರಾಮವಿಲ್ಲದ ಭಾಗ್ಯನೆ

ನೀ ಮಹಾತ್ಮನು ನಾ ದುರಾತ್ಮನು ತಾಮಸಾಂದಧಿ ಪಾತನಾ

ಪ್ರೇಮದಿಂ ಪಥಗಾಣಿಸೋ ಪ್ರಭುವೆ ಮಂತರಾಲಯಮಂದಿರಾ  7

ತೀರ್ಥಗಂಗೆಯು ಸಾರ್ಥ ಸಾಧನೆ ತೀರ್ಥ ತೋಯ ಪದಾಂಬುಜಾ

ಆರ್ತರಂ ಸುಕೃತಾರ್ಥಗೈಯುವ ಕೀರ್ತಿ ಕಲ್ಪಧ್ರುಮಂ ನಿಜಾ

ಸ್ವಾರ್ಥದೊಳ್ ದಿನ ಜಾರ್ದು ಪೋದವು ತೀರ್ಥಪಾದ ಸುಧೀಂದ್ರಜಾ

ಪ್ರಾರ್ಥಿಸೆ ಪದ ಭಕ್ತಿಯಿಂ ಕೊಡು ಮಂತರಾಲಯಮಂದಿರಾ  8

ತೀರ್ಥ ಶ್ರೀ ಗುರು ರಾಘವೇಂದ್ರರ ಪ್ರಾರ್ಥಿಸಲ್ ಪದಕೋಮಲಾ

ಮೂರ್ತಿಗೊಂಡಿತು ಪ್ರಾರ್ಥನಾಷ್ಟಕ ಕೀರ್ತನಾಕೃತ ನಿರ್ಮಲಾ

ಪ್ರಾರ್ಥನಾಷ್ಟಕ ಪಾಡಿ ಶ್ರೀಗುರುಚಂದ್ರಿಕಾಮುಖ ಮಂಗಳಾ

ಕೀರ್ತಿ ಶ್ರೀಹರಿವಿಠಲೇಶಗೆ ಸಾಂದ್ರಮಾ ನಿರಲೀಕಲಾ 9

***